ಗಿಫ್ಟಿಂಗ್ ಸುನ್ನ್ಹ ಹಾಗೂ ಎಮ್.ಎನ್.ಜಿ ಫೌಂಡೇಶನ್(ರಿ) ಮಂಗಳೂರು ಇದರ ನೇತೃತ್ವದಲ್ಲಿ ಎಸ್.ವೈ.ಎಫ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ಈದ್-ಉಲ್-ಫಿತರ್ ಹಬ್ಬದ ಪ್ರಯುಕ್ತ ಸಿಹಿತಿಂಡಿ ವಿತರಿಸಿ ಈದ್ ಸಂದೇಶವನ್ನು ಪರಸ್ಪರ ಹಂಚಲಾಯಿತು.
ನಿನ್ನೆ ನಾಡಿನಾಧ್ಯಂತ ಮುಸ್ಲಿಂ ಭಾಂದವರು ಸಡಗರ ಸಂಭ್ರಮದ ಈದ್ ಉಲ್ ಫಿತ್ರ್ ಹಬ್ಬವನ್ನು ಆಚರಿಸುತ್ತಿದ್ದರು. ಇಸ್ಲಾಂ ಧರ್ಮವು ಮಾನವ ಸಮಾಜಕ್ಕೆ ಸಮಾನತೆ “ಸಹಬಾಳ್ವೆ” ಪರಧರ್ಮ ಸಹಿಷ್ಣುತೆ” ಶಾಂತಿ ಸಹೋಧರತೆ” ಸೌಹಾರ್ಧತೆಯನ್ನು ಸಾರಿದೆ. ಈ ನಿಟ್ಟಿನಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ಎಮ್.ಎನ್.ಜಿ. ಫೌಂಡೇಶನ್(ರಿ) ಹಾಗೂ ಗಿಫ್ಟಿಂಗ್ ಸುನ್ನ್ಹ ಹಾಗೂ ಎಸ್.ವೈ.ಎಫ್ ಎಂಬ ಸಮಾಜಮುಖಿ ಸಂಘಟನೆಯ ಸದಸ್ಯರು ನಿನ್ನೆ ಪುತ್ತೂರಿನಲ್ಲಿ ಸಮಾಜದಲ್ಲಿ ವಿವಿಧ ಸೇವೆಯಲ್ಲಿ ನಿರತರಾಗಿರುವ ಘನ್ಯರಿಗೆ ಸಿಹಿತಿಂಡಿ ವಿತರಿಸಿ ಈದ್ ಸಂದೇಶವನ್ನು ಸಾರಿದರು.
ಪುತ್ತೂರು ಮ್ಯಾದೇ ದೇವುಸ್ ಚರ್ಚ್ ನ ಗೌರವಾನ್ವಿತ ಫಾದರ್ ಲಾವರೆನ್ಸ್ ಮಸ್ಕರೇಂಜಸ್, ಪೊಲೀಸ್ ಇನ್ಸ್ಪೆಕ್ಟರ್ ಶಿವರಾಜ್ ಬಸಪ್ಪ ಹಾಗೂ ಸಿಬ್ಬಂದಿಗಳು, ಪುತ್ತೂರು ಸರಕಾರಿ ಆಸ್ಪತ್ರೆಯ ಮೆಡಿಕಲ್ ವಿಭಾಗಾಧಿಕಾರಿಯಾದ ಆಶಾ ಪುತ್ತೂರಾಯ, ಡಾ. ಅಜಯ್ ಕುಮಾರ್ ಹಾಗೂ ಸಿಬ್ಬಂದಿಗಳು, ನಗರ ವ್ಯಾಪ್ತಿಯ ಆರೋಗ್ಯ ವಿಭಾಗದ ಅಧಿಕಾರಿಯಾದ ರಾಮಚಂದ್ರ ಹಾಗೂ ಸಿಬ್ಬಂದಿಗಳಿಗೆ ಸಿಹಿತಿಂಡಿ ಹಂಚುವ ಮೂಲಕ ರಝಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಎಮ್.ಎನ್ .ಜಿ. ಫೌಂಡೇಶನ್(ರಿ) ಇದರ ಕಾರ್ಯನಿರ್ವಾಹಕರಾದ ಬಶೀರ್ ಪರ್ಲಡ್ಕ, ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೋನು ಬಪ್ಪಳಿಗೆ, ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈಧ್ಯಕೀಯ ಸಮಿತಿಯ ಅಧ್ಯಕ್ಷರಾದ ನಝೀರ್ ಬಲ್ನಾಡ್, ಸಾಮಾಜಿಕ ಮುಖಂಡರಾದ ಲ್ಯಾನ್ಸಿ ಮಸ್ಕರೆಂಚಸ್, ಪೌಲ್ ಮೊಂತೇರೊ, ರಾಕೇಶ್ ಮಸ್ಕರೆಂಚಸ್, ಸಂತೋಷ್ ಮೊರಾಸ್ ಹಾಗೂ ಎಸ್.ವೈ.ಎಫ್ ಇದರ ಸಾಮಾಜಿಕ ಮುಂದಾಳುಗಳಾದ ಹನೀಫ್ ಪುಂಚತ್ತಾರ್, ಮಹಮ್ಮದ್ ಆಲಿ ಪರ್ಲಡ್ಕ, ರಶೀದ್ ಮುರ, ಹಂಝತ್ ಸಾಲ್ಮರ, ಇಂತಿಯಾಜ್ಹ್ ಬಪ್ಪಳಿಗೆ, ಇರ್ಫಾನ್ ಸಾಲ್ಮರ, ಶಾನುವಾಜ್ಹ್ ಬಪ್ಪಳಿಗೆ ಹಾಗೂ ಯುವ ಮುಂದಾಳುಗಳಾದ ಶಾಫಿ ಬಪ್ಪಳಿಗೆ, ಹಜ್ಹ್ರತ್ ಬಪ್ಪಳಿಗೆ ಮುಂತಾದವರು ಉಪಸ್ಥಿತರಿದ್ದು, ಮಾನವ ಸಮಾಜಕ್ಕೆ ಈದ್ ಉಲ್ ಫಿತ್ರ್ ಹಬ್ಬದ ಶುಭ ಸಂದೇಶವನ್ನು ಸಾರಿದರು.