dtvkannada

ನಿನ್ನೆ ಬೆಳಗ್ಗೆ ಪುತ್ತೂರು ಬೈಪಾಸ್ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಯುವಕ ಗಂಭೀರ ಗಾಯಗೊಂಡಿದ್ದ. ಮೃತ ಯುವಕ ಕುಂಬ್ರ ಸಮೀಪದ ಅರಿಯಡ್ಕ ನಿವಾಸಿ ಸಿನಾನ್. ವಯಸ್ಸು 18

ಸಿನಾನ್ ನ ಮರಣದ ವಾರ್ತೆಯನ್ನು ಕೇಳಿಸಿಕೊಂಡ ಆ ತಂದೆಗೆ ಅದನ್ನು ಊಹಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ.
ನನ್ನ ಮಗ ಈಗಷ್ಟೇ ನನ್ನಲ್ಲಿ ಮಾತನಾಡಿ ಹೋಗಿದ್ದು ಆತ ಮರಣ ಹೊಂದಲು ಸಾಧ್ಯವೇ ಇಲ್ಲವೆಂಬುದಾಗಿತ್ತು ಅವರ ವಾದ!
ಮನೆಗೆ ಪೆಂಡಲ್ ಹಾಕಲು ಬಂದವರನ್ನೂ ನನ್ನ ಮಗನಿಗೇನು ಆಗೇ ಇಲ್ಲವೆಂದೇಳಿ ವಾಪಾಸು ಕಳುಹಿಸಿದ್ದರು!
ಕೊನೆಗೆ ಮಗನ ಮಯ್ಯತ್ ನಮಾಝ್ ಗೆ ನೇತೃತ್ವ ಕೊಟ್ಟದ್ದೂ ಅದೇ ತಂದೆಯಾಗಿತ್ತು.
ಯಾರಿಗೆ ಊಹಿಸಲು ಸಾಧ್ಯ?
ತನ್ನೊಡನೆ ಮಾತನಾಡುತ್ತಾ, ತಮಾಷೆ ಮಾಡುತ್ತಾ, ನಗು ನಗುತ್ತಾ ಮನೆಯಿಂದ ಹೊರಟು ಹೋದ ಮಗ ರಕ್ತದ ಮಡುವಿನಲ್ಲಿ ಗುರುತು ಸಿಗಲಾರದ ರೂಪದಲ್ಲಿ ನಿಶ್ಚಲವಾಗಿ ಮಲಗಿದರೆ ಸಹಿಸುವುದಾದರೂ ಹೇಗೆ ತಾನೆ ?
ಯಾವ ಹೆತ್ತವರಿಗೂ ಅದನ್ನು ಊಹಿಸಿಕೊಳ್ಳಲು ಸಾಧ್ಯನೇ ಇಲ್ಲ.
ಕಳೆದ ಕೆಲ ವರ್ಷಗಳಿಂದೀಚೆಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ರಕ್ತದ ಮಡುವಿನಲ್ಲಿ ಗುರುತು ಸಿಗಲಾರದ ರೂಪದಲ್ಲಿ ಮಲಗಿದ ಮಯ್ಯತ್ ಗಳಿಗೆ ಲೆಕ್ಕವಿಲ್ಲ.
ಅದೆಲ್ಲವೂ ಕೂಡ ಹದಿಹರೆಯದ ಯುವಕರು!
ಅದರಲ್ಲೂ ಕಳೆದ ಕೆಲ ವರ್ಷಗಳಿಂದೀಚೆಗೆ ಪ್ರತಿಯೊಂದು ಪೆರ್ನಾಳ್ ಸಂದರ್ಭದಲ್ಲೂ ಇಂತಹ ಘಟನೆಗಳು ಮರುಕಳಿಸುತ್ತಲೇ ಇದೆ!

ಪ್ರತಿಯೊಂದು ಮರಣ ಸಂಭವಿಸಿದಾಗಲೂ ಒಂದಷ್ಟು ದಿನ ನಾವು ಜಾಗೃತರಾಗುತ್ತೇವೆ.
ಮತ್ತದೇ ಪುನರಾವರ್ತನೆಗಳು.
ಇವತ್ತಿನ ಮರಣ ಸಂಭವಿಸಿದಾಗಲೂ ಪೊಲೀಸರೊಬ್ಬರು ಹೇಳ್ತಾ ಇದ್ದರು ಯಾವ ಸಮಯದಲ್ಲೂ ಸಹಾಯಕ್ಕೆ ಧಾವಿಸಿ ಬರುವವರೂ ಮುಸ್ಲಿಂ ಯುವಕರೇ, ಆದರೆ ಟ್ರಾಫಿಕ್ ನಿಯಮವನ್ನು ಅಧಿಕವಾಗಿ ಉಲ್ಲಂಘಿಸಿ ವಾಹನ ಸವಾರಿ ಮಾಡುವುದೂ ನಿಮ್ಮವರೇ ಎಂದಾಗಿತ್ತು!.


ಯಾವುದಾದರೂ ಹಬ್ಬ ಬಂದರೆ ಗೆಳೆಯರೊಡನೆ ಟ್ರಿಪ್ ಹೋಗುವುದು, ಜ್ವಾಲಿ ರೈಡ್ ನಡೆಸುವುದು ಒಂದು ಟ್ರೆಂಡ್ ಆಗಿ ಮಾರ್ಪಟ್ಟಿರುವ ಸಂದರ್ಭದಲ್ಲಿ ಉಪದೇಶಗಳು ಉಪದ್ರಗಳಾಗಿ ಕಾಣುವ ನವ ತರುಣರೊಂದಿಗೆ ಮಾತಿಗಳಿಯುವುದೇ ಸಾಹಸದ ಕಾರ್ಯವಾಗಿರುತ್ತದೆ.
ಈ ನಿಟ್ಟಿನಲ್ಲಿ ಹೆತ್ತವರು ಸಾಧ್ಯವಾದಷ್ಟು ತಮ್ಮ ಮಕ್ಕಳ ಕುರಿತಾಗಿ ಜಾಗೃತೆ ವಹಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.
ವಾಹನದ ಯಾವುದೇ ಭಾಗಗಳಿಗೂ ಕೇಡು ಸಂಭವಿಸಿದರೆ ಅದನ್ನು ರಿಪೇರಿ ಮಾಡಿಸಿಕೊಳ್ಳಬಹುದು, ಮನುಷ್ಯ ಜೀವಕ್ಕೆ ಏನಾದರೂ ಅಪಾಯ ಸಂಭವಿಸಿದಲ್ಲಿ ಅದು ಸಹಜ ಸ್ಥಿತಿಗೆ ಬರಲು ತುಂಬಾ ಕಷ್ಟವಾದೀತು.
ಅಂತಹ ಸನ್ನಿವೇಶಗಳಿಂದ ನಮ್ಮೆಲ್ಲರನ್ನೂ ರಕ್ಷಿಸಲಿ.
ಮೃತಪಟ್ಟ ಸಿನಾನ್ ನ ಕುಟುಂಬಕ್ಕೆ ದೇವರು ಸಹನೆಯನ್ನು ದಯಪಾಲಿಸಲಿ. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿರುವ ಇನ್ನೋರ್ವ ಸಹೋದರ ಆದಷ್ಟು ಬೇಗ ಗುಣಮುಖನಾಗಲಿ –

By dtv

Leave a Reply

Your email address will not be published. Required fields are marked *

error: Content is protected !!