ಉಪ್ಪಿನಂಗಡಿ: ಸ್ಕೂಟರ್ ಸ್ಕಿಡ್ ಆಗಿ ಇಬ್ಬರು ಗಾಯಗೊಂಡ ಘಟನೆ ತೆಕ್ಕಾರಿನ ನೆಲ್ಲಿಪಲಿಕೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಗಾಯಾಳುಗಳನ್ನು ಗೋದಾಮುಗುಡ್ಡೆ ನಿವಾಸಿಗಳಾದ ಜಮಾಲ್ ಮದನಿ ಮತ್ತು ಜಾಫರ್ ಎಂದು ಗುರುತಿಸಲಾಗಿದೆ.
ಬಾಜಾರುನಿಂದ ನೆಲ್ಲಿಪಳಿಕೆಯತ್ತ ಸಂಚರಿಸುತ್ತಿದ್ದಾಗ ಸ್ಕೂಟರ್ ಸ್ಕಿಡ್ ಆಗಿದ್ದು ಇಬ್ಬರಿಗೆ ಗಾಯಗಳಾಗಿವೆ.ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ತಿಳಿದು ಬಂದಿದೆ.