ಎನ್ ಹಾಸ್ ಇಂಡಿಯಾ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿದೆ ವಿವಿಧ ಪೋಸ್ಟರ್ ಗಳು. ಹೌದು..
ಸುನ್ನೀ ತಾತ್ವಿಕ ನಿಲುವಿನಲ್ಲಿ ಕಟು ಬದ್ಧರಾಗಿ ಪರಿಪೂರ್ಣವಾದ ಅಹ್ಲುಸ್ಸುನ್ನತ್ ವಲ್ ಜಮಾಅತ್ತಿನ ಆಶಯ ಆದರ್ಶಗಳನ್ನು ಬಿಗಿದಪ್ಪಿ ಹಿಡಿದು ಉಲಮಾ ಸಾರಥ್ಯಗಳ ಹಾದಿಯಲ್ಲಿ ಮುನ್ನಡೆದ ಸುನ್ನೀ ವಿದ್ಯಾರ್ಥಿಗಳು ಅತೀ ದೊಡ್ಡ ಸಂಘಟನೆಯಾಗಿದೆ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ S,S,F
ಧಾರ್ಮಿಕ, ಸಂವಿಧಾನ, ದೇಶ, ಇವುಗಳಲ್ಲಿ ಯಾವತ್ತಿಗೂ ಯಾರೊಂದಿಗೂ ರಾಜಿಯಾಗದೆ ಸತ್ಯ ಪರ ಸಮರ ಸಾರುತ್ತಿರುವ ನಿಷ್ಕಲಂಕ ವಿದ್ಯಾರ್ಥಿಗಳ ಸಮೂಹವಾಗಿದೆ ಈ ಎಸ್.ಎಸ್.ಎಫ್.
ಹೌದು ಈ ಬಾರಿ ಎಸ್.ಎಸ್.ಎಫ್ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ, ತನ್ನ ನಿಷ್ಕಲಂಕವಾದ ಕಾರ್ಯಾಚರಣೆ ಮೂಲಕ ಈ ಸಮಾಜದಲ್ಲಿ ಇಸ್ಲಾಮಿ ತತ್ವಗಳನ್ನು ಪೂರೈಸುತ್ತಿರುವ ವಿದ್ಯಾರ್ಥಿ ಸಂಘಟನೆಗೆ ಐವತ್ತ ರ ಸಂಭ್ರಮ.
ಏಕ ಕಾಲದಲ್ಲಿ ರಾಷ್ಟ್ರದ ಇಪ್ಪತ್ತು ರಾಜ್ಯಗಳಲ್ಲಿ ಇಂದು (ಮೇ 8 ರಂದು) ಸುನ್ನೀ ವಿದ್ಯಾರ್ಥಿಗಳ ರಣ ಕಹಳೆ ಮೊಳಗಲಿದೆ.
ಈ ಸಂಘ ಶಕ್ತಿಯ ಹಿಂಬದಿಯಲ್ಲಿ ಹಲವಾರು ಹಿತೈಷಿಗಳು ಸಾಥ್ ನೀಡಲಿದ್ದಾರೆ.
ಅದೊಂದು SSF ನ ಚರಿತ್ರೆಯ ಪುಟಗಳಲ್ಲಿ ಬರೆದಿಡಬೇಕಾದ ಅರ್ಥ ಪೂರ್ಣ ಕಾರ್ಯಕ್ರಮವಾಗಲಿದೆ.
SSF ಇಂಡಿಯಾ ಆಯೋಜಿಸುವ ಎನ್-ಹಾಸ್ ಕಾರ್ಯಕ್ರಮ ಇಂದು ಕರ್ನಾಟಕದ ಮಂಗಳೂರಿನ ಅಡ್ಯಾರ್ ಕಣ್ಣೂರಿನಲ್ಲಿ ನಡೆಯಲಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸುನ್ನೀ ವಿದ್ಯಾರ್ಥಿಗಳ ಅಪೂರ್ವ ಸಂಗಮವಾಗಲಿದೆ ಇದು.
ಎನ್-ಹಾಸ್ ಇಂಡಿಯಾ ಕಾನ್ಫರೆನ್ಸ್
ಮೇ 8 ಆದಿತ್ಯವಾರ ಸಂಜೆ:3ಕ್ಕೆ
@ಅಡ್ಯಾರ್ ಕಣ್ಣೂರು