ಪುತ್ತೂರು: ಕಳೆದ ಬುಧವಾರ ಪುತ್ತೂರು ಸಮೀಪ ಬೈಪಾಸ್ ಬಳಿ ರಸ್ತೆ ಅಪಘಾತವಾಗಿ ಗಂಭೀರ ಗಾಯಗೊಂಡಿದ್ದ ಪುತ್ತೂರು ಸಂಟ್ಯಾರ್ ಸಮೀಪದ ಮಹಮ್ಮದ್ ಹಾಶಿರ್ ಇದೀಗ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬುಧವಾರ ಬೆಳಗ್ಗೆ ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್ ಆಗಿ, ಸವಾರರಿಬ್ಬರು ರಸ್ತೆಗೆಸಯಲ್ಪಟ್ಟಿದ್ದರು. ಕೂಡಲೇ ವಿರುದ್ಧ ಧಿಕ್ಕಿನಿಂದ ಬಂದ ಟಿಪ್ಪರ್ ಲಾರಿ ಇವರ ಮೇಲೆ ಹರಿದಿತ್ತು.
ಭೀಕರ ದುರ್ಘಟನೆಯಲ್ಲಿ ಕುಂಬ್ರ ಸಮೀಪದ ಅರಿಯಡ್ಕ ನಿವಾಸಿ ಸಿನಾನ್ ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬ ಸಹಸವಾರ ಹಾಶಿರ್ ಎಂಬವರು ಗಂಭೀರ ಸ್ವರೂಪದ ಗಾಯಗೊಂಡಿದ್ದರು. ಇದೀಗ ಹಾಶಿರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ದುರ್ಘಟನೆಯಲ್ಲಿ ಕುಂಬ್ರ ಸಮೀಪದ ಅರಿಯಡ್ಕ ನಿವಾಸಿ ಆದಂ ಎಂಬವರ ಮಗ ಸಿನಾನ್ (18) ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಸಂಟ್ಯಾರ್ ನಿವಾಸಿ ಕುಂಞಿಚ್ಚ ಎಂಬವರ ಮಗ ಹಾಸಿರ್ ಅಪ್ಪು(17) ಗಂಭೀರ ಸ್ವರೂಪದ ಗಾಯಗೊಂಡಿದ್ದರು. ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.