dtvkannada

ಕೋಝಿಕ್ಕೋಡ್: ಇತ್ತೀಚೆಗೆ ದುಬೈನಲ್ಲಿ ನಿಗೂಢವಾಗಿ ಮೃತಪಟ್ಟ ಆಲ್ಬಮ್ ನಟಿ ರಿಫಾ ಮೆಹ್ನು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ಪಾವಂತೂರು ಜುಮಾ ಮಸೀದಿ ಸ್ಮಶಾನದಿಂದ(ಖಬರ್ ಸ್ತಾನ್) ಸಬ್‌ ಕಲೆಕ್ಟರ್‌ ಹಾಗೂ ಇತರರ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆಯಲಾಯಿತು. ನಂತರ ಕೋಝಿಕ್ಕೋಡ್ ತಹಸೀಲ್ದಾರ್ ನೇತೃತ್ವದಲ್ಲಿ ಪೊಲೀಸ್ ವಿಚಾರಣೆ ನಡೆಯಿತು. ಘಟನಾ ಸ್ಥಳದಲ್ಲಿ ವಿಧಿವಿಜ್ಞಾನ ತಜ್ಞರು ಕೂಡ ಹಾಜರಿದ್ದರು.

ಈ ಹಿಂದೆ ಚರ್ಚ್ ಆವರಣದಲ್ಲಿ ಮರಣೋತ್ತರ ಪರೀಕ್ಷೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದರು. ಆದರೆ ದೇಹ ಗಣನೀಯವಾಗಿ ಕೊಳೆತು ಹೋಗದ ಕಾರಣ ವೈದ್ಯಕೀಯ ಕಾಲೇಜಿನಲ್ಲಿ ಶವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮೃತದೇಹವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಶವವನ್ನು ಇಂದು (ಶನಿವಾರ) ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ತಿಳಿದುಬಂದಿದೆ

ಪೋಸ್ಟ್‌ಮಾರ್ಟಂ ವರದಿಯಿಂದ ಸಾವಿನ ನಿಗೂಢತೆ ಹೊರಬರುವ ಭರವಸೆ ಇದೆ ಎಂದು ರಿಫಾ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದಾರೆ. ಶವ ಹೊರತೆಗೆಯುತ್ತಿರುವ ವಿಷಯ ತಿಳಿದು ಸ್ಥಳದಲ್ಲಿ ಸಾರ್ವಜನಿಕರು ನೆರೆದಿದ್ದಾರೆ.

ವ್ಲಾಗರ್, ಯೂಟ್ಯೂಬರ್, ಮಳಯಾಲಂ ಆಲ್ಬಂ ನಟಿ ರಿಫಾ ಮೆಹ್ನು, ಮಾರ್ಚ್ 1 ರಂದು ದುಬೈನಲ್ಲಿ ನಿಗೂಢ ಪರಿಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ರಿಫಾ ಸಾವು ಮೊದಲಿನಿಂದಲೂ ನಿಗೂಢವಾಗಿತ್ತು. ಮೃತದೇಹವನ್ನು ದುಬೈನಿಂದ ಊರಿಗೆ ತರಲಾಗಿದ್ದು, ಅಲ್ಲಿ ಶವಪರೀಕ್ಷೆ ನಡೆಸಲಾಯಿತು ಎಂದು ಹೇಳುವ ಮೂಲಕ ತನಗೆ ಮೋಸ ಮಾಡಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಆಕೆಯ ಪತಿ ಮೆಹನಾಜ್ ರಿಫಾ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದರು. ರಿಫಾ ಕುಟುಂಬದವರು ನೀಡಿದ ದೂರಿನ ಮೇರೆಗೆ ಅಧಿಕಾರಿಗಳ ತಂಡವು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಿದೆ.

ರಿಫಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ನಿವಾಸಿ ಮೇಹನಾಸ್ ಹಾಗೂ ಆಕೆಯ ಪತಿ ಮೆಹ್ನೂ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾನಸಿಕ ಮತ್ತು ದೈಹಿಕ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಮೂರು ವರ್ಷಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮೆಹನಾಜ್ ಅವರನ್ನು ರಿಫಾ ವಿವಾಹವಾಗಿದ್ದರು. ರಿಫಾ ತನ್ನ ಪತಿಯೊಂದಿಗೆ ಯೂಟ್ಯೂಬ್ ವಿಡಿಯೋ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದರು.
ಜನವರಿ ಅಂತ್ಯದಲ್ಲಿ ರಿಫಾ ತನ್ನ ಹುಟ್ಟೂರಾದ ಕಾಕ್ಕೂರಿನಿಂದ ವಿದೇಶಕ್ಕೆ ಬಂದಿದ್ದರು. ರಿಫಾ ದುಬೈನ ಕರಾಮಾದಲ್ಲಿ ಡ್ರೆಸ್ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆ ಮಾಡಿಕೊಂಡ ದಿನ ರಾತ್ರಿ 9 ಗಂಟೆ ಸುಮಾರಿಗೆ ರಿಫಾ ತನ್ನ ಎರಡು ವರ್ಷದ ಮಗನ ಜೊತೆ, ಊರಿನಲ್ಲಿರುವ ಪೋಷಕರೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದರು. ಆದರೆ ಮರುದಿನ ಬೆಳಗ್ಗೆ ರಿಫಾ ತಾನು ವಾಸಿಸುತ್ತಿದ್ದ ಮನೆಯಲ್ಲಿ ಮೃತಪಟ್ಟಿದ್ದರು.

ಮಳಯಾಂ ನ್ಯೂಸ್ ವರದಿ

By dtv

Leave a Reply

Your email address will not be published. Required fields are marked *

error: Content is protected !!