ಮಂಡ್ಯ: ಬಾಲಿವುಡ್ ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬದ ಪ್ರಯುಕ್ತ ಮಂಡ್ಯದ ಅಭಿಮಾನಿಗಳ ಬಳಗ ತಾಲೂಕಿನ ಕೊಮ್ಮೇರಹಳ್ಳಿಯಲ್ಲಿ ರಕ್ತದಾನ ಕಾರ್ಯಕ್ರಮ ಆಯೋಜನೆ ಹಮ್ಮಿಕೊಂಡಿದ್ದರು.

ಮೊನ್ನೆಯಷ್ಟೇ 41 ನೇ ವರ್ಷಕ್ಕೆ ಪಾದಾರ್ಪಣೆಗೈದ ಬಾಲಿವುಡ್ ತಾರೆ ಸನ್ನಿ ಲಿಯೋನ್ ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವುದರಲ್ಲಿ ಯಾವುದೇ ಸಂಶಯವಿಲ್ಲ.
ಹೀಗಿರುವಾಗ ಮಂಡ್ಯದಲ್ಲಿರುವ ಸನ್ನಿ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಜೊತೆಗೆ ಅಭಿಮಾನಿಗಳಿಂದ ರಕ್ತದಾನ ಶಿಬಿರ, ಬಾಡೂಟ ಆಯೋಜಸಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಜೊತೆಗೆ ಲಿಯೋನ್ ಅಭಿಮಾನಿಗಳ ಸಂಘದಿಂದ ಜೊತೆಗೆ ಗ್ರಾಮದ ಹೆಬ್ಬಾಗಿಲಲ್ಲಿ 20 ಅಡಿಗೂ ಉದ್ದದ ಸನ್ನಿ ಫ್ಲೆಕ್ಸ್ ಅಳವಡಿಸಿದ್ದಾರೆ.
ಸನ್ನಿಯ ಸಮಾಜಮುಖಿ ಕಾರ್ಯಗಳನ್ನು ನೆನೆದು ಈ ಸಂಭ್ರಮಾಚರಣೆ ನಡೆಸಿದ್ದಾರೆಂದು ಹೇಳಿಕೊಂಡಿದ್ದಾರೆ.