dtvkannada

ಪುತ್ತೂರು: ಎಸ್.ಎಸ್.ಎಲ್.ಸಿಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಪಡೆದ ದ.ಕ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ತೇಜನಾ ಮತ್ತು ಅಭಿನಂದನಾ ಕಾರ್ಯಕ್ರಮ ಇಂದು ಪುತ್ತೂರು ಕಮ್ಯೂನಿಟಿ ಸೆಂಟರ್ ಮೂಲಕ ನಡೆಯಿತು. 600 ಕ್ಕಿಂತ ಹೆಚ್ಚು ಅಂಕ ಪಡೆದ 15 ವಿದ್ಯಾರ್ಥಿಗಳನ್ನು ಸನ್ಮಾನಿಸಿದರೆ 599 ಅಂಕ ಪಡೆದ ಒಬ್ಬಳು ಸಾಧಕಿಯನ್ನೂ ಈ ಸಂದರ್ಭ ಗೌರವಿಸಲಾಯಿತು.

ರಾಜ್ಯಕ್ಕೆ ಪ್ರಥಮ ಬಂದ 625 ಅಂಕ ಪಡೆದ ವಿಟ್ಲ ನಿವಾಸಿ ಅಬ್ದುಲ್ ಹಮೀದ್ ಮತ್ತು ಆಯಿಷಾ ದಂಪತಿಗಳ ಪುತ್ರ ಮಹಮ್ಮದ್ ಆಶಿಕ್ ರನ್ನು ಸನ್ಮಾನಿಸಿದ ಸೆಂಟರ್, ಇವರಿಗೆ ಏಳು ವರ್ಷ ಸಂಪೂರ್ಣ ಉಚಿತ ಶಿಕ್ಷಣ ನೀಡಲಿದೆ. ಆಶಿಕ್ ರವರು ಬೆಂಗಳೂರು ಪಿಣ್ಯದ ಗುಡ್ ವಿಲ್ ಹೈಸ್ಕೂಲ್ ನ ವಿದ್ಯಾರ್ಥಿಯಾಗಿದ್ದಾರೆ.

ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ:

ಹಲೀಮತ್ ಶೈಮಾ 623 ಅಂಕ, ಪುತ್ತೂರು ಪಾಂಗ್ಲೈ ಬೆಥನಿ ಹೈಸ್ಕೂಲ್, ಮಹಮ್ಮದ್ ಹಂಝ ಕಟ್ಲೇರಿ ಹಾಗೂ ಶಮೀನಾ ಬಾನು ದಂಪತಿಯ ಪುತ್ರಿ.

ಮಹಮ್ಮದ್ ಆಬಿದ್ ಅಲಿ 621 ಅಂಕ, ಇನ್ ಪ್ಯಾಂಟ್ ಮೇರಿ ಸ್ಕೂಲ್ ಕಾಟಿಪಳ್ಳ. ಅಬ್ದುಲ್ ಖಾದರ್ ಜಿಲಾನಿ ಮತ್ತು ಶಮೀನಾ ದಂಪತಿಗಳ ಪುತ್ರಿ.

ಆಯಿಷಾ ರಿಝಾ 619 ಅಂಕ, ಆಯಿಷಾ ಗರ್ಲ್ಸ್ ಹೈಸ್ಕೂಲ್ ಆತೂರು, ಅಬ್ದುಲ್ ರಝಾಕ್ ಮತ್ತು ರಹ್ಮತ್ ಪರ್ಝಾನ ದಂಪತಿಗಳ ಪುತ್ರಿ.

ಫಾತಿಮತ್ ಶಿಭಾ 617 ಅಂಕ, ಗ್ರೀನ್ ವ್ಯೀವ್ ಹೈಸ್ಕೂಲ್, ಸುಳ್ಯ. ಎಸ್.ಎಂ. ಹನೀಫ್ ಮತ್ತು ಕೆ.ಎಂ. ಆಯಿಷಾ ದಂಪತಿಗಳ ಪುತ್ರಿ

ಮಹಮ್ಮದ್ ಮರ್ಝಕ್ ಆಲಿ 614 ಅಂಕ ಚೈತನ್ಯ ಸ್ಕೂಲ್ ಕೃಷ್ಣಾಪುರ. ಅಬ್ದುಲ್ ಮಜೀದ್ ಮತ್ತು ಸೌದತ್ ನೌಶಿ ದಂಪತಿಗಳ ಪುತ್ರ.

ಹಷಾ ಆಯಿಷಾ 613 ಅಂಕ, ಪುತ್ತೂರು ಸುಧಾನದ ವಿದ್ಯಾರ್ಥಿನಿ, ಶಮೀಮ ಮತ್ತು ಹಮೀದ್ ದಂಪತಿಗಳ ಪುತ್ರಿ.

ನುಹಾ ನಫೀಸಾ 612 ಅಂಕ, ಪುತ್ತೂರು ಪಾಂಗ್ಲೈ ಬೆಥನಿ ಹೈಸ್ಕೂಲ್ ನ ವಿದ್ಯಾರ್ಥಿನಿ, ಮಹಮ್ಮದ್ ಶರೀಫ್ ಮತ್ತು ಖತೀಜ ದಂಪತಿಗಳ ಪುತ್ರಿ.

ಫಾತಿಮಾ ಶೈಮಾ 612 ಅಂಕ, ಬದ್ರಿಯಾ ಸ್ಕೂಲ್ ಆತೂರು ಇಲ್ಲಿನ ವಿದ್ಯಾರ್ಥಿ. ಮಹಮ್ಮದ್ ಶರೀಫ್ ಮತ್ತು ಸಾಜಿದ ದಂಪತಿಗಳ ಪುತ್ರಿ.

ಫಾತಿಮಾ ಶಭಾ 612 ಅಂಕ. ಸುಧಾನ ಪುತ್ತೂರು ವಿದ್ಯಾರ್ಥಿನಿ. ಅಬ್ದುಲ್ ಹಮೀದ್ ಮತ್ತು ಸುಮಯ್ಯ ದಂಪತಿಗಳ ಸುಪುತ್ರಿ.

ಷಾಝ್ಮಾ ಆಯಿಷಾ 611 ಅಂಕ, ಸುಧಾನ ಹೈಸ್ಕೂಲ್ ಪುತ್ತೂರು. ಉದಯ ಹನೀಫ್ ಮತ್ತು ಮುನೀರಾ ದಂಪತಿಗಳ ಪುತ್ರಿ.

ಶೈಮಾ ಫಾತಿಮಾ ಟಿ.ಎಂ 608 ಅಂಕ, ದಿ ಬೆಸ್ಟ್ ಹೈಸ್ಕೂಲ್ ಬೆಂಗಳೂರು. ಸವಣೂರು ಪುತ್ತೂರಿನ ವಿದ್ಯಾರ್ಥಿನಿ. ಮುಜಿಬ್ ರಹ್ಮಾನ್ ಮತ್ತು ಸೌದ ದಂಪತಿಗಳ ಪುತ್ರಿ.

ಮರಿಯಂ ಬಿನೆಫರ್ 607 ಅಂಕ, ಹೊಲಿ ಸ್ಪಿರಿಟ್ ಮುಕ್ಕ. ಹನೀಫ್ ಮತ್ತು ಸಫಿಯಾ ದಂಪತಿಗಳ ಪುತ್ರಿ.

ಶಫಾ ಮರಿಯಂ 607 ಅಂಕ, ಸುಧಾನ ಹೈಸ್ಕೂಲ್ ವಿದ್ಯಾರ್ಥಿನಿ. ತಸ್ಲೀಮಾ ಮತ್ತು ಶಂಶುದ್ದೀನ್ ದಂಪತಿಗಳ ಪುತ್ರಿ.

ಅಪ್ರಿನಾ 604 ಅಂಕ. ವಿಕ್ಟರ್ಸ್ ಪುತ್ತೂರಿನ ವಿದ್ಯಾರ್ಥಿನಿ. ಮಹಮ್ಮದ್ ಅಶ್ರಫ್ ಮತ್ತು ನೂರ್ಜಾಬಾನು ದಂಪತಿಗಳ ಪುತ್ರಿ.

ಫಾತಿಮಾ ರೈಝಾ 599 ಅಂಕ. ಬಾಲವಿಕಾಸ್ ಮಾಣಿ ಇಲ್ಲಿನ ವಿದ್ಯಾರ್ಥಿನಿ. ಮಹಮ್ಮದ್ ರಫೀಕ್, ನೂರಿನ್ನೀಸಾ ದಂಪತಿಗಳ ಪುತ್ರಿ.

ಪುತ್ತೂರು ಕಮ್ಯೂನಿಟಿ ಸೆಂಟರ್ ಈ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಸಾಮಾಜಿಕ ಕಾಳಜಿಯ ನಿಬಂಧನೆಗಳ ಮೂಲಕ ವಿದ್ಯಾರ್ಥಿ ವೇತನ ಮತ್ತು ಆರ್ಥಿಕ ಸಾಮರ್ಥ್ಯ ಇಲ್ಲದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಅವರು ಬಯಸಿದ ಕಾಲೇಜಿನಲ್ಲಿ ನೀಡಲಿದೆ.


ವಿದ್ಯಾರ್ಥಿನಿಯರಿಗೆ ಸೆಂಟರಿನ ವಿದ್ಯಾರ್ಥಿನಿ ವಿಂಗ್ ಸನ್ಮಾನ ನೆರವೇರಿಸಿದರೆ, ವಿದ್ಯಾರ್ಥಿಗಳಿಗೆ ಯುವ ಉಧ್ಯಮಿಗಳಾದ ಅಮೀನ್ ಆಕರ್ಶನ್, ಶಹಬಾಝ್, ಅಝೀಝ್ ಗೊಳಿಕಟ್ಟೆ, ಸತ್ತಾರ್ ಬನ್ನೂರು, ಹರ್ಷದ್ ದರ್ಬೆ, ಶರೀಫ್ ಕಿಡ್ಸ್ ಸಿಟಿ, ಉದಯ ಹನೀಫ್, ಡಿ.ಬಿ ಮುಸ್ತಫಾ ಇವರು ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ರಫೀಕ್ ಮಾಸ್ಟರ್, ಇಮ್ತಿಯಾಝ್ ಪಾರ್ಲೆ, ಹನೀಫ್ ಪುತ್ತೂರು ಭಾಗವಹಿಸಿದ್ದರು.

By dtv

Leave a Reply

Your email address will not be published. Required fields are marked *

error: Content is protected !!