dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಮರ ಕುಡಿಯುತ್ತಿದ್ದ ಸಂದರ್ಭ ಮರದ ಸಮೀಪದಲ್ಲಿದ್ದ ವಿದ್ಯುತ್ ತಂತಿಗೆ ತಾಗಿ ಮರಕಡಿಯುತ್ತಿದ್ದ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಪುತ್ತೂರಿನ ನರಿಮೊಗರಿನಲ್ಲಿ ಇಂದು ನಡೆದಿದೆ.

ಮೃತಪಟ್ಟ ವ್ಯಕ್ತಿ ಮಾಡನ್ನೂರು ನಿವಾಸಿ ಮಲ್ಲ ಎಂಬವರ ಪುತ್ರ ವಸಂತ ( 35 ) ಎಂದು ಗುರುತಿಸಲಾಗಿದೆ.ಮೃತರು ಹಲವು ವರ್ಷಗಳಿಂದ ಮರ ಕಡಿಯುವ ವೃತ್ತಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು

'; } else { echo "Sorry! You are Blocked from seeing the Ads"; } ?>

ಮರ ಕಡಿಯುವ ವೃತ್ತಿಯನ್ನು ಮಾಡುತ್ತಿದ್ದ ವಸಂತ ಗುರುವಾರದಂದು ಪುತ್ತೂರಿನ ನರಿಮೊಗರು ಭಾಗದಲ್ಲಿರುವ ಐಟಿಐ ಸಮೀಪದಲ್ಲಿ ಕೆಲಸ ಮಾಡುತ್ತಿದ್ದರು.

ಮರವೊಂದನ್ನು ಕಡಿದು ಉರುಳಿಸುವ ವೇಳೆ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಶಾಕ್ ಹೊಡೆದು ಗಂಭೀರಾವಸ್ಥೆಯಲ್ಲಿದ್ದ ವಸಂತರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

'; } else { echo "Sorry! You are Blocked from seeing the Ads"; } ?>

ಗಂಭೀರ ಗಾಯಗೊಂಡಿದ್ದ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ವಿವಾಹಿತರಾಗಿದ್ದು ಪತ್ನಿ ಎರಡು ವರ್ಷ ಪ್ರಾಯದ ಗಂಡು ಹಾಗೂ 9 ತಿಂಗಳು ಪ್ರಾಯದ ಹೆಣ್ಣು ಮಗು ಇದ್ದು ಮೃತರು ತಂದೆ , ತಾಯಿ ಈರ್ವರು ಸಹೋದರಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!