dtvkannada

'; } else { echo "Sorry! You are Blocked from seeing the Ads"; } ?>

ಅಹಮದಾಬಾದ್: ನಾಯಕ ಹಾರ್ದಿಕ್ ಪಾಂಡ್ಯ (3 ವಿಕೆಟ್ ಹಾಗೂ 34 ರನ್) ಆಲ್‌ರೌಂಡ್ ಆಟದ ಬಲದಿಂದ ಗುಜರಾತ್ ಟೈಟನ್ಸ್, ಐಪಿಎಲ್ 2022 ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. 
ಈ ಮೂಲಕ ಪದಾರ್ಪಣೆ ಆವೃತ್ತಿಯಲ್ಲೇ ಟ್ರೋಫಿ ಗೆದ್ದ ಸಾಧನೆ ಮಾಡಿದೆ. 

ತವರಿನ ಅಂಗಣ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಸೇರಿದಂತೆ ಗುಜರಾತ್ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ಒಂಬತ್ತು ವಿಕೆಟ್ ನಷ್ಟಕ್ಕೆ 130 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

'; } else { echo "Sorry! You are Blocked from seeing the Ads"; } ?>

ಬಳಿಕ ಗುರಿ ಬೆನ್ನತ್ತಿದ ಗುಜರಾತ್ ಹಾರ್ದಿಕ್ ಸೇರಿದಂತೆ ಶುಭಮನ್ ಗಿಲ್ (39) ಹಾಗೂ ಡೇವಿಡ್ ಮಿಲ್ಲರ್ (32) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಇನ್ನೂ 11 ಎಸೆತಗಳು ಬಾಕಿ ಉಳಿದಿರುವಂತೆಯೇ 18.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಗುಜರಾತ್‌ಗೆ ಆರಂಭದಲ್ಲೇ ಪ್ರಸಿದ್ಧ ಕೃಷ್ಣ ಆಘಾತ ನೀಡಿದರು. 5 ರನ್ ಗಳಿಸಿದ ವೃದ್ಧಿಮಾನ್ ಸಹಾ ಪೆವಿಲಿಯನ್‌ಗೆ ಮರಳಿದರು. 
ಆದರೆ ಶುಭಮನ್ ಗಿಲ್ ಕ್ಯಾಚ್ ಅನ್ನು ಯಜುವೇಂದ್ರ ಚಾಹಲ್ ಕೈಚೆಲ್ಲಿರುವುದು ರಾಜಸ್ಥಾನ್‌ಗೆ ಹಿನ್ನಡೆಯಾಗಿ ಪರಿಣಮಿಸಿತು. 

'; } else { echo "Sorry! You are Blocked from seeing the Ads"; } ?>

ಮ್ಯಾಥ್ಯೂ ವೇಡ್ (11) ಅವರನ್ನು ಟ್ರೆಂಟ್ ಬೌಲ್ಟ್ ಬಲೆಗೆ ಬೀಳಿಸಿದರು. ಈ ಹಂತದಲ್ಲಿ ಜೊತೆ ಸೇರಿದ ಶುಭಮನ್ ಗಿಲ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದರು. 10 ಓವರ್‌ ಅಂತ್ಯಕ್ಕೆ ಗುಜರಾತ್ ಎರಡು ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತ್ತು. 

ಶುಭಮನ್ ಹಾಗೂ ಹಾರ್ದಿಕ್ ಪಾಂಡ್ಯ ತೃತೀಯ ವಿಕೆಟ್‌ಗೆ 63 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. 30 ಎಸೆತಗಳನ್ನು ಎದುರಿಸಿದ ಪಾಂಡ್ಯ 34 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿ ಔಟ್ ಆದರು. 
ಅತ್ತ ತಮಗೆ ಲಭಿಸಿದ ಜೀವದಾನದ ಸ್ಪಷ್ಟ ಲಾಭವೆತ್ತಿದ ಗಿಲ್, ಡೇವಿಡ್ ಮಿಲ್ಲರ್ ಜೊತೆ ಸೇರಿ ತಂಡವನ್ನು ಗೆಲುವಿನ ದಡ ಸೇರಿಸಿದರು. 

ಆ ಮೂಲಕ ಗುಜರಾತ್ 18.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 43 ಎಸೆತಗಳನ್ನು ಎದುರಿಸಿದ ಗಿಲ್ 45 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಅವರಿಗೆ ತಕ್ಕ ಸಾಥ್ ನೀಡಿದ ಮಿಲ್ಲರ್ 19 ಎಸೆತಗಳಲ್ಲಿ 32 ರನ್ (3 ಬೌಂಡರಿ,1 ಸಿಕ್ಸರ್) ಗಳಿಸಿ ಅಜೇಯರಾಗುಳಿದರು. 
ರಾಜಸ್ಥಾನ್ ಪರ ಬೌಲ್ಟ್, ಪ್ರಸಿದ್ಧ ಹಾಗೂ ಚಾಹಲ್ ತಲಾ ಒಂದು ವಿಕೆಟ್ ಗಳಿಸಿದರು. 

ಟೂರ್ನಿಯಲ್ಲಿ ಗರಿಷ್ಠ ರನ್ (ಆರೆಂಜ್ ಕ್ಯಾಪ್) ಹಾಗೂ ಅತಿ ಹೆಚ್ಚು ವಿಕೆಟ್ (ಪರ್ಪಲ್ ಕ್ಯಾಪ್) ಗಳಿಸಿದ ಹೆಗ್ಗಳಿಕೆಗೆ ಕ್ರಮವಾಗಿ ರಾಜಸ್ಥಾನ್ ಆಟಗಾರರಾದ ಜೋಸ್ ಬಟ್ಲರ್ (863 ರನ್) ಹಾಗೂ ಯಜುವೇಂದ್ರ ಚಾಹಲ್ (27 ವಿಕೆಟ್) ಭಾಜನರಾದರು.
ಐಪಿಎಲ್ ಫೈನಲ್ ಪಂದ್ಯವನ್ನು ಸ್ಟೇಡಿಯಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದರು.

ಈ ಮೊದಲು ನಾಯಕ ಹಾರ್ದಿಕ್ ಪಾಂಡ್ಯ (17ಕ್ಕೆ 3) ಸೇರಿದಂತೆ ಗುಜರಾತ್ ಟೈಟನ್ಸ್ ಬೌಲರ್‌ಗಳ ನಿಖರ ದಾಳಿಗೆ ನಲುಗಿದ ರಾಜಸ್ಥಾನ್ ರಾಯಲ್ಸ್, ಐಪಿಎಲ್ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 130 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು.

ಅತಿ ಒತ್ತಡದ ಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅಚ್ಚರಿಯೆಂಬಂತೆ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. 4ನೇ ಓವರ್‌ನ ವರೆಗೆ ಎಲ್ಲವೂ ಅಂದುಕೊಂಡಂತೆ ನಡೆದಿತ್ತು. 
ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಮೊದಲ ವಿಕೆಟ್‌ಗೆ 31 ರನ್‌ಗಳ ಜೊತೆಯಾಟ ಕಟ್ಟಿದರು. ಉತ್ತಮವಾಗಿ ಆಡುತ್ತಿದ್ದ ಜೈಸ್ವಾಲ್ (22) ಅವರನ್ನು ಯಶ್ ದಯಾಲ್ ಹೊರದಬ್ಬಿದರು. 

ಇಲ್ಲಿಂದ ಬಳಿಕ ರಾಜಸ್ಥಾನ್ ಪತನ ಆರಂಭವಾಯಿತು. ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಮೋಡಿ ಮಾಡಿದರು. 
ನಾಯಕ ಸಂಜು ಸ್ಯಾಮ್ಸನ್ ತಮ್ಮದೇ (14) ತಪ್ಪಿನಿಂದಾಗಿ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಕನ್ನಡಿಗ ದೇವದತ್ತ ಪಡಿಕ್ಕಲ್‌ಗೆ (2) ಪ್ರಭಾವಿ ಎನಿಸಿಕೊಳ್ಳಲು ಸಾಧ್ಯವಾಗಲಿಲ್ಲ. 
ಇನ್ನೊಂದೆಡೆ ದಿಟ್ಟ ಹೋರಾಟ ಪ್ರದರ್ಶಿಸಿದ ಬಟ್ಲರ್ ಅವರನ್ನು ಪಾಂಡ್ಯ ಔಟ್ ಮಾಡುವುದರೊಂದಿಗೆ 79ಕ್ಕೆ 4 ವಿಕೆಟ್ ಕಳೆದುಕೊಂಡ ರಾಜಸ್ಥಾನ್ ಸಂಕಷ್ಟಕ್ಕೆ ಸಿಲುಕಿತು. 35 ಎಸೆತಗಳನ್ನು ಎದುರಿಸಿದ ಬಟ್ಲರ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿಗಳು ಸೇರಿದ್ದವು. 

ಶಿಮ್ರಾನ್ ಹೆಟ್ಮೆಯರ್ (11) ಸಹ ಹಾರ್ದಿಕ್ ಬಲೆಗೆ ಬಿದ್ದರು. ಪಾಂಡ್ಯ ನಾಲ್ಕು ಓವರ್‌ಗಳಲ್ಲಿ 17 ರನ್ ಮಾತ್ರ ಬಿಟ್ಟುಕೊಟ್ಟು ಮೂರು ವಿಕೆಟ್ ಕಿತ್ತು ಮಿಂಚಿದರು.
ಇಲ್ಲಿಂದ ಬಳಿಕವೂ ರಾಜಸ್ಥಾನ್ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು. ಇನ್ನುಳಿದಂತೆ ರಿಯಾನ್ ಪರಾಗ್ 15, ಆರ್. ಅಶ್ವಿನ್ 6, ಟ್ರೆಂಟ್ ಬೌಲ್ಟ್ 11 ಹಾಗೂ ಒಬೆಡ್ ಮೆಕೋಯ್ 8 ರನ್ ಗಳಿಸಿದರು.
ಗುಜರಾತ್ ಪರ ಹಾರ್ದಿಕ್ ಮೂರು, ಸಾಯ್ ಕಿಶೋರ್ ಎರಡು ವಿಕೆಟ್ ಕಿತ್ತು ಮಿಂಚಿದರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!