dtvkannada

ಕೋಲಾರ: ಪತಿ ತನ್ನ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ರೋಟರೇಟರ್ ಗೆ ಸಿಲುಕಿ ತನ್ನ ಪತ್ನಿಯೇ ಮೃತಪಟ್ಟ ಮನಕಲಕುವ ಘಟನೆ ವೇಮಗಲ್ ಹೋಬಳಿಯ ಕಲ್ವಮಂಜಲಿ ಗ್ರಾಮದಲ್ಲಿ ನಡೆದಿದೆ.

ಭೀಕರ ಅಪಘಾತದಲ್ಲಿ ಮೃತಪಟ್ಟವರು ರಾಜೇಶ್ ಎಂಬವರ ಪತ್ನಿ ಸೌಮ್ಯಾ ( 35 ) ಎಂದು ತಿಳಿದು ಬಂದಿದೆ.

ರಾಜೇಶ್ ಟ್ರ್ಯಾಕ್ಟರ್ ರೋಟರೇಟರ್ ನಲ್ಲಿ ಉಳುಮೆ ಮಾಡುತ್ತಿದ್ದರು.ಈ ವೇಳೆ ಅವರ ಮೊಬೈಲ್ ಫೋನ್ ಗೆ ಕರೆ ಬಂದಿದ್ದರಿಂದ ಸೌಮ್ಯಾ ಪತಿಗೆ ಮೊಬೈಲ್ ನೀಡಲು ಟ್ರ್ಯಾಕ್ಟರ್ ಬಳಿ ಬಂದಿದ್ದಾರೆ.

ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೌಮ್ಯಾ ಅವರ ಸೀರೆಯ ಸೆರಗು ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿದೆ.ಇದರಿಂದ ಟ್ರ್ಯಾಕ್ಟರ್ ನಡಿಗೆ ಸೆಳೆಯಲ್ಪಟ್ಟ ಸೌಮ್ಯಾರ ದೇಹ ಛಿದ್ರ ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ವೇಮಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

By dtv

Leave a Reply

Your email address will not be published. Required fields are marked *

error: Content is protected !!