dtvkannada

ಬೇಸಿಗೆ ಕಾಲವಾದ ಕಾರಣ ಹಾವುಗಳು, ವಿಷ ಜಂತುಗಳು ನೀರನ್ನು ಹುಡುಕಿಕೊಂಡು ಅಲ್ಲಲ್ಲಿ ಸುಳಿಯುತ್ತಿರುತ್ತವೆ.
ಇದರ ಕುರಿತು ನಾವು ಜಾಗ್ರತೆ ವಹಿಸಬೇಕಾಗಿದೆ.
ಮಕ್ಕಳಿಗೆ ಶಾಲೆ ಪ್ರಾರಂಭವಾಗಿರುವುದರಿಂದ ಆದಷ್ಟು ಜಾಗ್ರತೆಯನ್ನು ತಿಳಿಸಿ ಒಟ್ಟಾರೆ ಪೊದೆಗಳಿರುವ ಸ್ಥಳದಲ್ಲೆಲ್ಲಾ ಓಡಾಡದಂತೆ ಎಚ್ಚರವಹಿಸಿರಿ.

ಕಳೆದ ಮೂರು ವರ್ಷಗಳ ಮುಂಚೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ 2 ವರ್ಷದ ಪುಟ್ಟ ಕಂದಮ್ಮ ವಿಷಕಾರಿ ಹಾವಿಗೆ ಬಲಿಯಾಯಿತು. ಆಟವಾಡುತ್ತಿದ್ದಾಗ ಏಕಾ ಏಕಿ ಮಗುವಿಗೆ ಕಚ್ಚಿದ್ದು .
ಆ ಮಗುವಿನ ತಂದೆ-ತಾಯಿಯ ಏಕೈಕ ಕರುಳ ಕುಡಿಯಾಗಿತ್ತು ಅದು.
ಅದೇ ರೀತಿ ಮೊನ್ನೆ ನನ್ನ ಆತ್ಮೀಯ ಸ್ನೇಹಿತನ ತಾಯಿ ಮನೆಯ ಜಗಲಿಯಲ್ಲಿ ಕುಳಿತು ಬೀಡಿ ಕಟ್ಟುತ್ತಿರುವಾಗ ಏಕಾ ಏಕಿ ಬಂದ ನಾಗರ ಹಾವು ಆ ತಾಯಿಯ ಕೈಗೆ ಬಲವಾಗಿ ಕಚ್ಚಿದ್ದು ಇದೀಗ ಮಂಗಳೂರು ಆಸ್ಪತ್ರೆಯ ನಿಗಾ ಘಟಕದಲ್ಲಿದ್ದಾರೆ ಯಾವುದೇ ಶಮನ ಕಾಣುತ್ತಿಲ್ಲ.
ಆದುದರಿಂದ ಇಂತಹ ವಿಷ ಜಂತುಗಳ ಬಗ್ಗೆ ಆದಷ್ಟು ಎಚ್ಚರದಿಂದಿರಬೇಕಾಗಿದೆ.

ಹಾವು ಕಚ್ಚಿದ ತಕ್ಷಣವೇ ನಾವು ಮಾಡಬೇಕಾಗಿರುವುದಾದರು ಏನು?

ಪ್ರಥಮ ಚಿಕಿತ್ಸೆ:- ಹಾವು ಕಚ್ಚಿದ ತಕ್ಷಣ ಹತ್ತಿರ ಇದ್ದವರು ಏನು ಮಾಡಬೇಕು?ಈ ವಿಷಯ ಹಲವಾರು ಮಂದಿಗೆ ಗೊತ್ತೇ ಇಲ್ಲ.
ಸಾಮಾನ್ಯವಾಗಿ ಹಾವು ಕಚ್ಚಿದಾಗ ವಿಷವೇರಿ ಸಾಯುವವರಿಗಿತಲೂ ಹಾವಿನ ಭಯಕ್ಕೆ ಹೃದಯಾಘಾತದಿಂದ ಸಾಯುವವರೇ ಹೆಚ್ಚು.
ಹಾವಿನ ಮೇಲಿರುವ ಭಯವೇ ಇದಕ್ಕೆ ಕಾರಣ.

ಹಾವು ಕಾಲಿಗೆ ಅಥವಾ ಕೈಗೆ ಕಚ್ಚಿದರೆ ಮೊದಲು ರಕ್ತ ರವಾನೆಯಾಗುವುದು ಹೃದಯಕ್ಕೆ. ಮೊದಲನೇಯದಾಗಿ ಹಾವಿನ ಕಡಿತಕ್ಕೊಳಗಾದ ವ್ಯಕ್ತಿಯನ್ನು ತಕ್ಷಣವೇ ಸಮತಟ್ಟಾದ ಸ್ಥಳದಲ್ಲಿ ಮಲಗಿಸಿ ನಂತರ ಕಚ್ಚಿದ ಸ್ಥಳಕ್ಕಿಂತ ಸ್ವಲ್ಪ ಮೇಲಕ್ಕೆ ಬಿಗಿಯಾಗಿ ಬಟ್ಟೆಯಿಂದ ಕಟ್ಟಬೇಕು.
ಹಾವು ಪಾದಕ್ಕೆ ಕಚ್ಚಿದಾದರೆ ಕಾಲಿನ ಮೇಲ್ಬಾಗದಿಂದ ಬಟ್ಟೆ ಸುತ್ತಿಕೊಂಡು ಕೆಲಬಾಗಕ್ಕೆ ಬರಬೇಕು.
ನಂತರ ತಡಮಾಡದೆ ಆಸ್ಪತ್ರೆಗೆ ಕೊಂಡು ಹೋಗಬೇಕು.
ಅಥವಾ ಹಾವು ಕಚ್ಚಿದ ಸ್ಥಳದ ಸ್ವಲ್ಪ ಮೇಲೆ ಕೈಯಿಂದ ಗಟ್ಟಿಯಾಗಿ ಹಿಡಿದು (ಹತ್ತಿರವಿರುವವರು)ಹಾವು ಕಚ್ಚಿದ ಸ್ಥಳವನ್ನು ಬಾಯಿಂದ ಗಟ್ಟಿಯಾಗಿ ಚೀಪಿ ರಕ್ತವನ್ನು ತಕ್ಷಣವೇ ಹೊರ ಚೆಲ್ಲಬೇಕು.
ಕೆಲವರು ಜ್ಯೋತಿಷಿಯರ ಬಳಿ ಪಂಡಿತರ ಬಳಿ ಕೊಂಡು ಹೋಗುವವರಿದ್ದಾರೆ ಆ ರೀತಿಯ ನಿರ್ದಾರ ಸಲ್ಲದು,
ಹತ್ತಿರವಿರುವ ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಬೇಕು,(ಸರ್ಕಾರಿ ಆಸ್ಪತ್ರೆಗಳಲ್ಲಿ ಇವುಗಳ ಮದ್ದು ದಾಸ್ತಾನು ಇರುತ್ತದೆ) ಅಲ್ಲಿ ಅದಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳು ಇರುತ್ತದೆ.

ಹಾವು ಕಚ್ಚಿದ 3 ಗಂಟೆಯಲ್ಲಿ ದೇಹಕ್ಕೆಲ್ಲಾ ವಿಷ ಹರಡಿ ಸಾವನ್ನಪ್ಪುವ ಸಾಧ್ಯತೆಯಿದೆ.
ಕೆಲವೊಂದು ವಿಷಕಾರಿ ಹಾವುಗಳು ಕಚ್ಚಿದರೆ ಶೇಕಡಾ 90% ರಷ್ಟು ಬದುಕುಳಿಯುವುದೇ ಕಡಿಮೆ.
ಆದ್ದರಿಂದ ಹಾವು ಕಚ್ಚಿದ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಬೇಗನೆ ಆಸ್ಪತ್ರೆಗೆ ಸಾಗಿಸಬೇಕು.

ನಮ್ಮ ಪರಿಸರಗಳನ್ನು ವಿಷ ಜಂತುಗಳು ಬರದ ರೀತಿ ಆದಷ್ಟು ಸ್ವಚ್ಛವಾಗಿಡಬೇಕು.
ಮನೆಯ ಹತ್ತಿರವಿರುವ ಪೊದೆಗಳನ್ನು ಕಿತ್ತೆಸೆಯಬೇಕು.
ಆದಷ್ಟು ಮಕ್ಕಳನ್ನು ಒಬ್ಬಂಟಿಯಾಗಿ ಹೊರಗಡೆ ಎಲ್ಲೂ ಸುತ್ತಾಡದಂತೆ ಜಾಗ್ರತೆವಹಿಸಬೇಕು.

By dtv

Leave a Reply

Your email address will not be published. Required fields are marked *

error: Content is protected !!