dtvkannada

ನವದೆಹಲಿ: ಮದುವೆಯೆಂಬುದು ಪ್ರತಿ ಯುವತಿಗೆ ಅತ್ಯಂತ ವಿಶೇಷವಾದ ದಿನ. ವಧುವಿಗೆ ತನ್ನ ಮದುವೆಯ ದಿನ ಮತ್ತು ಅವಳ ಕನಸಿನ ಮದುವೆಯ ಬಗ್ಗೆ ಆಕೆಗೆ ಏನೇನೋ ಕನಸುಗಳಿರುತ್ತವೆ. ಕೇವಲ ವಧುವಿಗೆ ಮಾತ್ರವಲ್ಲ, ವರನಿಗೆ ಕೂಡ ಮದುವೆ ಬಗ್ಗೆ ಹಲವು ಆಸೆಗಳಿರುತ್ತವೆ. ಆದರೆ, ವೈರಲ್ ಆಗಿರುವ ಈ ವಿಡಿಯೋದಲ್ಲಿ ವರನಿಗೆ ಹಾರ ಹಾಕುವಾಗ ವಧು ಆತನ ಕೆನ್ನೆಗೆ ಬಾರಿಸಿದ್ದಾಳೆ. ಇದರಿಂದ ಶಾಕ್ ಆದ ವರ ಏನಾಯಿತೆಂದು ಅರಗಿಸಿಕೊಳ್ಳುವಷ್ಟರಲ್ಲಿ ಆ ವಧು ಮದುವೆ ಮಂಟಪದಿಂದ ಕೆಳಗಿಳಿದು ಹೋಗಿದ್ದಾಳೆ.

ವೈರಲ್ ಆಗಿರುವ ವಿಡಿಯೋದಲ್ಲಿ ವಧು ವರನಿಗೆ ಹಾರ ಹಾಕುವ ಸಂದರ್ಭದಲ್ಲಿ ವರನಿಗೆ ಕಪಾಳಮೋಕ್ಷ ಮಾಡಿ ನಂತರ ವೇದಿಕೆಯಿಂದ ಕೆಳಗಿಳಿದಿದ್ದಾಳೆ. ವಧುವಿನ ಈ ವರ್ತನೆಗೆ ನಿಜವಾದ ಕಾರಣವನ್ನು ಕಂಡುಹಿಡಿಯಲಾಗದಿದ್ದರೂ, ವರನು ಮದುವೆಯ ಸ್ಥಳಕ್ಕೆ ಕುಡಿದು ಬಂದಿದ್ದರಿಂದ ಕೋಪಗೊಂಡ ವಧು ಆತನ ಕೆನ್ನೆಗೆ ಬಾರಿಸಿದ್ದಾಳೆ ಎನ್ನಲಾಗಿದೆ.

ಈ ಅಹಿತಕರ ಘಟನೆ ಮದುವೆಯ ಸಂಭ್ರಮವನ್ನು ಸ್ಥಗಿತಗೊಳಿಸಿದೆ. ವೀಡಿಯೊದ ಪ್ರಾರಂಭದಲ್ಲಿ, ಅತಿಥಿಯೊಬ್ಬರು ಮಂಟಪದ ಬಳಿ ಬಂದು ಗಲಾಟೆ ಮಾಡುತ್ತಿರುವುದನ್ನು ಕಾಣಬಹುದು. ಆದರೆ, ಈ ಘಟನೆಯು ಕೆಲವೇ ಸೆಕೆಂಡುಗಳ ನಂತರ ಎಲ್ಲರನ್ನೂ ಅಚ್ಚರಿಗೆ ತಳ್ಳಿತು. ಮಂಟಪದಲ್ಲೇ ವರನಿಗೆ ಕಪಾಳಮೋಕ್ಷ ಮಾಡಿದ ವಧು ಮದುವೆಯೇ ಬೇಡವೆಂದು ಮಂಟಪ ಬಿಟ್ಟು ಹೋಗಿದ್ದಾಳೆ.

ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಈ ಘಟನೆ ನಡೆದಿದ್ದು, ಜಲೌನ್ ಜಿಲ್ಲೆಯ ಚಮರಿ ಗ್ರಾಮದ ರವಿಕಾಂತ್ ಮದುವೆಯಾಗಬೇಕಿದ್ದ ವರ. ಕೊನೆಗೆ ಎರಡೂ ಕುಟುಂಬಸ್ಥರು ಒಟ್ಟಿಗೇ ಕುಳಿತು, ಮಾತುಕತೆ ನಡೆಸಿ, ವಧುವನ್ನು ಮದುವೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!