dtvkannada

ಪುತ್ತೂರು: ರಸ್ತೆಯಲ್ಲಿ ಬಿದ್ದು ಸಿಕ್ಕಿದ್ಧ ಎರಡುವರೆ ಲಕ್ಷ ಬೆಲೆ ಬಾಳುವ ಎರಡು ಐಫೋನ್ ಸಹಿತ ಚಿನ್ನಗಳಿದ್ದ ಲೇಡಿಸ್ ಬ್ಯಾಗನ್ನು ಸೂಕ್ತ ವಾರಿಸುದಾರರಿಗೆ ಹಿಂದಿರಿಗಿಸುವ ಮೂಲಕ ಪುತ್ತೂರಿನ ಕುಂಬ್ರದ ಅಟೋ ಚಾಲಕ ಅಬೂಬಕ್ಕರ್ ಮಾನವೀಯತೆ ಮೆರೆದಿದ್ದಾರೆ.

ಶೇಖಮಲೆಯಿಂದ ಕಟ್ಟತ್ತಾರು ಕಡೆಗೆ ಕುಟುಂಬವೊಂದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ತಿರುವಿನಲ್ಲಿ ಅರಿವಿಲ್ಲದೆ ಯುವತಿಯ ಕೈಯಲ್ಲಿದ್ದ ಬ್ಯಾಗ್ ಅಟೋದಿಂದ ಹೊರಗೆ‌ ಬಿದ್ದಿದ್ದು ಮನೆಗೆ ತಲುಪಿದ ಯುವತಿಗೆ ಬ್ಯಾಗ್ ಕಳೆದುಕೊಂಡ ಬಗ್ಗೆ ಗೋಚರವಾಗಿದೆ.

ಇದನ್ನರಿತ ಯುವತಿಯು ತಿರುಗಿ ಮತ್ತೆ ಅದೇ ದಾರಿಯಲ್ಲಿ ಹುಡುಕುತ್ತಾ ಬಂದಿದ್ದು ಎಲ್ಲೂ ಸಿಗದೆ ಕಕ್ಕಾ ಬಿಕ್ಕಿಯಾಗಿದ್ದಾರೆ.

ಈ ನಡುವೆ ರಿಕ್ಷಾ ಚಾಲಕ ಅಬೂಬಕ್ಕರ್ ಅವರಿಗೆ ರಸ್ತೆ ಬದಿಯಲ್ಲಿ ಬ್ಯಾಗ್ ಕಂಡು ಅದರಲ್ಲಿರುವ ಮೊಬೈಲ್‌ಗೆ ಕರೆ ಬರುತ್ತಿರುವುದನ್ನು ಗಮನಿಸಿದಾಗ ಮೊಬೈಲ್‌ DISPLAY ನಲ್ಲಿರುವ ಫೋಟೋ ನೋಡಿದಾಗ ಪರಿಚಯವಿರುವ ವ್ಯಕ್ತಿಯಾಗಿದ್ದು ತಕ್ಷಣವೇ ಅದರ ವಾರಿಸುದಾರರನ್ನು ಸಂಪರ್ಕಿಸಿ.
ಕಳೆದುಕೊಂಡ ಅಷ್ಟೂ ಮೊತ್ತ ಮತ್ತು ಮೊಬೈಲ್ ಹಾಗೂ ಚಿನ್ನವಿರುವ ಬ್ಯಾಗನ್ನು ಹಿಂದಿರಿಗಿಸುವ ಮೂಲಕ ಮಾನವೀಯತೆ ಮರೆದು ಊರವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!