dtvkannada

ಮಂಗಳೂರು: ಭಾರತವನ್ನು ಪಾಕಿಸ್ತಾನದಂತಹ ರಾಷ್ಟವನ್ನಾಗಿಸಲು ನಾವು ಅವಕಾಶ ನೀಡಬಾರದು, ನಮ್ಮ ದೇಶದಲ್ಲಿ ಜಾತ್ಯತೀತತೆಯೇ ನಮ್ಮ ಜೀವವಾಯು ಜಾತ್ಯಾತೀತದಿಂದಲೇ ಭಾರತ ಸುಭದ್ರವಾಗಿದೆ ಅದು ಇಲ್ಲದಿದ್ದರೆ ಇಲ್ಲಿ ಏನೂ ಇಲ್ಲ ಎಂದು ಡಾ.ಕೆ.ಟಿ ಜಲೀಲ್ ಕೇರಳ ಮಾಜಿ ಉನ್ನತ ಶಿಕ್ಷಣ ಸಚಿವರು ಇಂದು ಮಂಗಳೂರುನ ಪುರಭವನದಲ್ಲಿ ನಡೆದ ಸಿ.ಪಿ.ಎಂ ಕರ್ನಾಟಕ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದ ಮುಸ್ಲಿಮರ ನೋವು ನಲಿವುಗಳ ಬಗ್ಗೆ ಭಾರತ ಕಮ್ಯುನಿಸ್ಟ್ ಮಾರ್ಕ್ಸ್ ವಾದಿ ಪಕ್ಷ ಎರಡು ದಿನಗಳ ಬೃಹತ್ ಕಾರ್ಯಕ್ರಮ ಮಂಗಳೂರುನಲ್ಲಿ ಹಮ್ಮಿಕೊಂಡಿದ್ದು ವಿವಿಧ ಸಮಕಾಲೀನ ಗಣ್ಯರು ಕರ್ನಾಟಕದಲ್ಲಿ ಮುಸಲ್ಮಾನರ ದುಃಖ ದುಮ್ಮಾನಗಳ ಕುರಿತು ವಿವಿಧ ತರಗತಿಗಳನ್ನು ಮಂಡಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಲವಾರು ಚಿಂತಕರು, ಗಣ್ಯರು, ಸಾಹಿತಿಗಳು, ಮೇಧಾವಿಗಳು ಎರಡು ದಿನದ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!