';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕೋಲ್ಕತ್ತಾ: ಬಾಲಿವುಡ್ ನ ಖ್ಯಾತ ಗಾಯಕ ಕೃಷ್ಣಕುಮೀರ್ ಕುನ್ನತ್ (53) ಅವರು ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಕೋಲ್ಕತ್ತಾದ ನಜ್ರುಲ್ ಮಂಜ್‌ನಲ್ಲಿ ನಡೆಯುತಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಾಡುತ್ತಿದ್ದ ವೇಳೆ ಹೃದಯಾಘಾತಗೊಂಡು ಕುಸಿದು ಬಿದ್ದಿದ್ದಾರೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಕೆಕೆ ಎಂದೇ ಪ್ರಖ್ಯಾತಿ ಪಡೆದಿರುವ ಬಾಲಿವುಡ್‌ನ ಗಾಯಕ ಕೃಷ್ಣಕುಮಾರ್ ಕುನ್ನತ್ ಸಂಗೀತದಲ್ಲೇ ಜನರನ್ನು ಮಂತ್ರಮುಗ್ದರನ್ನಾಗಿಸುತ್ತಿದ್ದರು.
1999 ರ ಮೊದಲ ಆಲ್ಬಂ ‘ಪಾಲ್’ ಭಾರಿ ಮೆಚ್ಚುಗೆಯನ್ನು ಗಳಿಸಿತ್ತು. ಬಳಿಕ 2000 ರ ದಶಕದ ಆರಂಭದಲ್ಲಿ ಹಿನ್ನೆಲೆ ಗಾಯನದಲ್ಲಿ ವೃತ್ತಿಜೀವನವನ್ನು ಆರಂಭಿಸಿದ ಕೆಕೆ, ದಿಲ್ ಇಬಾದತ್, ಜನ್ನತ್ ಚಿತ್ರದ ಝರಾ ಸ, ತುಹಿ ಮೆರಿ ಶಬ್ ಹೆ ಸೇರಿ ಹಲವಾರು ಜನಪ್ರಿಯ ಹಾಡುಗಳಿಂದ ಚಿತ್ರ ಪ್ರೀಯರ ಮನಗೆದ್ದಿದ್ದರು.