dtvkannada

ಮಂಗಳೂರು: 5 ಕೋಟಿ ಮೌಲ್ಯದ ರಕ್ತಚಂದನ ಸಾಗಿಸುತ್ತಿದ್ದ ಎರಡು ವಾಹನ ಸಮೇತ 7 ಜನರನ್ನು ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬಂಧಿಸಿದ ಘಟನೆ ನಿನ್ನೆ ರಾತ್ರಿ ಮೂಲ್ಕಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಮೂಲ್ಕಿಯಲ್ಲಿ ಆಂಧ್ರಪ್ರದೇಶ ನೋಂದಣಿಯ ಈಚರ್‌ ಹಾಗೂ ಮಹೀಂದ್ರಾ ವಾಹನದಲ್ಲಿ 8ಸಾವಿರ ಕೆ.ಜಿಯ ಒಟ್ಟು 5 ಕೋಟಿ ಮೌಲ್ಯದ ರಕ್ತಚಂದನ ಸಾಗಿಸುತ್ತಿದ್ದ ವೇಳೆ ಮಂಗಳೂರು ಅರಣ್ಯ ಸಂಚಾರಿ ದಳ ಪ್ರಭಾರ ಡಿಸಿಎಫ್‌ ಶ್ರೀಧರ್‌ ನೇತೃತ್ವದಲ್ಲಿ ದಾಳಿ ನಡೆಸಿ 7 ಜನರನ್ನು ಬಂಧಿಸಿದ್ದಾರೆ. ಈ ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

By dtv

Leave a Reply

Your email address will not be published. Required fields are marked *

error: Content is protected !!