dtvkannada

'; } else { echo "Sorry! You are Blocked from seeing the Ads"; } ?>

ಸೌದಿ: ಉಮ್ರಾ ನಿರ್ವಹಣೆಗಾಗಿ ಮಕ್ಕಾಗೆ ಆಗಮಿಸಿದ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅಬ್ದುಲ್ ಖಾಲಿಕ್ ಧಾರ್ ಎನ್ನುವವರು ಮಕ್ಕಾದಲ್ಲಿ ನಿಧನ ಹೊಂದಿದರು.

ಉಮ್ರಾ ಗ್ರೂಪ್ ನಲ್ಲಿ ಉಮ್ರಾ ನಿರ್ವಹಣೆಗೆ ಬಂದ ಖಾಲಿಕ್ ರವರು ತಮ್ಮ ಗ್ರೂಪ್ ನಿಂದ ಬೇರ್ಪಟ್ಟು ಹಲವು ದಿನಗಳ ಕಾಲ ನಾಪತ್ತೆಯಾಗಿದ್ದರು. ಎಷ್ಟೇ ಹುಡುಕಾಡಿದರೂ ಪತ್ತೆಯಾಗದ ಇವರನ್ನು ತೊರೆದು ಸಹ ಯಾತ್ರಿಗಳು ಭಾರತಕ್ಕೆ ವಾಪಸಾಗಿದ್ದರು.

'; } else { echo "Sorry! You are Blocked from seeing the Ads"; } ?>

ಹಲವು ದಿನಗಳ ತರುವಾಯ ಖಾಲಿಕ್ ರವರ ಮೃತದೇಹ ಮಕ್ಕಾದ ಆಸ್ಪತ್ರೆಯ ಶವಗಾರದಲ್ಲಿ ಇರುವ ವಿಷಯ ಇವರು ಬಂದ ಟ್ರಾವೆಲ್ ಏಜನ್ಸಿ ಮುಖಾಂತರ ಇವರ ಕುಟುಂಬ ವರ್ಗಕ್ಕೆ ಸಿಕ್ಕಿತು. ಅವರು ಸೌದಿಯಲ್ಲಿರುವ ಅವರ ಆಪ್ತ ಬಂಧುಗಳಿಗೆ ವಿಷಯ ಮುಟ್ಟಿಸಿದರು. ಅವರುಗಳು ಜಿದ್ದಾ ಇಂಡಿಯನ್ ಸೋಶಿಯಲ್ ಫೋರಮ್ ನ ಮುಸ್ತಫಾ ಪುಣಚ ಮತ್ತು ತೌಸೀಫ್ ನಿಟ್ಟೆಯವರಿಗೆ ವಿಷಯ ತಿಳಿಸಿದರು. ತಕ್ಷಣ ಅವರು ಮಕ್ಕಾ ಇಂಡಿಯನ್ ಸೋಶಿಯಲ್ ಫೋರಮ್ ಅಧ್ಯಕ್ಷ ಶಾಕಿರ್ ಹಕ್ ನೆಲ್ಯಾಡಿ ಯವರಿಗೆ ಮಾಹಿತಿ ನೀಡಿ ಅಂತ್ಯ ಕ್ರಿಯೆಗೆ ಬೇಕಾದ ವ್ಯವಸ್ಥೆ ಮಾಡಲು ಸೂಚಿಸಿದರು.

ಮೃತರ ಕುಟುಂಬಿಕರು ಯಾರೂ ಸೌದಿಯಲ್ಲಿ ಇರದ ಕಾರಣ ಇಂಡಿಯನ್ ಸೋಶಿಯಲ್ ಫೋರಮ್ ನ ಹಮೀದ್ ಫಜೀರ್ ರವರಿಗೆ ಮೃತರ ಕುಟುಂಬಸ್ಥರು ಮೃತ ದೇಹದ ಅಂತ್ಯ ಕ್ರಿಯೆಗೆ ಬೇಕಾದ ಪವರ್ ಆಫ್ ಅಟರ್ನಿ ನೀಡಿದರು. ಎಲ್ಲಾ ದಾಖಲೆ ಪತ್ರಗಳನ್ನು ಹಮೀದ್ ಫಜೀರ್ ರವರು ಕ್ಲಪ್ತ ಸಮಯಕ್ಕೆ ಸಂಗ್ರಹಿಸಿ ದಿನಾಂಕ 05-06-2022 ರಂದು ಪವಿತ್ರ ಹರಮ್ ನಲ್ಲಿ ಜನಾಝ ನಮಾಜ್ ನಿರ್ವಹಿಸಿ ಹರಮ್ ಪರಿಸರದ ಶರಾಯ ದಫನ ಭೂಮಿಯಲ್ಲಿ ಅಂತ್ಯ ಕ್ರಿಯೆ ನೆರವೇರಿಸಲಾಯಿತು.

'; } else { echo "Sorry! You are Blocked from seeing the Ads"; } ?>

ಅಂತ್ಯ ಕ್ರಿಯೆಯಲ್ಲಿ ಫಾರೂಕ್ ಕಲ್ಲಡ್ಕ, ಮನ್ಸೂರ್ ಅಹ್ಮದ್ ಶ್ರೀನಗರ ಮತ್ತಿತರರು ಭಾಗವಹಿಸಿದ್ದರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!