ಪುತ್ತೂರು: ವಿದ್ಯಾಶ್ರೀ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಆರ್ಲಪದವು ಪಾಣಾಜೆ ಸಂಸ್ಥೆಯಿಂದ ನೀಡಿದ ಮನವಿಗೆ ಸ್ಪಂದಿಸಿದ ಶ್ರೀಮತಿ ಮತ್ತು ದಿನೇಶ್ ರೈ ಮೊಡಪ್ಪಾಡಿಮೂಲೆ ರವರು ಮಗಳಾದ ಜನ್ಯ ಡಿ.ರೈ ರವರ ಹುಟ್ಟು ಹಬ್ಬದ ಪ್ರಯುಕ್ತ ದ.ಕ.ಜಿ.ಪಂ.ಉ.ಪ್ರಾ.ಶಾಲೆ ಒಡ್ಯ(ಪಾಣಾಜೆ) ಇಲ್ಲಿಗೆ ಅತೀ ಅಗತ್ಯವಾಗಿ ಬೇಕಾದ ಕಂಪ್ಯೂಟರ್ ಒದಗಿಸಿದರು.
ಈ ಸಂದರ್ಭದಲ್ಲಿ ನೂತನ ಯೋಜನೆಯಾದ ಶಾಲಾ ತೋಟಕ್ಕೆ ಕಲ್ಪವೃಕ್ಷವನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ದಿನೇಶ್ ರೈ ಕುಟುಂಬಸ್ಥರು, ಶ್ರೀ ಹರಿ ಪಾಣಾಜೆ,ಪ್ರಗತಿಪರ ಕೃಷಿಕರಾದ ಲಕ್ಷ್ಮೀನಾರಾಯಣ ರೈ ಕೆದಂಬಾಡಿ,ಶಂಕರ್ ರೈ ಬಾಳೆಮೂಳೆ,ಶ್ರೀಮತಿ ಸೀತಾ ಉದಯ ಭಟ್ಟ್,ಗ್ರಾ.ಪಂ ಸದಸ್ಯರಾದ ಕೃಷ್ಣಪ್ಪ ಪೂಜಾರಿ,ಎಸ್.ಡಿ.ಎಂಸ್ ಅಧ್ಯಕ್ಷರಾದ ದೇವಪ್ಪ ನಾಯ್ಕ,ಮಾಜಿ ಅದ್ಯಕ್ಷರಾದ ಶ್ರೀಕೃಷ್ಣ ಭಟ್ಟ್ ಬಟ್ಯಮೂಳೆ,ವಿದ್ಯಾಶ್ರೀ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ.) ಸಂಚಾಲಕರಾದ ಶ್ರೀಪ್ರಸಾದ್ ಪಾಣಾಜೆ ಅಧ್ಯಕ್ಷರಾದ ಚಂದ್ರ ಎ.ಬಿ.ಉಪಾಧ್ಯಕ್ಷರಾದ ಭರತೇಶ್ ರಾವ್,ಪ್ರ ಕಾ,ಪಕಾಶ್ ಕುಲಾಲ್,ಹಾಗೂ ಸದಸ್ಯರಾದ ರಾಧಾಕೃಷ್ಣ ಕೆದಂಬಾಡಿ, ಪ್ರದೀಪ್ ಬಾಜುಗುಳಿ, ಮೋಹನ ಬೊಳ್ಳುಕಲ್ಲು, ಶಿಕ್ಷಕವೃಂದ, ಸಿಬ್ಬಂದಿ ವರ್ಗ, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಜನಾರ್ಧನ್ ಅಲ್ಚಾರ್ ಸ್ವಾಗತಿಸಿ,ಮಾಜಿ ಎಸ್,ಡಿ,ಎಂ,ಸಿ ಅಧ್ಯಕ್ಷರಾದ ಶ್ರೀಕೃಷ್ಣ ಭಟ್ಟ್ ಬಟ್ಯಮೂಲೆ ಕಾರ್ಯಕ್ರಮ ನಿರೂಪಿಸಿದರು.