dtvkannada

ಮಾಣಿ: ಮಹಿಳೆಗೆ ನಡುರಸ್ತೆಯಲ್ಲೇ ಚೂರಿಯಿಂದ ಇರಿದು ಕೊಲೆಗೈದ ಪ್ರಕರಣ ಸಂಬಂಧ, ಆರೋಪಿ ಯುವಕನನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿಟ್ಲ ಮುಡ್ನೂರು ನಿವಾಸಿ ಶ್ರೀಧರ್ ಎಂದು ಗುರುತಿಸಲಾಗಿದೆ.

ಮಾಣಿಯ ನೇರಳಕಟ್ಟೆಯಲ್ಲಿ ಶಕುಂತಳ ಎಂಬ ಮಹಿಳೆಯನ್ನು ಸಂಜೆ ಆಟೋದಲ್ಲಿ ಬಂದ ಈತ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದ. ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದರು.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು:
ಬಂಟ್ವಾಳ ತಾಲೂಕಿನ ಪುತ್ತೂರು-ಮಂಗಳೂರು ರಸ್ತೆಯ ಮಾಣಿಯ ನೇರಳಕಟ್ಟೆಯ ಜನಪ್ರಿಯ ಹೋಟೇಲ್‌ ಬಳಿ ಇಂದು ಸಂಜೆ ಶಕುಂತಾಳ ಪರಿಚಯಸ್ಥ ಆಟೋ ರಿಕ್ಷಾದವನ ಜೊತೆ ತನ್ನ ಸ್ಕೂಟಿ ನಿಲ್ಲಿಸಿ ಮಾತನಾಡುತ್ತಿದ್ದಳು.

ಈ ವೇಳೆ ಯಾವುದೋ ವಿಚಾರಕ್ಕೆ ಜಗಳ ನಡೆದು ಗಲಾಟೆ ತಾರಕಕ್ಕೇರಿ ಆಟೋ ಚಾಲಕ ಈಕೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರಿಕ್ಷಾದೊಂದಿಗೆ ಪರಾರಿಯಾಗಿದ್ದ.
ತಕ್ಷಣವೇ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದುರೂ ದಾರಿ ಮಧ್ಯೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದರು.

ಆರೋಪಿ ಬಂದ ಆಟೋ

ಸ್ಥಳದಿಂದ ಪರಾರಿಯಾಗಿದ್ದ ಆಟೋ ಚಾಲಕನನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!