';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕೇರಳ: ಕಟ್ಟಿಗೆ ತೆಗೆಯಲು ಹೋದ ಮಹಿಳೆಗೆ ವಿಷಕಾರಿ ಹಾವು ಕಚ್ಚಿ ಮರಣ ಹೊಂದಿದ ಘಟನೆ ಕೇರಳದ ತಾನಾಳೂರು ಎಂಬಲ್ಲಿ ನಿನ್ನೆ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ತಾಹಿರ ಎಂದು ಗುರುತಿಸಲಾಗಿದೆ.
ನಿನ್ನೆ ಶೇಕರಿಸಿಟ್ಟಿದ್ದ ಕಟ್ಟಿಗೆಯನ್ನು ತೆಗೆಯುತ್ತಿದ್ದಾಗ ಅಚಾನಕ್ಕಾಗಿ ಬಂದ ಹಾವು ಮಹಿಳೆಯನ್ನು ಕಚ್ಚಿದ್ದು, ವಿಷ ಏರಿ ಮಹಿಳೆ ಮೃತಪಟ್ಟಿದ್ದಾರೆ.
ಮೃತ ಮಹಿಳೆಯ ಪತಿ ಸೈಫುದ್ದೀನ್ ಸಖಾಫಿ ಪವಿತ್ರ ಹಜ್ಜ್ ಯಾತ್ರೆಯಲ್ಲಿದ್ದು, ಮೃತರು ನಾಲ್ಕು ತಿಂಗಳ ಹಸುಗೂಸು ಸಹಿತ ಐದು ಸಣ್ಣ ಪುಟ್ಟ ಮಕ್ಕಳನ್ನು ಅಗಲಿದ್ದಾರೆ.
ಸಣ್ಣ ಪುಟ್ಟ ಮಕ್ಕಳು ತಬ್ಬಲಿಯಾಗಿದ್ದು ಪತಿ ಬೇರೆ ಪವಿತ್ರ ಹಜ್ಜ್ ಯಾತ್ರೆಯಲ್ಲಿದ್ದು ಕುಟುಂಬದವರ ರೋಧನೆ ಮುಗಿಲು ಮುಟ್ಟಿದೆ.