ಅಬ್ದುಲ್ ಲತೀಫ್ ಸಹದಿ ಪಯಶ್ವಿ ಹೆಸರು ಕೇಳದವರು ವಿರಳ, ತನ್ನ ವಾಕ್ಚಾತುರ್ಯದ ಮೂಲಕ ಲಕ್ಷಾಂತರ ಮಂದಿಗಳ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಹಾನ್ ವ್ಯಕ್ತಿತ್ವ.
ಸಂಘಟನೆಯ ಒಳಗೂ ಹೊರಗೂ ಎಲ್ಲರಿಗೂ ಬೇಕಾಗುವ, ಆತ್ಮೀಯವಾಗಿ ಮಾತನಾಡುವ,ಕಷ್ಟ ಸುಖಗಳಿಗೆ ಸ್ಪಂದಿಸುವ ಒಂದು ಅದ್ಭುತ ಮೇರು ವ್ಯಕ್ತಿ ಪಯಶ್ವಿ ಉಸ್ತಾದ್.
ನಿನ್ನೆ ನಮ್ಮನ್ನಗಳಿದ ದುಃಖಕರವಾದ ವಾರ್ತೆಯಾಗಿತ್ತು ಕಿವಿಗೆ ಅಪ್ಪಳಿಸಿದ್ದು.
ಈಗಾಗಲೇ ಕರಾವಳಿ ಹಲವು ಹತ್ಯೆಗಳಿಗೆ ತತ್ತರಿಸಿದ ಘಟನೆಗಳನ್ನು ಅರಗಿಸಿಕೊಳ್ಳುವಾಗ ಉಸ್ತಾದರ ಮರಣ ವಾರ್ತೆ ಮತ್ತಷ್ಟು ನಮ್ಮನ್ನು ತಬ್ಬಲಿಯಾಗಿಸಿ ಬಿಟ್ಟಿತು.
ಅಧರ್ಮ,ಅನೀತಿ,ಅನ್ಯಾಯದ ವಿರುದ್ಧ ಯಾವಾಗಲೂ ಧ್ವನಿ ಎತ್ತುತ್ತಿದ್ದ ಸಮುದಾಯದ ಒಂದು ನಿರೀಕ್ಷೆಯ ಧ್ವನಿಯಾಗಿತ್ತು ಉಸ್ತಾದರದ್ದು.
ನಿನ್ನೆ ಮಧ್ಯಾಹ್ನ ಕೇರಳ ಸರ್ಕಾರದ ಅನೀತಿ ವಿರುದ್ಧ ಕಟುವಾಗಿ ಧ್ವನಿ ಎತ್ತಿ ಪ್ರತಿಭಟನೆಯಲ್ಲಿ ಮಾತನಾಡಿ ಹಿಂದಿರುಗುವಾಗ ಉಂಟಾದ ಎದೆನೋವು ಉಸ್ತಾದನ್ನು ಬಾರದ ಲೋಕಕ್ಕೆ ಯಾತ್ರೆಯಾಗಿಸಿತು ಇನ್ನಾಲಿಲ್ಲಾಹ್.
ತನ್ನ ಕೊನೆಯುಸಿರಿನ ವರೆಗೆ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಉಸ್ತಾದರು ಇನ್ನು ನೆನಪು ಮಾತ್ರ.
ಉಲಮಾಗಳ ಮರಣ ಈ ಲೋಕದ ಮರಣವಾಗಿದೆ ಎಂಬಂತೆ ಉಸ್ತಾದರ ಮರಣ ಸುನ್ನೀ ಲೋಕಕ್ಕೆ ತುಂಬಲಾರದ ನಷ್ಟವೇ ಸರಿ.
ಸುಲ್ತಾನುಲ್ ಉಲಮಾರಿಗೆ ಒಂದು ಬೆನ್ನೆಲುಬಾಗಿ ನಿಂತಿದ್ದ ಲತೀಫ್ ಸಹದಿ ಉಸ್ತಾದ್ ನಮ್ಮಂತ ಸುನ್ನೀ ಕಾರ್ಯಕರ್ತರಿಗೆ ಒಂದು ಆವೇಶದ ಧ್ವನಿಯಾಗಿದ್ದರು.
ಉಸ್ತಾದರಿಗೆ ಅಲ್ಲಾಹು ಮಗ್ಫೀರತ್ ನೀಡಲಿ, ಸುನ್ನೀ ಲೋಕಕ್ಕೆ ಅಲ್ಲಾಹು ಸಮಾಧಾನ ನೀಡಲಿ(ಆಮೀನ್)