dtvkannada

Month: December 2021

ಕರ್ನಾಟಕದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ; ಮೂವರಿಗೆ ಸೋಂಕು ದೃಢ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು ರಾಜ್ಯದಲ್ಲಿ ಒಟ್ಟು ಮೂರು ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. 34 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ದಕ್ಷಿಣ ಆಫ್ರಿಕಾದಿಂದ ವಾಪಸಾಗಿರುವ ವ್ಯಕ್ತಿಗೆ ಒಮಿಕ್ರಾನ್ ಸೋಂಕು ದೃಢಪಟ್ಟ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್…

ವೈಧ್ಯರ ನಿರ್ಲ್ಯಕ್ಷದಿಂದ ತುಂಬು ಗರ್ಭಿಣಿ ಸಾವು; ಆಸ್ಪತ್ರೆಗೆ ಮುತ್ತಿಗೆ ಹಾಕಿದ ಕುಟುಂಬಸ್ಥರು

ಬಾಳೆಹೊನ್ನೂರು: ಇಲ್ಲಿನ‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ತುಂಬು ಗರ್ಭಿಣಿ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಆಸ್ಪತ್ರೆಗೆ ಮೃತರ ಸಂಬಂಧಿಕರು, ಸಾರ್ವಜನಿಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವನಗರ ಶ್ವೇತಾ (27) ಹೆರಿಗೆ ನೋವು ಕಾಣಿಸಿಕೊಂಡಿದ್ದು,…

ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು

ಮೈಸೂರು: ಪತ್ರಕರ್ತನೊಬ್ಬನ ಮೇಲೆ ಹಲ್ಲೆ ನಡೆಸಿದ್ದ ಎನ್.ಆರ್ ಠಾಣೆಯ ಕಾನ್ಸ್‌ಟೇಬಲ್ ನನ್ನು ಅಮಾನತು ಮಾಡಲಾಗಿದೆ. ಷಷ್ಠಿ ಹಬ್ಬದ ವರದಿ ಮಾಡಲು ತೆರಳಿದ್ದ ಸ್ಥಳೀಯ ಖಾಸಗಿ ವಾಹಿನಿಯೊಂದರ ಪತ್ರಕರ್ತನ ಮೇಲೆ ಎನ್.ಆರ್ ಠಾಣೆಯ ಕಾನ್ಸ್’ಟೇಬಲ್ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ್ದ…

ಕಾಸರಗೋಡು: ಜುವೆಲ್ಲರಿಯಿಂದ 2.88 ಕೋಟಿ ದೋಚಿದ ಪ್ರಕರಣ;ಬಂಟ್ವಾಳದ ಪ್ರಮುಖ ಆರೋಪಿಯ ಸಹೋದರನಾದ ಶಾಫಿಯ ಬಂಧನ

ಬಂಟ್ವಾಳ:ವಾರಗಳ‌ ಹಿಂದೆ ಸುದ್ದಿಯಾಗಿದ್ದ ಕಾಸರಗೋಡುವಿನ ಜುವೆಲ್ಲರಿಯಿಂದ ಸುಮಾರು 2.88 ಕೋಟಿ ರೂ. ಮೌಲ್ಯದ ವಜ್ರಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಎರಡನೇ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಇಮ್ರಾನ್ ಶಾಫಿ (36) ಬಂಧಿತ ಆರೋಪಿ, ಈತ…

ಪುತ್ತೂರು: ಪೋಸ್ಟ್‌ ಆಫೀಸ್‌ಗೆ ನುಗ್ಗಿದ ಕಳ್ಳರು; ಭಧ್ರತಾ ತಿಜೋರಿ ಮುರಿಯಲು ಪ್ರಯತ್ನ ವಿಫಲ

ಪುತ್ತೂರು: ಅಂಚೆ ಕಛೇರಿಗೆ ನುಗ್ಗಿದ ಕಳ್ಳರು ಬರಿಗೈನಲ್ಲಿ ತೆರಳಿದ ಘಟನೆ ನಿನ್ನೆ ಬೆಳಗ್ಗೆ ಪುತ್ತೂರಿನ ನ್ಯಾಯಾಲಯ ಸಂಕೀರ್ಣದಲ್ಲಿರುವ ಅಂಚೆ ಕಛೇರಿಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನೆಲೆ:ಪುತ್ತೂರು ನ್ಯಾಯಾಲಯ ಸಂಕೀರ್ಣದಲ್ಲಿರುವ ಅಂಚೆ…

ಮಲ್ಪೆ ಬಂದರಿನಿಂದ ಮೀನು ತುಂಬಿಕೊಂಡು ಮಂಗಳೂರಿಗೆ ಬರುತ್ತಿರುವಾಗ ಟೈರ್ ಪಂಚರಾಗಿ ಲಾರಿ ಪಲ್ಟಿ: ರಸ್ತೆಯಲ್ಲಿ ಮೀನಿನ ರಾಶಿ

ಉಡುಪಿ: ಹಸಿ ಮೀನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿಯಾದ ಘಟನೆ ಉಡುಪಿಯ ಪಡುಬಿದ್ರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಉಡುಪಿಯ ಮಲ್ಪೆ ಬಂದರಿನಿಂದ ಮೀನು ತುಂಬಿಕೊಂಡು ಮಂಗಳೂರಿಗೆ ಬರುತ್ತಿರುವಾಗ ಪಡುಬಿದ್ರೆಯಲ್ಲಿ ಲಾರಿಯ ಟೈರ್ ಪಂಚರ್ ಆಗಿ ಪಲ್ಟಿಯಾಗಿದೆ ಎನ್ನಲಾಗಿದೆ. ಅಪಘಾತದಲ್ಲಿ ಚಾಲಕ ಸಣ್ಣ-ಪುಟ್ಟ…

ಉಪ್ಪಿನಂಗಡಿ:ಕಾರಿಗೆ ಡಿಕ್ಕಿ ಹೊಡೆದ ಜೀಪು; ನಜ್ಜುಗುಜ್ಜಾದ ಕಾರು

ಉಪ್ಪಿನಂಗಡಿ: ಕಾರಿಗೆ ಜೀಪೊಂದು ಡಿಕ್ಕಿ ಹೊಡೆದ ಘಟನೆ ಉಪ್ಪಿನಂಗಡಿ ಸಮೀಪದ ಗಾಂಧಿ ಪಾರ್ಕ್ ಬಳಿ ಇಂದು ನಡೆದಿದೆ. ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿಯತ್ತ ಚಲಿಸುತ್ತಿದ್ದ ರಿಡ್ಝ್ ಕಾರಿನ ಹಿಂಬದಿಗೆ ಜೀಪು ಡಿಕ್ಕಿಹೊಡೆದಿದ್ದು ಯಾವುದೇ ಪ್ರಣಾಪಾಯವಾಗಿಲ್ಲ. ಕಾರಿನ ಹಿಂಬದಿ ಸ್ವಲ್ಪ ನಜ್ಜು-ಗುಜ್ಜಾಗಿದ್ದು ಕೆಲಕಾಲ ರಾಷ್ಟ್ರೀಯ…

ಮಂಗಳೂರು: ಅನ್ಯಕೋಮಿನ ಗುಂಪಿನಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

ಮಂಗಳೂರು: ಅನ್ಯಕೋಮಿನ ಯುವಕರ ಗುಂಪಿನಿಂದ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದ ಬಗ್ಗೆ ಇದೀಗ ಕಣ್ಣೂರಿನ ಅಡ್ಯಾರ್ ಪದವು ಬಳಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಅಡ್ಯಾರ್ ಪದವು ನಿವಾಸಿ ರಿಯಾಝ್ ಎಂದು ತಿಳಿದು ಬಂದಿದೆ. ಎಂದಿನಂತೆ ಕೆಲಸ ಬಿಟ್ಚು ಮನೆಗೆ ತೆರಳುತ್ತಿದ್ದಾಗ…

ತನ್ನ ಮಗು ಸೊಂಟದಲ್ಲಿರುವಾಗಲೇ ಮಗುವಿನ ಮುಂದೆಯೇ ವ್ಯಕ್ತಿಗೆ ಲಾಠಿಯಿಂದ ಮನಬಂದಂತೆ ಥಳಿಸಿದ ಪೊಲೀಸರು: ಪೊಲೀಸ್ ಸಿಬ್ಬಂದಿ ಅಮಾನತು

ಲಕ್ನೋ: ಕೈಯ್ಯಲ್ಲಿ ಮಗುವನ್ನು ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ನಿರ್ದಾಕ್ಷಿನವಾಗಿ ಲಾಠಿಯೇಟು ನೀಡುತ್ತಿರುವ ದೃಶ್ಯದ ವೀಡಿಯೋವೊಂದು ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಿತ್ತು. ಈ ಘಟನೆ ಉತ್ತರ ಪ್ರದೇಶದ ಕಾನ್ಪುರ್ ನ ದೇಹತ್ ಎಂಬಲ್ಲಿ ಗುರುವಾರ ನಡೆದಿದ್ದು ಈ ವೀಡಿಯೋದಲ್ಲಿ ಅಮಾನವೀಯವಾಗಿ ವರ್ತಿಸಿದ್ದ ಪೊಲಿಸ್…

ವಳತ್ತಡ್ಕ: ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಕಮಿಟಿ ರಚನೆ

ಪುತ್ತೂರು: ವಳತ್ತಡ್ಕ ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾ ಸಭೆಯು ಗೌರವಾಧ್ಯಕ್ಷರಾದ ಸುಲೈಮಾನ್ ಬಳ್ಳೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಕಮಿಟಿ ರಚನೆ ಮಾಡಲಾಯಿತು.ಅಧ್ಯಕ್ಷರಾಗಿ ಅಹ್ಮದ್ ಹಾಜಿ ಕೆ.ಪಿ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಡೆಂಜಿಬಾಗಿಲು, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಬಳ್ಳೇರಿ,…

error: Content is protected !!