dtvkannada

ಲಕ್ನೋ: ಕೈಯ್ಯಲ್ಲಿ ಮಗುವನ್ನು ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ನಿರ್ದಾಕ್ಷಿನವಾಗಿ ಲಾಠಿಯೇಟು ನೀಡುತ್ತಿರುವ ದೃಶ್ಯದ ವೀಡಿಯೋವೊಂದು ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಿತ್ತು. ಈ ಘಟನೆ ಉತ್ತರ ಪ್ರದೇಶದ ಕಾನ್ಪುರ್ ನ ದೇಹತ್ ಎಂಬಲ್ಲಿ ಗುರುವಾರ ನಡೆದಿದ್ದು ಈ ವೀಡಿಯೋದಲ್ಲಿ ಅಮಾನವೀಯವಾಗಿ ವರ್ತಿಸಿದ್ದ ಪೊಲಿಸ್ ಸಿಬ್ಬಂದಿಯನ್ನು ಈಗ ಅಮಾನತುಗೊಳಿಸಲಾಗಿದೆ.



ಸುಮಾರು ಒಂದು ನಿಮಿಷ ಅವಧಿಯ ಈ ವೀಡಿಯೋದಲ್ಲಿ ಸ್ಥಳೀಯ ಠಾಣೆಯ ಇನ್‍ಸ್ಪೆಕ್ಟರ್ ಮೊದಲು ಆ ವ್ಯಕ್ತಿಗೆ ಕೋಲಿನಿಂದ ಬಾರಿಸಿದ್ದಾರೆ. ನಂತರ ಇನ್ನೊಬ್ಬ ಪೊಲೀಸ್ ಸಿಬ್ಬಂದಿ ಆ ವ್ಯಕ್ತಿಯ ಕೈಯ್ಯಲ್ಲಿದ್ದ ಅಳುತ್ತಿರುವ ಮಗುವನ್ನು ಸೆಳೆಯಲು ಯತ್ನಿಸುವುದು ಕಾಣಿಸುತ್ತದೆ.

ದೇಹತ್‍ನ ಅಕ್ಬರ್‌ ಪುರ್ ಎಂಬಲ್ಲಿನ ಜಿಲ್ಲಾ ಆಸ್ಪತ್ರೆಯ ಸಮೀಪ ಈ ಘಟನೆ ನಡೆದಿದ್ದು ಆ ವ್ಯಕ್ತಿ ಮಗುವಿಗೆ ಏನೂ ಮಾಡಬೇಡಿ ಎಂದು ಅಂಗಲಾಚುತ್ತಿರುವುದು ಕೇಳಿಸುತ್ತದೆ. ಪೊಲೀಸರು ಬಲವಂತವಾಗಿ ಮಗುವನ್ನು ಸೆಳೆದಾಗ “ಮಗುವಿಗೆ ತಾಯಿ ಕೂಡ ಇಲ್ಲ” ಎಂದು ಆ ವ್ಯಕ್ತಿ ಹೇಳುತ್ತಾನೆ.

ಆದರೆ ಘಟನೆ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಆ ವ್ಯಕ್ತಿಯ ವಿರುದ್ಧ ಸ್ವಲ್ಪ ಬಲಪ್ರಯೋಗ ನಡೆಸಲಾಗಿದೆ ಹಾಗೂ ಮಗುವನ್ನು ರಕ್ಷಿಸಲು ಪೊಲೀಸರು ಯತ್ನಿಸಿದ್ದಾರೆ ಎಂಬ ಸಬೂಬು ನೀಡಿದ್ದಾರೆ.

https://twitter.com/srinivasiyc/status/1468991085091307520?ref_src=twsrc%5Etfw%7Ctwcamp%5Etweetembed%7Ctwterm%5E1468991085091307520%7Ctwgr%5E%7Ctwcon%5Es1_c10&ref_url=https%3A%2F%2Fm.varthabharati.in%2Farticle%2F2021_12_10%2F317110

“ಕೆಲ ಜನರು ಅರಾಜಕತೆ ಸೃಷ್ಟಿಸಲು ಯತ್ನಿಸಿ ಆಸ್ಪತ್ರೆಯ ಒಪಿಡಿ ಅನ್ನು ಮುಚ್ಚಿಸಲು ಹಾಗೂ ರೋಗಿಗಳಿಗೆ ಭೀತಿ ಹುಟ್ಟಿಸಲು ಯತ್ನಿಸಿದ್ದಾರೆ. ಆ ವ್ಯಕ್ತಿಯ ಸಹೋದರ ಈ ಆಸ್ಪತ್ರೆಯ ಉದ್ಯೋಗಿಯಾಗಿದ್ದು ಸದಾ ಉಪಟಳ ನಡೆಸುತ್ತಿದ್ದ ಹಾಗೂ ಪೊಲೀಸ್ ಇನ್‍ಸ್ಪೆಕ್ಟರ್ ಒಬ್ಬರ ಬೆರಳಿಗೆ ಕಚ್ಚಿದ್ದಾನೆ,” ಎಂದು ಕಾನ್ಪುರ್ ದೇಹತ್‍ನ ಎಎಸ್‍ಪಿ ಘನಶ್ಯಾಮ್ ಚೌರಾಸಿಯಾ ಹೇಳಿದ್ದಾರೆ.

ನಂತರ ಪೊಲೀಸ್ ಇಲಾಖೆ ಸಂಬಂಧಿತ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.

By dtv

Leave a Reply

Your email address will not be published. Required fields are marked *

error: Content is protected !!