ಮಾಣಿ, ಸೆ.4: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ ಅರ್ಧವಾರ್ಷಿಕ ಕೌನ್ಸಿಲ್ ಸಭೆಯು, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಸಾಬಿತ್ ತಂಙಳ್ ರವರ ದುವಾ ದೊಂದಿಗೆ ಸತ್ತಿಕ್ಕಲ್ ತಾಜುಲ್ ಉಲಮಾ ಮದ್ರಸದಲ್ಲಿ ಇಂದು ನಡೆಯಿತು.
ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪಬ್ಲಿಕೇಶನ್ ಕಾರ್ಯದರ್ಶಿ ಜಾಬಿರ್ ಸಅದಿ ಗಡಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಸಾಬಿತ್ ತಂಙಳ್ ರವರು ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಫಲ್ ರವರು ವರದಿ ವಾಚಿಸಿದರು. ಸೆಕ್ಟರ್ ಕೋಶಾಧಿಕಾರಿ ಅನ್ಸಾರ್ ಸತ್ತಿಕ್ಕಲ್ ರವರು ಲೆಕ್ಕಪತ್ರ ಮಂಡಿಸಿದರು.
ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಉಸ್ತುವಾರಿಯಾದ ಸಲಾಂ ಹನೀಫಿ ಕಬಕ ವೀಕ್ಷಕರಾಗಿ ಆಗಮಿಸಿ ಸಂಘಟನಾ ತರಗತಿಯನ್ನು ನಡೆಸಿಕೊಟ್ಟರು. ಇತ್ತೀಚೆಗೆ ಅಕಾಲಿಕವಾಗಿ ನಮ್ಮನ್ನಗಲಿದ ಉಮರಾ ನಾಯಕ, ಸಜ್ಜನ ಸ್ವಭಾವದ ವ್ಯಕ್ತಿತ್ವದ, ಎಸ್.ಎಂ.ಎ ವಿಟ್ಲ ಝೋನಲ್ ಕೋಶಾಧಿಕಾರಿಯೂ, ಪೇರಮೊಗರು ಜಮಾಅತ್ ಅಧ್ಯಕ್ಷರಾದ ಮರ್ಹೂಂ ಇಬ್ರಾಹಿಂ ಹಾಜಿ ಪೇರಮೊಗರು ಹಾಗೂ ಕೆಮ್ಮಾರದ ಹೊಳೆಯಲ್ಲಿ ಬಿದ್ದು ಮರಣ ಹೊಂದಿದ ಮರ್ಹೂಂ ಶಫೀಕ್ ರವರ ಹೆಸರಿನಲ್ಲಿ ತಹ್ಲೀಲ್ ಹೇಳಿ ದುವಾ ಮಾಡಲಾಯಿತು.
ಕೊನೆಯಲ್ಲಿ ಮೂರು ಸ್ವಲಾತಿನೊಂದಿಗೆ ಸಭೆಯು ಮುಕ್ತಾಯಗೊಂಡಿತು.ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ದಅವಾ ಕಾರ್ಯದರ್ಶಿ ಮುಸ್ತಫಾ ಬುಡೋಳಿ ಸ್ವಾಗತಿಸಿ, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಬ್ಲಡ್ ಸೈಬೋ ಉಸ್ತುವಾರಿ ಕಲಂದರ್ ಪಾಟ್ರಕೋಡಿ ಧನ್ಯವಾದಗೈದರು.