';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ನಿಂದ (Nipah virus) 12 ವರ್ಷದ ಬಾಲಕ ಭಾನುವಾರ ಮುಂಜಾನೆ ಮೃತಪಟ್ಟಿದ್ದಾನೆ. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಶನಿವಾರ ಆತನ ಸ್ಥಿತಿ ಹದಗೆಟ್ಟಿತ್ತು. ಭಾನುವಾರ ಬೆಳಿಗ್ಗೆ 5 ಗಂಟೆಗೆ ಬಾಲಕ ಮೃತಪಟ್ಟಿದ್ದಾನೆ.
ಸೆಪ್ಟೆಂಬರ್ 3 ರಂದು ಬಾಲಕನಿಗೆ ನಿಫಾ ವೈರಸ್ ಇರುವುದಾಗಿ ಶಂಕೆ ವ್ಯಕ್ತವಾಗಿತ್ತು. ಆತನಲ್ಲಿ ಎನ್ಸೆಫಾಲಿಟಿಸ್ ಮತ್ತು ಮಯೋಕಾರ್ಡಿಟಿಸ್ ಲಕ್ಷಣಗಳು ಕಾಣಿಸಿತ್ತು. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಕೇರಳದ ಸ್ಯಾಂಪಲ್ ಪರೀಕ್ಷಿಸಿ ಪಾಸಿಟಿವ್ ಎಂದು ದೃಢಡಿಸಿದೆ.
12 ವರ್ಷದ ಬಾಲಕನನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ನಂತರ ವೈದ್ಯಕೀಯ ಕಾಲೇಜಿಗೆ ಕರೆತಂದು ಕೊನೆಗೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.