dtvkannada

ಬೆಂಗಳೂರು : ದಕ್ಷಿಣ ಕನ್ನಡ: ಚೈನಾ ಮೂಲದ ವಿದೇಶೀ ಮೊಬೈಲ್ ಕಂಪನಿ XIAOMI ಯು ತನ್ನ ಸ್ಥಳೀಯ ರೀಟೇಲರ್ ಆದ್ಯ ಪಾಲುದಾರಿಗೆ ಭಾರಿ ಮೋಸ ಮಾಡುತ್ತಿದೆ. ಕಂಪನಿಯು ತನ್ನ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಾಗ ಕೇವಲ ಆನ್ ಲೈನ್ ನಲ್ಲಿ ಮಾತ್ರ ಬಿಡುಗಡೆ ಮಾಡುತ್ತಿದ್ದು, ಸ್ಥಳೀಯ ಮಾರಾಟಗಾರರಿಗೆ ಉತ್ಪನ್ನ ನೀಡದೆ ಅತೃಪ್ತಿದಾಯಕ ಧೋರಣೆ ಅನುಸರಿಸುತ್ತಿದೆ ಎಂದು ” ಆಲ್ ಇಂಡಿಯಾ ಮೊಬೈಲ್ ರೀಟೇಲರ್ ಅಸೋಸಿಯೇಷನ್ ” ನ ಕರ್ನಾಟಕದ ಅಧ್ಯಕ್ಷರಾದ ರವಿಕುಮಾರ್ ಆರೋಪಿಸಿದ್ದಾರೆ.

ಗ್ರಾಹಕರಿಂದ ಹೆಚ್ಚು ಬೇಡಿಕೆ ಇರುವ ಮೊಬೈಲ್ ಫೋನ್ ಗಳನ್ನೂ ರಿಟೇಲ್ ಮಾರಾಟಗಾರರಿಗೆ ಕಂಪನಿ ನೀಡುತ್ತಿಲ್ಲ. ಆದರೆ ಆನ್ ಲೈನ್ ನ ಅಮೆಜಾನ್ , ಫಿಲ್ಪ್ ಕಾರ್ಟ್ ಗಳಿಗೆ ಸ್ಟಾಕ್ ನೀಡುತ್ತಿದ್ದಾರೆ. ಅದಲ್ಲದೇ ರಾಜ್ಯದ ಎಲ್ಲಾ ಮುಖ್ಯ ನಗರಗಳಲ್ಲಿ ಅವರದ್ದೇ ಆದ ಶಿಯೋಮಿ ಮಾರಾಟ ಕೇಂದ್ರಗಳನ್ನು ತೆರದು ಅಲ್ಲಿ ಹೊಸ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಮೊಬೈಲ್ ಅಂಗಡಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ.

ಆರ್ಥಿಕ ಸಂಕಷ್ಟವೂ ಉಂಟಾಗಿದ್ದು, ತಮ್ಮ ಗ್ರಾಹಕರನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು “ಆಲ್ ಇಂಡಿಯಾ ಮೊಬೈಲ್ ರೀಟೇಲರ್ ಅಸೋಸಿಯೇಷನ್ ” ನ ಕರ್ನಾಟಕದ ಅಧ್ಯಕ್ಷರಾದ ರವಿಕುಮಾರ್ ವಿವರಿಸಿದ್ದಾರೆ.ಪ್ರಾರಂಭದಲ್ಲಿ ಕಂಪನಿಯು ಇಲ್ಲಿನ ರಿಟೇಲ್ ಮಾರಾಟಗಾರ ಜೊತೆ ಉತ್ತಮ ಸಂಪರ್ಕದಲ್ಲಿತ್ತು. ಅದರಿಂದಾಗಿ ಈ ಕಂಪನಿಯು ಭಾರತದಲ್ಲಿ ನೆಲೆ ನಿಲ್ಲಲು ಕಾರಣವಾಗಿತ್ತು. ನಂತರ XIAOMI ಕಂಪನಿ ಭಾರತದಲ್ಲಿ ನಂಬರ್ 1 ಸ್ಮಾರ್ಟ್ ಫೋನ್ ಬ್ರಾಂಡ್ ಆಗಿ ತನ್ನ ಸ್ಥಾನ ಪಡೆದಿದೆ. ಇದಕ್ಕೆ ಸ್ಥಳೀಯ ಎಲ್ಲಾ ಆದ್ಯ ಪಾಲುದಾರರ ಶ್ರಮವಿದೆ. ಕೊರೊನಾ ಲಾಕ್ ಡೌನ್ ನಿಂದ ತೊಂದರೆಗೊಳಗಾಗಿದ್ದ ರಿಟೇಲ್ ಮಾರಾಟಗಾರರು ಈಗ ಕಂಪನಿಯ ಮಲತಾಯಿ ಧೋರಣೆಯು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಅವರು ಹೇಳಿದ್ದಾರೆ.

ದೇಶದಾದ್ಯಂತ 20000 ರಿಟೇಲ್ ಮಾರಾಟಗಾರರಿದ್ದು, ಕರ್ನಾಟಕದಲ್ಲಿ ಸುಮಾರು 12000ದಷ್ಟಿದ್ದು, 600 ಕ್ಕೂ ಅಧಿಕ ಆದ್ಯ ಪಾಲುದಾರರಿದ್ದಾರೆ. ಕಂಪನಿಯು ಈಗಾಗಲೇ ಕೆಲವು ಪ್ರಿಫರ್ಡ್ ಪಾರ್ಟ್ನರ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಇದರಂತೆ ರಿಟೇಲ್ ಮಾರಾಟಗಾರರಿಗೆ ಕಂಪನಿ ಸರಿಯಾದ ಸಮಯದಲ್ಲಿ ಬೇಡಿಕೆಗೆ ಅನುಗುಣವಾಗಿ ತನ್ನ ಉತ್ಪನ್ನವನ್ನು ನೀಡಬೇಕೆಂದಿದೆ. ಕಂಪನಿ ಈಗ ತನ್ನ ವ್ಯಾಪಾರವನ್ನು ಬೇರೆ ಮೂಲಗಳಿಂದ ಹೆಚ್ಚಿಸಿಕೊಂಡ ಮೇಲೆ ಒಪ್ಪಂದವನ್ನು ಕಡೆಗಣಿಸುತ್ತಿದೆ ಎಂದು ಎಲ್ಲಾ ರಿಟೈಲರ್ ಗಳು ,ಅಂಗಡಿ ಮಾಲಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಮುಖ್ಯವಾಗಿ ಶಿಯೋಮಿ ಕಂಪೆನಿಯು ತನ್ನ ಹೊಸ ಹೊಸ ಮೊಬೈಲ್ ಉತ್ಪನ್ನಗಳನ್ನು ಕೇವಲ ಆನ್ ಲೈನ್ ನಲ್ಲೇ ಬಿಡುಗಡೆ ಮಾಡುತ್ತಿದೆ. ಪ್ರಮುಖ ನಗರ, ಪಟ್ಟಣ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕಂಪನಿಯೇ ಪ್ರತ್ಯೇಕವಾಗಿ ಮಾರಾಟ ಮಳಿಗೆ ತೆರೆದು ಅಲ್ಲಿ ಕೂಡ ಹೊಸ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿದೆ. ರಿಟೇಲ್ ಮಾರಾಟಗಾರರಿಗೆ ಬಿಡುಗಡೆಯಾದ ಹೊಸ ಮೊಬೈಲ್ ಉತ್ಪನ್ನವನ್ನು ನೀಡುತ್ತಿಲ್ಲ. ಕೆಲವು ಹೊಸ ಉತ್ಪನ್ನಗಳು ಮತ್ತು ಸ್ಟಾಕ್ಸ್ ಖಾಲಿಯಾದ ನಂತರ ಪುನಃ ಕಂಪನಿಗೆ ಕೇಳಿದರೆ ನೋ ಸ್ಟಾಕ್ಸ್ ಎನ್ನುತ್ತಾರೆ. ಆದರೆ ಆ ಉತ್ಪನ್ನಗಳು ಆನ್ಲೈನ್ ನಲ್ಲಿ ಹಾಗು ಶಿಯೋಮಿ ಮಾರಾಟ ಮಳಿಯಲ್ಲಿ ಗ್ರಾಹಕರಿಗೆ ಸುಲಭವಾಗಿ ಸಿಗುತ್ತದೆ. ಆದರೆ ರಿಟೇಲರ್ಸ್ಸ್ ಗೆ ಸಿಗುತ್ತಿಲ್ಲ.

ಆನ್ ಲೈನ್ ಮತ್ತು ಕ್ಸಿಯಾಮಿ ಮಾರಾಟ ಮಳಿಯಲ್ಲಿ ಗ್ರಾಹಕರಿಗೆ ಮಾರಾಟವಾಗುವ ಮೊಬೈಲ್ ಗಳ ಬೆಲೆ ರಿಟೇಲ್ ಮಾರಾಟಗಾರರಿಗೆ ನೀಡುವ ಬೆಲೆ ಸಮನಾಗಿದ್ದು, ಗ್ರಾಹಕರಿಗೆ ಮಾರಾಟ ಮಾಡುವಾಗ ರಿಟೇಲರ್ಸ್ಸ್ ಅಲ್ಪ ಲಾಭಂಶ ಸೇರಿಸಿ ಗ್ರಾಹಕರಿಗೆ ಮಾರಾಟ ಮಾಡಬೇಕು. ಆದ್ದರಿಂದ ರೇಟೇಲರ್ಸ್ ಮಾಡುವ ಮೊಬೈಲ್ ಬೆಲೆ ಜಾಸ್ತಿಯಾಗಿರುತ್ತದೆ. ಆನ್ ಲೈನ್ ನಲ್ಲಿ ಗ್ರಾಹಕರಿಗೆ ಅನೇಕ ಕೊಡುಗೆಗಳು ಮತ್ತು ರಿಯಾಯಿತಿ ನೀಡಲಾಗುತ್ತದೆರಿಟೇಲ್ ಮಾರಾಟಗಾರ ಕಷ್ಟವನ್ನು ಮನವರಿಕೆ ಮಾಡಿಸುವ ಬಗ್ಗೆ ,ಮಾತನಾಡಲು ಎ ಐ ಎಂ ಆರ್ ಎ ಹಲವು ಸಲ ಶಿಯೋಮಿ ಕಂಪನಿಯನ್ನು ಸಂಪರ್ಕಿಸಲು ಪ್ರಯತ್ನಪಟ್ಟರೂ ಕಂಪನಿ ನಿರುತ್ಸಾಹ ತೋರಿದೆ. ಆದ ಕಾರಣ ಇಮೇಲ್ ಮತ್ತು ಟ್ವೀಟ್ ಮುಖಾಂತರ ವಿಷಯ ಮುಟ್ಟಿಸಲಾಗಿದೆ.

ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಶಿಯೋಮಿ ಕಂಪನಿ ವಿರುದ್ಧ ಭಾರತದ ಸ್ಪರ್ಧಾ ಆಯೋಗ (Competition Commission of India) ಕ್ಕೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಹಾಗು AIMRA ಜೊತೆ ಪುತ್ತೂರು ಮೊಬೈಲ್ ರಿಟೈಲರ್ ಅಸೋಸಿಯೇಶನ್ ಕೂಡ ಕೈ ಜೋಡಿಸಿಕೊಂಡು ಹೋರಾಟ ಮಾಡಲಿದ್ದೇವೆ ಎಂದು ಅಸೋಸಿಯೇಶನ್ ಮಾಧ್ಯಮ ವರದಿಗಾರರಿಗೆ‌ ತಿಳಿಸಿದೆ.

By dtv

Leave a Reply

Your email address will not be published. Required fields are marked *

error: Content is protected !!