dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಸೆಕ್ಯುಲರ್ ಯೂತ್ ಫೋರಮ್ ಸಾಲ್ಮರ ವಲಯ, ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಕೆ.ಎಮ್.ಸಿ ಬ್ಲಡ್ ಬ್ಯಾಂಕ್ ಇದತ ಸಹಯೋಗದೊಂದಿಗೆ ಸಾಲ್ಮರ ಮೌಂಟೇನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಸಾಧಕ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ರಕ್ತದಾನ ಶಿಬಿರದಲ್ಲಿ ಒಟ್ಟು 61 ದಾನಿಗಳು ರಕ್ತದಾನ ಮಾಡುವ ಮೂಲಕ ಜೀವದಾನಿಗಳಾದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ಇದರ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ ಅವರು ವಹಿಸಿದ್ದರು.SYF ಸಂಘಟನೆಯ ಪುತ್ತೂರು ತಾಲೂಕು ಘಟಕದ ಪದಾಧಿಕಾರಿ ಸಿದ್ದೀಕ್ ಸುಲ್ತಾನ್ ಅವರು ಸ್ವಾಗತಿಸಿದರು.ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮೆರಿಲ್ ರೇಗೋ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.ನಂತರ SYF ಸಂಘಟನೆಯ ಸಲಹಾ ಸಮಿತಿಯ ಮುಖ್ಯಸ್ಥರಾದ ಇಕ್ಬಾಲ್ ಬಾಳಿಲ ಅವರು ಮಾತನಾಡಿ SYF ಸಂಘಟನೆಯ ದೂರದೃಷ್ಟಿ ಯೋಜನೆ ಮತ್ತು ಧ್ಯೇಯೋದ್ದೇಶಗಳನ್ನು ವಿವರಿಸಿದರು.

'; } else { echo "Sorry! You are Blocked from seeing the Ads"; } ?>

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ ಅವರು ಮಾತನಾಡಿ SYF ನಂತಹ ಸಂಘಟನೆ ಪ್ರಸ್ತುತ ಸಮಾಜಕ್ಕೆ ಅವಶ್ಯಕತೆ ಇದ್ದು,ಕೋಮುವಾದಿಗಳ ಹಿಡಿತದಿಂದ ತಪ್ಪಿಸಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಜಾತ್ಯತೀತ ಯುವ ಪೀಳಿಗೆಯನ್ನು ಕಟ್ಟಲು ಪಣ ತೊಟ್ಟಿರುವ SYF ಸಂಘಟನೆಯ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕರಾದ ಮೌಂಟೇನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ನಿವೃತ್ತ ಶಿಕ್ಷಕ ಭಾಸ್ಕರ ರೈ, ದ.ಕ.ಜಿ.ಪಂ.ಹಿ.ಪ್ರಾ ಶಾಲೆಯ ನಿವೃತ್ತ ಶಿಕ್ಷಕರಾದ ಎಂ.ಶಿವಾನಂದ ಹಾಗೂ ಕೊರೋನ ಸಂಕಷ್ಟ ಸಮಯದಲ್ಲಿ ನಿರಂತರವಾಗಿ ರೋಗಿಗಳ ಸೇವೆಗೈದ SYF ಮಂಗಳೂರು ತಾಲೂಕು ಘಟಕದ ಉಸ್ತುವಾರಿ ರವೂಫ್ ಸಿ.ಎಮ್ ದೇರಳಕಟ್ಟೆ, ಸಮಾಜಸೇವಕರಾದ ಅಬ್ದುಲ್ ಅಝೀಝ್ RKC, ನಝೀರ್ ಅಹ್ಮದ್ ಬಿಕರ್ನಕಟ್ಟೆ ಹಾಗೂ ಯುಟಿಕೆ ಹೆಲ್ಪ್ ಲೈನ್ ತಂಡಕ್ಕೆ ವಿಶೇಷವಾದ ಗೌರವ ಸನ್ಮಾನ ಮಾಡಲಾಯಿತು.

'; } else { echo "Sorry! You are Blocked from seeing the Ads"; } ?>

ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಸದಸ್ಯರಾದ ಸೂತ್ರಬೆಟ್ಟು ಜಗನ್ನಾಥ ರೈ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ನೂರುದ್ದೀನ್ ಸಾಲ್ಮರ, ಶಿಕ್ಷಕ ರಕ್ಷಕ ಸಂಘ ಸಾಲ್ಮರ ಇದರ ಅಧ್ಯಕ್ಷರಾದ ಯೂಸುಫ್ ತಾರಿಗುಡ್ಡೆ, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ನವಾಝ್ ನರಿಂಗಾನ, SYF ಕೇಂದ್ರ ಸಮಿತಿ ಮುಖ್ಯಸ್ಥರಾದ ಮೋನು ಬಪ್ಪಳಿಗೆ, ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಬಶೀರ್ ಪರ್ಲಡ್ಕ, ನಗರಸಭೆ ಸದಸ್ಯರಾದ ರಾಬಿನ್ ತಾವ್ರೋ, ಸಾಮಾಜಿಕ ಕಾರ್ಯಕರ್ತರಾದ ರವೂಫ್ ಕೆರೆಮೂಲೆ, ಹಿರಿಯ ಕಾಂಗ್ರೆಸ್ ಮುಖಂಡರಾದ ಮುಂಡಪ್ಪ ಜಿಡೆಕಲ್ಲು, SYF ಪುತ್ತೂರು ಘಟಕದ ಪದಾಧಿಕಾರಿ ಹಂಝತ್ ಸಾಲ್ಮರ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ಶಂಸುದ್ದೀನ್ ಅಜ್ಜಿನಡ್ಕ, SYF ಪುತ್ತೂರು ಪದಾಧಿಕಾರಿ ರಶೀದ್ ಮುರ, ಕೊಕ್ಕಡ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹಕೀಮ್ ಕೊಕ್ಕಡ, ಧರ್ಮಸ್ಥಳ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಷೇಕ್ ಆರಿಗ, ಯಂಗ್ ಬ್ರಿಗೇಡ್ ಪುತ್ತೂರು ಇದರ ಅಧ್ಯಕ್ಷರಾದ ರಂಜಿತ್ ಬಂಗೇರ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಇಕ್ಬಾಲ್ ಪೆರಿಗೇರಿ, ನಗರಸಭೆ ಸದಸ್ಯರಾದ ರಿಯಾಝ್ ಪರ್ಲಡ್ಕ, ಪುತ್ತು ಹಾಜಿ ಬಾಯಾರ್, ಇಸ್ಮಾಯಿಲ್ ಜಿಡೆಕಲ್ಲು, ನಿಝಾರ್ ಕೊಡಿಂಬಾಡಿ, ಬಶೀರ್ ಸಾಲ್ಮರ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಗಝ್ಝಾಲಿ ಕುಡ್ತಮುಗೇರು ಅವರು ನಿರೂಪಿಸಿದರೆ ಹಾಗು ಕಾರ್ಯಕ್ರಮದ ಕೊನೆಯಲ್ಲಿ SYF ಸಾಲ್ಮರ ‌ವಲಯ ಇದರ ಪದಾಧಿಕಾರಿ ಇರ್ಷಾದ್ ಸಾಲ್ಮರ ಅವರು ಧನ್ಯವಾದಗೈದರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!