';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
“ವಿದ್ಯೆ ಕಲಿಸುವ ಗುರುಗಳು, ನಮ್ಮ ಜೀವನದ ಅಮೂಲ್ಯ ಮುತ್ತುಗಳು” “ದೇವರ ಸ್ವರೂಪ ಇವರು, ಅವರ ಆಶೀರ್ವಾದವೇ ನಮಗೆ ವರವು”
ಪುತ್ತೂರು: ಟೀಚರ್ಸ್ ಡೇ ಆಚರಣೆ ದಿನದ ಅಂಗವಾಗಿ ಡಾ।ಸರ್ವಪಲ್ಲಿ ರಾಧಾಕೃಷ್ಣನ್ ರವರ ಶೈಕ್ಷಣಿಕ ಸಾಧನೆಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಲೆಂದು ಪ್ರಾರ್ಥಿಸುವುದರೊಂದಿಗೆ, ಪುತ್ತೂರಿನ ಸುದಾನ ವಸತಿಯುತ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ವಿಶೇಷ ರೀತಿಯಲ್ಲಿ ತಮ್ಮ ಶಾಲಾ ಶಿಕ್ಷಕರಿಗೆ ಆನ್ಲೈನ್ ಗುರುನಮನ ಕಾರ್ಯಕ್ರಮವನ್ನು ಆಯೋಜಿಸಿದರು.
ಕಬ್, ಬುಲ್ ಬುಲ್, ಸ್ಕೌಟ್ ಮತ್ತು ಗೈಡ್ ಮಕ್ಕಳು ತಾವೇ ತಯಾರಿಸಿದ ಗ್ರೀಟಿಂಗ್ ಕಾರ್ಡ್ ಪ್ರದರ್ಶನ, ಹಾಡು, ಶುಭ ನುಡಿಗಳೊಂದಿಗೆ ಶಿಕ್ಷಕರಿಗೆ ಶುಭಾಶಯವನ್ನು ಕೋರಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ನಾಗರಾಜ್, ಶಿಕ್ಷಕರು ಹಾಗೂ ಪೋಷಕರು ಪಾಲ್ಗೊಂಡರು. ಶಾಲಾ ಗೈಡ್ ವಿದ್ಯಾರ್ಥಿನಿಯರಾದ ತನ್ವಿತ ಕಾರ್ಯಕ್ರಮ ನಿರೂಪಿಸಿದರು ಹಾಗೂ ವಿಧ್ಯಾರ್ಥಿ ಪ್ರಾರ್ಥನಾ ವಂದಿಸಿದರು.