dtvkannada

ಲೇಖನ: ಮುನಾಝ್ ಕೂರತ್

“ಎಲ್ಲಿ ನಾರಿಯನ್ನು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರು ವಾಸಿಸುತ್ತಾರೆ”
ಹೆಣ್ಣಿನ ಬಗ್ಗೆ ಇರುವ ಅತ್ಯಂತ ವಿಶೇಷವಾದ ಈ ಪದಗುಚ್ಛ ಎಷ್ಟು ಅರ್ಥಗಳನ್ನು ಬಿಂಬಿಸುತ್ತಲ್ಲವೇ..?ಎಲ್ಲಿ ಹೆಣ್ಣನ್ನು ಗೌರವ ಭಾವನೆಯಿಂದ ಕಾಣಲಾಗುತ್ತದೋ ಆ ಸ್ಥಳ ಅಷ್ಟೇ ಪವಿತ್ರವಾಗಿ, ನೆಮ್ಮದಿಯಾಗಿರುತ್ತದೆ ಎಂಬ ಮಹೋನ್ನತ ಅರ್ಥವನ್ನು ನೀಡುವ ಇಂತಹ ಪದಗಳನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ.
ವಿಶ್ವದಲ್ಲೇ ವಿಶಿಷ್ಟ ಸಂಪ್ರದಾಯಗಳನ್ನು ಹೊಂದಿರುವ ನಮ್ಮ ಭಾರತದಲ್ಲಿ ಹೆಣ್ಣಿಗೆ ಒಂದು ವಿಶೇಷ ಸ್ಥಾನಮಾನಗಳಿವೆ. ಆದರೆ, ಆ ಎಲ್ಲವೂ ಕೇವಲ ಪುಸ್ತಕಗಳಲ್ಲಿ, ನೇತಾರರ ಭಾಷಣಗಳಲ್ಲಿ ಮಾತ್ರ.
ಆದರೆ ವಾಸ್ತವದಲ್ಲಿ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಎನ್ನುವಂತ ಅಪ ಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಪಡೆಯುತ್ತಿದೆ. ಅದಕ್ಕೆ ಕಾರಣ ಇತ್ತೀಚಿಗೆ ನಡೆಯುತ್ತಿರುವ ಭೀಕರ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು, ಲಿಂಗ ತಾರತಮ್ಯ ಮುಂತಾದ ಪ್ರವೃತ್ತಿಗಳು ಪ್ರಮುಖ ಕಾರಣಗಳಾಗಿದೆ. ಜಾತಿ, ಜನಾಂಗ, ವರ್ಗ, ಪ್ರದೇಶ ವಯಸ್ಸು ಸಂಬಂಧ ಎಲ್ಲ ಬಗೆಯ ವ್ಯಾಪ್ತಿಯನ್ನು ಮೀರಿ ಈ ರೀತಿಯ ಹೇಯಕೃತ್ಯ ನಡೆಯುತ್ತಿದೆ ಎಂಬುದು ದುರಂತ ಸಂಗತಿಯಾಗಿದೆ. ಶಾಲಾ ಕಾಲೇಜು ಯೂನಿವರ್ಸಿಟಿ ಕ್ಯಾಂಪಸ್, ಕಾರ್ಯಸ್ಥಳ, ಹೊಲ ಪಾಲು ಬಿದ್ದ ಕಟ್ಟಡ, ಕೈಗಾರಿಕಾ ಪ್ರದೇಶ, ರೈಲು ನಿರಾಶ್ರಿತರ ತಾಣ,ಕ್ಲಬ್ ಬಾರ್ ಹೀಗೆ ಎಲ್ಲೆಂದರಲ್ಲಿ ನಡೆಯುವ ಅತ್ಯಾಚಾರ ಸಾಮೂಹಿಕ ಅತ್ಯಾಚಾರ ಮನುಷ್ಯನಲ್ಲಿ ಅಂತರ್ಗತವಾಗಿರುವ ಮೃಗೀಯತನಕ್ಕೆ ಸಾಕ್ಷಿಯಾಗಿದೆ.

ಕೆಲ ದಿನಗಳ ಹಿಂದೆ ರಾಜಧಾನಿ ದೆಹಲಿಯಲ್ಲಿ ಸಿವಿಲ್ ಡಿಫೆಂನ್ಸ್ ಉದ್ಯೋಗದಲ್ಲಿದ್ದ ಸಾಬಿಯಾ ಎಂಬ ಹೆಣ್ಣು ಮಗಳನ್ನು ಕೆಲ ದುಷ್ಕರ್ಮಿಗಳು ಸೇರಿ ಅತ್ಯಾಚಾರವೆಸಗಿ ಕೊಂದು ಬಿಟ್ಟರು. ಅವಳ ಕತ್ತು ಕೊಯ್ದು, ಸ್ತನ ಚೇದಿಸಿ ಆಯುಧಗಳನ್ನುಪಯೋಗಿಸಿ ಅತಿಕ್ರೂರವಾಗಿ ಕೊಂದಿದ್ದಾರೆ. ಮಾತ್ರವಲ್ಲ ಲೈಂಗಿಕ ಅಂಗಗಳಿಗೆ ಚುಚ್ಚಿದ್ದಾರೆ. ದೇಹದಲ್ಲಿ ಐವತ್ತಿಕ್ಕಿಂತಲೂ ಹೆಚ್ಚು ಗಾಯಗಳು ಕಂಡು ಬಂದಿದೆ. ಸಿನಿಮಾ ಕಥೆಯೋ ಕಾದಂಬರಿಯಲ್ಲಿ ನಡೆದ ಘಟನೆಯಲ್ಲ, ಹೆಣ್ಣು ದೇಶದ ಕಣ್ಣು ಎಂದು ಹಾಡಿ ಹೊಗಳುವ ಪ್ರಜಾಪ್ರಭುತ್ವ ಭಾರತದಲ್ಲಿ ಮಾಧ್ಯಮಗಳು ಚರ್ಚೆಗೆ ಮುಂದೆ ಬಂದಿಲ್ಲ ಕೊಂದವರ ವಿರುದ್ಧ ಪ್ರತಿಭಟನೆ ಇಲ್ಲ..! ರಾಜಧಾನಿಯಿಂದ ಯಾವುದೇ ಲೈವ್ ಪ್ರಕಟಣೆಗಳು ಕಾಣುತ್ತಿಲ್ಲ…! ಯಾವುದೋ ದೇಶದಲ್ಲಿರುವ ವ್ಯಕ್ತಿಗೆ ಅಥವಾ ಸಂಘಟನೆಗೆ ನೋವು ಅನ್ಯಾಯ ಉಂಟಾದಾಗ ಆದರ ವಿರುದ್ಧ ಧ್ವನಿ ಎತ್ತುವ ಬಾರತೀಯರೆಲ್ಲಿ…? ಕೆಲವೊಂದು ಮಾಧ್ಯಮಗಳು, ನಾಯಕರುಗಳು ಸುಮ್ಮನಾಗಿರುವುದು ಸಾಬೀಯಾ ಮುಸ್ಲಿಂ ಎಂಬ ಕಾರಣದಿಂದಲೇ..? ಹೆಣ್ಣೊ ಬ್ಬಳು ಮದ್ಯರಾತ್ರಿ ಒಬ್ಬಂಟಿಯಾಗಿ ಓಡಾಡುವ ಸಂದರ್ಭ ಬಂದರೆ ಮಾತ್ರ ಭಾರತದ ಸ್ವಾತಂತ್ರ ಪೂರ್ಣಗೊಳ್ಳುವುದು ಎಂಬ ಗಾಂದೀಜಿಯ ಮಾತು ಗಮನಾರ್ಹ.
ನಮ್ಮ ದೇಶದಲ್ಲಿ ಎಷ್ಟೊಂದು ಅಮಾನವೀಯ, ಪೈಶಾಚಿಕ ಅತ್ಯಾಚಾರ ಘಟನೆಗಳು ನಡೆದಿವೆ. ಆದರೆ ಅಂತಹ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ನಿರೀಕ್ಷಿತ ಸೂಕ್ತ ಶಿಕ್ಷೆ ಸಿಗುತ್ತಿಲ್ಲವೆಂಬುದು ಬೇಸರದ ಸಂಗತಿಯಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!