dtvkannada

✍ಲೇಖನ : ಬಾತಿಶ್ ತೆಕ್ಕಾರ್

ಬೇಕಲ್ ಉಸ್ತಾದ್ ನಮ್ಮನ್ನಗಲಿ ಒಂದು ವರುಷಗಳು ಕಳೆಯಿತು.
ಕರ್ನಾಟಕದಲ್ಲಿ ಖಾಝಿ ಎಂಬ ಮಹೋನ್ನತ ಸ್ಥಾನವನ್ನು ಅರ್ಥ ಪೂರ್ಣವಾಗಿ ಆಲಂಕರಿಸಿದವರಾಗಿದ್ದಾರೆ ಶೈಖುನಾ ತಾಜುಲ್ ಫುಕಹಾಃ ಬೇಕಲ್ ಉಸ್ತಾದ್.
ಕರ್ಮ ಶಾಸ್ತ್ರಗಳ ಕಿರೀಟವೆಂದೇ ಕರೆಯಲ್ಪಡುವ ಫಿಕ್ಹ್ ಶಾಸ್ತ್ರಜ್ಞ ಬೇಕಲ್ ಉಸ್ತಾದರ ಅಗಲುವಿಕೆ ಸಮುದಾಯದ ಅತೀ ದೊಡ್ಡ ನಷ್ಟದಲ್ಲಿ ಒಂದಾಗಿದೆ.
ಕರ್ನಾಟಕದ ಮಟ್ಟಿನಲ್ಲಿ
ಸಮುದಾಯದ ಯಾವುದೇ ಸಮಸ್ಯೆಗಳಿಗೂ ಉತ್ತಮ ರೀತಿಯಲ್ಲಿ ಫತ್ವಾ ನೀಡುತ್ತಿದ್ದ ಮಹೋನ್ನತ ಖಾಝಿಯಾಗಿದ್ದರು ಶೈಖುನ ಬೇಕಲ್ ಉಸ್ತಾದ್.

ಕೇವಲ ಧಾರ್ಮಿಕವಾಗಿಯೂ ಮಾತ್ರವಲ್ಲದೇ ಸಮಾಜ ಪರವಾದ ಎಲ್ಲಾ ಸಂಕಷ್ಟಗಳಿಗೂ ಆಧುನಿಕ ಕಾಲದಲ್ಲಿ ಉದಯಿಸುತ್ತಿದ್ದ ಹಲವಾರು ಸಮಸ್ಯೆಗಳಿಗೆ ಯಾವೊಬ್ಬನ ಮುಖ ನೋಡದೇ ಧೈರ್ಯದಿಂದಲೇ ಉತ್ತರಿಸುತ್ತಿದ್ದರು.
NRC, CAA ಸಮಸ್ಯೆಗಳು ನಮ್ಮ ಸಮುದಾಯಕ್ಕೆ ಅತೀ ದೊಡ್ಡ ತಲೆನೋವಾದಾಗ ಭಾರತದ ಮಣ್ಣಿನಲ್ಲಿ ಹುಟ್ಟಿದ ನಾವು ಮರಣದ ವರೆಗೂ ಇಲ್ಲೇ ಇರುತ್ತೇವೆ,
ಇದೇ ಮಣ್ಣಿನಲ್ಲಿ ಜನಿಸಿದ ನಾವು ಇಲ್ಲೇ ಸಾಯುತ್ತೇವೆ, ನಿಮ್ಮ ಕರಾಳ ಕಾನೂನುಗಳ ಮೂಲಕ ಹೊರ ನಡೆಯುವವರು ನಾವಲ್ಲ ಎಂಬ ಉಸ್ತಾದರ ಮಾತುಗಳು ಈ ಸಮುದಾಯ ಸರಕಾರಕ್ಕೆ ನೀಡಿದ ಎಚ್ಚರಿಕೆಯ ಮಾತುಗಳು ಮಾತ್ರವಲ್ಲ ಸಮುದಾಯದ ಧೈರ್ಯದ ಆಶ್ವಾಸನೆಯಾಗಿತ್ತು.

ಇದೊಂದು ಘಟನೆ ಮಾತ್ರವಲ್ಲ ಮುಸ್ಲಿಂ ಸಮುದಾಯದ ವಿರುದ್ಧ ಹಲವಾರು ವಿವಾದಗಳು, ಕಾನೂನುಗಳು ಬಂದಾಗ ಬೇಕಾದ ರೀತಿಯಲ್ಲಿ ಉತ್ತರಿಸಿದ ನಮ್ಮ ಸಮುದಾಯದ ಮರೆಯಲಾಗದ ಮಾಣಿಕ್ಯವಾಗಿದ್ದರು ಉಸ್ತಾದ್.
ಅದಕ್ಕೆಲ್ಲವೂ ಸಾಕ್ಷಿ ಎಂಬಂತೆ ಉಸ್ತಾದರ ಮರಣದ ದಿನ ಕಂಬನಿ ಮಿಡಿದ ಮುಸ್ಲಿಂ ಸಮುದಾಯವೇ ಸಾಕ್ಷಿ.
ಸಂಘಟನೆ ಅದು ಯಾವುದೇ ಇರಲಿ, ಸಮಸ್ಯೆಗಳು ಏನೇ ಇರಲಿ ತನ್ನ ಖಾಝಿ ಪಟ್ಟ ಎಂಬ ಮಹೋನ್ನತ ಜವಾಬ್ದಾರಿಯನ್ನು ಅಷ್ಟೇ ಜವಾಬ್ದಾರಿಯಾಗಿ ನಿಬಾಯಿಸಿದವರಾಗಿದ್ದರು.

ಈಗಲೂ ನೆನಪಿಗೆ ಬರುತ್ತಿದೆ ಉಸ್ತಾದರು ಮರಣ ಹೊಂದಿದ ದಿನ ನಮ್ಮ ಜಿಲ್ಲೆಯ ಇಬ್ಬರು ಖಾಝಿಗಳು ಹೇಳಿದ ಮಾತುಗಳು
ಶೈಖುನಾ ಮಾಣಿ ಉಸ್ತಾದರ ಕಣ್ಣೀರು ತುಂಬಿದ ಮಾತುಗಳು ಹೀಗಿತ್ತು ನನ್ನ ಆತ್ಮೀಯ ಸಹಪಾಠಿ ಅದಕ್ಕಿಂತಲೂ ಮಿಗಿಲಾಗಿ ನನ್ನ ಬಲ ಕೈ ಹೋದಂತಾಯಿತು,
ನನ್ನ ಮತ್ತು ಸಮುದಾಯದ ಹಲವಾರು ಸಮಸ್ಯೆಗಳಿಗೆ ಬಹು ದೊಡ್ಡ ಉತ್ತರವಾಗಿದ್ದರು ಶೈಖುನ ಬೇಕಲ್ ಉಸ್ತಾದ್ ನನ್ನಿಂದ ಮಾತನಾಡಲಾಗುತ್ತಿಲ್ಲ ಎಂಬ ಮಾಣಿ ಉಸ್ತಾದರ ಕಣ್ಣೀರು ತುಂಬಿದ ಮಾತುಗಳು ಈ ಸಮುದಾಯವನ್ನೇ ಕಣ್ಣೀರಿನಲ್ಲಾಗಿಸಿತು.
ಮತ್ತೋರ್ವ ಜಿಲ್ಲೆಯ ಖಾಝಿ ಶೈಖುನ ತ್ವಾಕ ಉಸ್ತಾದ್ ಹೇಳುತ್ತಾರೆ ನನ್ನ ಮತ್ತು ಬೇಕಲ್ ಉಸ್ತಾದರ ಸಂಬಂಧಗಳು ಆತ್ಮೀಯವಾಗಿತ್ತು, ಕರ್ಮಶಾಸ್ತ್ರದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಶೈಖುನ ಅದು ಎಷ್ಟೇ ದೊಡ್ಡ ಪ್ರಶ್ನೆಯಾದರು ನಿಮಿಷಗಳಲ್ಲಿ ತೃಪ್ತಿಕರವಾದ ಉತ್ತರ ನೀಡುತ್ತಿದ್ದರು ಉಸ್ತಾದರ ಅಗಲುವಿಕೆ ನನಗೆ ತುಂಬಾನೇ ನೋವು ನೀಡಿದೆ ಎಂದಾಗ ಮನ ಕರಗಿ ಹೋಯಿತು.

ಒಂದು ಸಂಘಟನೆಯ ನಾಯಕರಾಗಿದ್ದರು,
ಒಂದೇ ಸಂಘಟನೆಗೆ ಬೇಕಾಗಿ ದುಡಿದವರಲ್ಲ
ಎಲ್ಲರನ್ನು ಸಮಾನತೆಯವರಲ್ಲಿ ಕಂಡವರಾಗಿದ್ದಾರೆ ಬೇಕಲ್ ಉಸ್ತಾದ್.
ಉಸ್ತಾದರ ಅಗಲುವಿಕೆ ಈ ಸಮುದಾಯದ ಬರೀ ನಷ್ಟವಲ್ಲ ಹೇಳಲು ತೀರಲಾಗದ ಅತೀ ದೊಡ್ಡ ನಷ್ಟವಾಗಿದೆ.
ಇಂದಿಗೂ ನಾವು ಅನುಭವಿಸುತ್ತಿದ್ದೇವೆ.

ಕರ್ಮಶಾಸ್ತ್ರ ಪರವಾದ ಅದೇನೇ ಪ್ರಶ್ನೆಗಳು ಉದ್ಭವಿಸಲಿ ನಾಜೂಕಾಗಿ ಉತ್ತರಿಸಬಲ್ಲ ಉಸ್ತಾದ್
ಅಲ್-ಅನ್ಸಾರ್ ವಾರಪತ್ರಿಕೆಯಲ್ಲಿ ವಾರಂಪ್ರತಿ ಪ್ರಕಟಗೊಳ್ಳುವ ಕೇಳಿ-ನೋಡಿ ಅಂಕಣ ನೋಡಿದರೆ ಸಾಕು
ಇಂತಹ ಪ್ರಶ್ನೆಗಳು ಕೂಡ ಇವೆಯಾ?
ಎಂದು ನಮಗೆ ಅನಿಸದಿರಲಾರದು.
ಅದೆಂತಹ ಪ್ರಶ್ನೆಗಳಿಗೂ ಉತ್ತರಿಸಬಲ್ಲ ಅವರ ಪಾಂಡಿತ್ಯ ಅಷ್ಟಿಷ್ಟೇನಲ್ಲ.
ಸಮುದಾಯದಲ್ಲಿ ಯಾವುದೇ ಸಮಸ್ಯೆಗಳು ಬಂದರೂ ಅದಕ್ಕಿರುವ ಉತ್ತರ ಉಸ್ತಾದರ ಬಳಿ ಇತ್ತು.

ಉಸ್ತಾದರ ಕುರಿತು ಬರೆಯಲು ಹೋದರೆ ಒಂದು ಅತೀ ದೊಡ್ಡ ಗ್ರಂಥಾಲಯವೇ ಬೇಕಾದೀತು.
ನಾನಂತೂ ಅತೀ ದೊಡ್ಡ ಆತ್ಮೀಯ ಗುರುವನ್ನು ಕಳೆದುಕೊಂಡಂತಾಗಿದೆ ನಮ್ಮೆಲ್ಲಾ ಸಮಸ್ಯೆಗಳಿಗೂ, ನಮ್ಮ ಮನೆಯ ಸಂಭ್ರಮ ದುಃಖಗಳಿಗೂ ಉಸ್ತಾದ್ ನಮಗೊಂದು ಪರಿಹಾರವಾಗಿದ್ದರು.
ಹಲವಾರು ಸಲ ನಮ್ಮ ಮನೆಗೆ ಭೇಟಿ ನೀಡಿದ್ದರು ಶೈಖುನ.
ಉಸ್ತಾದರ ವಿಯೋಗ
ಅಲ್ಲಾಹ್ ಅದು ಹೇಳಲಾಗದ ದುಃಖವಾಗಿತ್ತು ನಮಗೆ.

By dtv

Leave a Reply

Your email address will not be published. Required fields are marked *

error: Content is protected !!