ಕಾಸರಗೋಡು, ಸೆ.14: ಎಸ್ಡಿಪಿಐ ಕಾರ್ಯಕರ್ತನ ಕೊಲೆಗೆ ಯತ್ನಿಸಿದ ಘಟನೆ ನಿನ್ನೆ ರಾತ್ರಿ ಕಾಸರಗೋಡು ಸಮೀಪದ ಕುಂಬಳೆ ಎಂಬಲ್ಲಿ ನಡೆದಿದೆ. ಎಸ್ ಡಿ ಪಿ ಐ ಆರಿಕ್ಕಾಡಿ ಬ್ರಾಂಚ್ ಅಧ್ಯಕ್ಷರಾಗಿರುವ ಝೈನುದ್ದೀನ್ ಎಂಬವರ ಮೇಲೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಅರಿಕ್ಕಾಡಿ ಕಡವತ್ ನಿವಾಸಿ ಝೈನುದ್ದೀನ್(30) ಎಂಬವರ ಮೇಲೆ ಕೊಲೆಯತ್ನ ನಡೆದಿದ್ದು, ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಬಂದ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಲೆಯತ್ನ ನಡೆಸಿ ಪರಾರಿಯಾಗಿದ್ದಾರೆ.
ಕುಂಬಳೆ ಠಾಣಾ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.