ಉಪ್ಪಿನಂಗಡಿ: ಇದ್ದಕ್ಕಿದ್ದಂತೆ ನಾಪತ್ತೆಯಾದ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ವಾಸವಾಗಿದ್ದ ಮೊಹಮ್ಮದ್ ರಫೀಕ್ ಖಾನ್ ಪತ್ತೆಯಾಗಿದ್ದಾನೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಮ್ಮದ್ ರಫೀಕ್ ಖಾನ್ ಪತ್ನಿ ನೆಕ್ಕಿಲಾಡಿ ನಿವಾಸಿ ಫಾತಿಮಾ ಅ.8 ರಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿ ಪತಿ ಬೆಂಗಳೂರುನಿಂದ ವಾಹನದ ಬಿಡಿಭಾಗಗಳನ್ನು ತರಲು ಹೋಗುತ್ತೆನೆಂದು ಹೇಳಿ ಮನೆಯಿಂದ ಹೊರಟು ಹೋದವರು ಮರಳಿ ಬರಲಿಲ್ಲವೆಂದು ತಿಳಿಸಿದ್ದರು.
ಅದರಂತೆ ಪ್ರಕರಣ ದಾಖಲಾಗಿತ್ತು.ಅದರಂತೆ ಮಹಮ್ಮದ್ ರಫೀಕ್ ಖಾನ್ ಪತ್ತೆ ಕಾರ್ಯದಲ್ಲಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಕಾಣೆಯಾದ ಮಹಮ್ಮದ್ ರಫೀಕ್ ಖಾನ್‌ರನ್ನು ಸೆ. 22 ರಂದು ಪತ್ತೆ ಹಚ್ಚಲಾಗಿ ಫಾತಿಮಾರಿಗೆ ವಿಡಿಯೋ ಕಾಲ್ ಮುಖೇನ ಮಾತನಾಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ ಕಾಣೆಯಾದ ಮಹಮ್ಮದ್ ರಫೀಕ್ ಖಾನ್ ಉತ್ತರ ಭಾರತದಲ್ಲಿ ಬಂಧಿತರಾದ ಉಗ್ರಗಾಮಿಗಳೊಂದಿಗೆ ಸಂಪರ್ಕ ಹೊಂದಿರುತ್ತಾರೆಂದು ಸ್ಥಳೀಯ ಪತ್ರಿಕೆ, ಮಾದ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು ಸದ್ರಿ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ ಪ್ರಸಾರವಾದ ವಿಷಯವು ಸತ್ಯಕ್ಕೆ ದೂರವಾದ ಸಂಗತಿಯಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.