ಉಪ್ಪಿನಂಗಡಿ: SSF ಸರಳಿಕಟ್ಟೆ ಸೆಕ್ಟರ್ ಮಟ್ಟದ ಯುನಿಟ್ ಗಳ ಸಬಲೀಕರಣ ಕ್ಯಾಂಪ್ ಸೆ:23 ರ ಗುರುವಾರ ಸಂಜೆ 7ಕ್ಕೆ ಬಾಜಾರ ಮದ್ರಸಾ ಹಾಲ್ ನಲ್ಲಿ ನಡೆಯಿತು.
ಸಂಘಟನಾ ತರಗತಿ ನಡೆಸಿ ಮಾತನಾಡಿದ ಅಬ್ದುಲ್ ರಹ್ಮಾನ್ ಸಖಾಫಿ ಅಳಕ್ಕೆ ತಾಳ ತಪ್ಪುತ್ತಿರುವ ಯುವ ಸಮೂಹವು ಜಾಗೃತರಾಗಬೇಕಾದ ಸಮುದಾಯಕ್ಕೆ ಸಂಘಟನಾ ಹಾದಿಗಳು ಉತ್ತಮವಾಗಿರಲಿ.ಆ ನಿಟ್ಟಿನಲ್ಲಿ ನಮ್ಮ ಕಾರ್ಯಾಚರಣೆಗಳು ಮುಂದುವರಿಯಬೇಕು ಇಹದ ಆಸೆಗಳನ್ನು ಮುರಿದು ಪರಲೋಕ ಯಶಸ್ವಿ ನಮ್ಮ ಗುರಿಯಾಗಿರಬೇಕೆಂದು ಅವರು ತರಗತಿ ಮಂಡಿಸಿದರು.

ಬಾಜಾರ ಮದ್ರಸಾ ಉಸ್ತಾದ್ ಅಬೂಬಕ್ಕರ್ ಝುಹ್ರಿ ಕಾರ್ಯಕ್ರಮವ ಉದ್ಗಾಟಿಸಿದರು.SSF ಸರಳಿಕಟ್ಟೆ ಸೆಕ್ಟರ್ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಸಖಾಫಿ ಬೈಲಮೇಲು, ಸೆಕ್ಟರ್ ಕಾರ್ಯದರ್ಶಿ ಕೆ.ಪಿ ಬಾತಿಶ್ ತೆಕ್ಕಾರು SYS ನೇತಾರ ರಫೀಕ್ ಕುಟ್ಟಿಕಳ , N.H ಅಬ್ದುಲ್ ರಹಿಮಾನ್ ಬಾಜಾರ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.
ಇದೇ ವೇಳೆ ಸೆಕ್ಟರ್ ಸಮಿತಿಯಲ್ಲಿ ಸಕ್ರಿಯವಾಗಿ ಕಾರ್ಯಾಚರಿಸಿ ಉದ್ಯೋಗಕ್ಕಾಗಿ ವಿದೇಶ ಯಾತ್ರೆ ಹೊರಡುವ ಫಾರೂಕ್ ಬಾಜಾರ್ ರವರನ್ನು ಬೀಳ್ಕೊಡಲಾಯಿತು.SSF ಸರಳಿಕಟ್ಟೆ ಸೆಕ್ಟರ್ ಅಧ್ಯಕ್ಷ ನಾಸಿರ್ ಮುಈನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಿಹಾಬ್ ಬಾಗ್ಲೋಡಿ ಸ್ವಾಗತಿಸಿ ವಂದಿಸಿದರು.SSF ಸರಳಿಕಟ್ಟೆ ಸೆಕ್ಟರ್ ವ್ಯಾಪ್ತಿಯ ಎಂಟು ಯುನಿಟ್ ಗಳ ಆಯ್ದ ಕಾರ್ಯಕರ್ತರು ಬಾಗವಹಿಸಿದರು.