dtvkannada

ಬೆಂಗಳೂರು : “ಬತ್ತದ ತೊರೆ ಸ್ನೇಹ ಬಳಗ” ಕಾರಂತಜ್ಜನ ನೆರಳಿನಡಿಯಲ್ಲಿ ಎಂಬ ಅಡಿಬರಹದೊಂದಿಗೆ ಹುಟ್ಟಿಕೊಂಡ ಹೊಸ ಸಾಹಿತ್ಯ ಬಳಗವು ಅಕ್ಟೋಬರ್ ಮೊದಲ ವಾರದಲ್ಲಿ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳನ್ನು ನಡೆಸಲು ಮುಂದಾಗಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.

ಸ್ಪರ್ದೆಗಳ ವಿವರ:
(೧)ದಿನಾಂಕ : ೦೪/೧೦/೨೦೨೧ ಸೋಮವಾರ ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆ
(ವಿ.ಸೂ : ವಿಷಯ ನಿಮ್ಮ ಆಯ್ಕೆ. ಸಾಲುಗಳ ಮಿತಿ : ೨೦-೨೪ ಸಾಲುಗಳು. ಮೊಬೈಲ್ ಅಡ್ಡ ಹಿಡಿದು ವೀಡಿಯೋ ಮಾಡಿರಿ. ಸುಮಾರು ಮೂರು ನಿಮಿಷಗಳ ಕಾಲ)

(೨) ದಿನಾಂಕ : ೦೫/೧೦/೨೦೨೧ ಮಂಗಳವಾರ
“ನಾ ಓದಿದ ಕಾರಂತರ ಕಾದಂಬರಿ ವಿಮರ್ಶಾ ಲೇಖನ ಸ್ಪರ್ಧೆ”
(ವಿ.ಸೂ : ಪದಗಳ ಮಿತಿ ೧೦೦೦ ಪದಗಳು ಸುಮಾರು ಎರಡು ಪುಟಗಳಷ್ಟು)

(೩) ದಿನಾಂಕ : ೦೬/೧೦/೨೦೨೧ ಬುಧವಾರ
“ಲಲಿತ ಪ್ರಬಂಧಾ ಸ್ಪರ್ಧೆ”
(ವಿ.ಸೂ : ವಿಷಯ ನಿಮ್ಮದೇ ಇರಲಿ. ಪದಗಳ ಮಿತಿ ೧೦೦೦- ೧೫೦೦ (ಸುಮಾರು ಎರಡರಿಂದ ಮೂರು ಪುಟಗಳಷ್ಟು)

(೪) ದಿನಾಂಕ : ೦೭/೧೦/೨೦೨೧ ಗುರುವಾರ
ನೀವು ಭೇಟಿ ಮಾಡಿದ ಕುತೂಹಲಭರಿತ ಸ್ಥಳದ ಕುರಿತಾದ “ಪ್ರವಾಸ ಕಥನ”
(ವಿ.ಸೂ : ಪದಗಳ ಮಿತಿ ೧೦೦೦, ಸುಮಾರು ಎರಡು ಪುಟಗಳಷ್ಟು)

(೫) ದಿನಾಂಕ : ೦೮/೧೦/೨೦೨೧ ಶುಕ್ರವಾರ
“ಮಕ್ಕಳ ನಾಟಕ ರಚನೆ”
(ವಿ.ಸೂ : ವಿಷಯ ನಿಮ್ಮದೇ ಇರಲಿ. ಸುಮಾರು ಎರಡರಿಂದ ಮೂರು ಪುಟಗಳು, ಪಾತ್ರಗಳ ಸಂಖ್ಯೆ ೫-೭)

(೬) ದಿನಾಂಕ : ೦೯/೧೦/೨೦೨೧ ಶನಿವಾರ
ಚಟುವಟಿಕೆ ವಿಭಾಗದಲ್ಲಿ ಕಾರಂತರ ಭಾವಚಿತ್ರ ಅಥವಾ ಅವರ ಕಾದಂಬರಿಯ ಮುಖಪುಟದ ಚಿತ್ರವನ್ನು ಬಿಡಿಸುವುದು.

ನಿಯಮಗಳು :
-ಹಿರಿಯರು , ಕಿರಿಯರು, ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದಾಗಿದೆ.
-ಇಮೇಜ್ ಗಳನ್ನು ಸ್ವೀಕರಿಸುವುದಿಲ್ಲ.
-ಬರಹಗಳಿಗೆ ಸೂಕ್ತ ಶೀರ್ಷಿಕೆ ನೀಡಬೇಕಾಗಿ ಕೋರಿಕೆ.
-ನಿಮ್ಮ ಹೆಸರು, ಊರು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಿರಬೇಕು.
-ಭಾಗವಹಿಸಿದ ಪ್ರತಿಯೊಬ್ಬರಿಗೂ ಇ-ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು. ಹಾಗೂ ಮೊದಲ‌ ಮೂವರು ವಿಜೇತರಿಗೆ ಪುಸ್ತಕ ಬಹುಮಾನದ ಜೊತೆಗೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು.

ನಿಮ್ಮ ಬರಹಗಳನ್ನು ಕಳುಹಿಸಬೇಕಾದ ಇ-ಮೇಲ್ ಐಡಿ : battadatore@gmail.com
ಹೆಚ್ಚಿನ ಮಾಹಿತಿಗಾಗಿ : +91 7795743862 ಸಂಪರ್ಕಿಸಿ

“ಕಾರಂತರ ಜನ್ಮದಿನದ ಅಂಗವಾಗಿ ಸ್ಪರ್ಧೆಗಾಗಿ” ಎಂದು ನಮೂದಿಸಿರಿ. ಸ್ಪರ್ದೆಯಲ್ಲಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಬತ್ತದ ತೊರೆ ಸ್ನೇಹ ಬಳಗ, ಬೆಂಗಳೂರು ಇದರ ನಿರ್ವಾಹಕರು ವಿನಂತಿಸಿದ್ದಾರೆ

By dtv

Leave a Reply

Your email address will not be published. Required fields are marked *

error: Content is protected !!