dtvkannada

ಬೆಂಗಳೂರು, ಸೆ.27: ಕಳೆದ ಎಂಟು ವರ್ಷಗಳಿಂದ ಸೇವಾ ರಂಗದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯು ತೊಡಗಿಸಿಕೊಂಡು ಬಂದಿದ್ದು, ಕಳೆದ ಕೆಲ ದಿನಗಳ ಹಿಂದೆ NIFAA ಸಂಸ್ಥೆಯ ವತಿಯಿಂದ ರಾಷ್ಟ್ರವ್ಯಾಪಿ ಆಯೋಜಿಸಿದ್ದ ಸ್ವಾತ್ಯತ್ರ ಹೋರಾಟಗರರ ಶಹೀದ್ ದಿವಸ್ ಪ್ರಯುಕ್ತ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ರಕ್ತದಾನ ಶಿಬಿರದಲ್ಲಿ ಅತಿ ಹೆಚ್ಚು ರಕ್ತ ದಾನ ಶಿಬಿರ ಮತ್ತು ರಕ್ತ ಸಂಗ್ರಹ ವಿಚಾರದಲ್ಲಿ ಅತ್ಯುತ್ತಮ ಸೇವೆಯನ್ನು ಮನಗಂಡು, NIFAA ಸಂಸ್ಥೆಯು ಆಯೋಜಿಸಿದ ಇಂಟರ್ ನ್ಯಾಷನಲ್ ಲೈಫ್ ಸೇವರ್ ಅವಾರ್ಡ್ ಸಮಾರಂಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ರಿ ಸಂಸ್ಥೆಗೆ ಬೆಂಗಳೂರು ಗಾಂಧಿ ಭವನದಲ್ಲಿ ಇಂಟರ್ ನ್ಯಾಷನಲ್ ಲೈಫ್ ಸೇವರ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಇದರ ಜೊತೆಗೆ ಬ್ಲಡ್ ಡೋನರ್ಸ್ ಮಂಗಳೂರು ರಿ ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ನವಾಝ್ ಕಲ್ಲರಕೋಡಿ, ಹಮೀದ್ ಫಜೀರ್ ಇವರಿಗೆ ಗೌರವ ಪುರಸ್ಕಾರ ಪ್ರಶಸ್ತಿ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಜೊತೆಗೆ ಆನಿವಾಸಿ ಕಾರ್ಯ ನಿರ್ವಾಹಕ ನೌಫಲ್ ಬಜ್ಪೆ ಇವರಿಗೆ ಸೇವಾಗೌರವ ಪ್ರಶಸ್ತಿ ನೀಡಲಾಯಿತು.

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಮಂತ್ರಿಗಳೂ ಮಾಜಿ ಮುಖ್ಯ ಮಂತ್ರಿಗಳೂ ಆದ ಸದಾನಂದ ಗೌಡ, ಹಾಗೂ ಮಾಜಿ ಸಚಿವರದ ಯು.ಟಿ.ಖಾದರ್ ಮತ್ತು ಹಲವಾರು ಗಣ್ಯರು ಈ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದರು.ಈ ಸಂಧರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಬ್ಲಡ್ ಡೋನೇಶನ್ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!