ಸಾಂದರ್ಭಿಕ ಚಿತ್ರ
ಉಪ್ಪಿನಂಗಡಿ: ಕಾರಿನಲ್ಲಿ ಬಂದ ಅಪಹರಣಕಾರರು ಬಾಲಕನೊಬ್ಬನನ್ನು ಅಪಹರಿಸಲು ಯತ್ನಿಸಿದ ಘಟನೆ ಉಪ್ಪಿನಂಗಡಿಯ ಮಠ ಎಂಬಲ್ಲಿ ನಿನ್ನೆ ಸಂಜೆ ನಡೆಡಿದೆ.
ಓಮ್ನಿ ಕಾರಿನಲ್ಲಿ ಬಂದವರು ಬಾಲಕನನ್ನು ಅಪಹರಿಸಲು ಯತ್ನಿಸಿದ್ದು, ಬಾಲಕ ಅವರ ಹಿಡಿತದಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾನೆ ಎಂದು ತಿಳಿದು ಬಂದಿದೆ.ಅಪಹರಣ ಯತ್ನಕ್ಕೆ ಒಳಗಾದ ಬಾಲಕನನ್ನು ಹಿರ್ತಡ್ಕದ ಜನತಾ ಕಾಲನಿ ಯ ಸಿಫಾನ್ (14) ಎನ್ನಲಾಗಿದೆ.ಮಂಗಳವಾರ ಸಂಜೆ ಬೀಡಿ ನೀಡಲು ಬೀಡಿ ಬ್ರಾಂಚ್‌ಗೆ ತೆರಳುತ್ತಿದ್ದ ವೇಳೆ ಅಪಹರಣದ ವಿಫಲ ಯತ್ನ ನಡೆದಿದೆ.ಬಾಲಕ ಸಿಫಾನ್ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆತನ ಹಿಂಬದಿಯಿಂದ ಓಮ್ನಿ ಕಾರು ಬಂದಿದೆ ಎನ್ನಲಾಗಿದೆ.
ಒಮ್ನಿಯಿಂದ ಓರ್ವ ಇಳಿದಿದ್ದು ಆತ ಬಾಲಕನ ಕೈಯನ್ನು ಹಿಡಿದಿದ್ದಾನೆ.ಈ ವೇಳೆ ಓಮ್ನಿ ಕಾರು ಇವನಿಗೆ ಅಡ್ಡಲಾಗಿ ಬಂದು ನಿಂತಿತ್ತು ಎಂದು ಬಾಲಕ ಮನೆಯವರಲ್ಲಿ ತಿಳಿಸಿದ್ದ ಎನ್ನಲಾಗಿದೆ.ಆಗ ಈ ಬಾಲಕ ಅಪಹರಣಕಾರರಿಂದ ಬಿಡಿಸಿಕೊಂಡು ಮನೆಗೆ ಓಡಿ ಬಂದಿದ್ದಾನೆ. ಓಮ್ನಿಯೂ ಬೆಂಗಳೂರು ಕಡೆ ಪರಾರಿಯಾಗಿದೆ ಎನ್ನಲಾಗಿದೆ.
ತಿಂಗಳ ಹಿಂದೆ ಇದೇ ರೀತಿ ನಡೆದಿತ್ತು:ತಿಂಗಳ ಹಿಂದೆ ( ಅ.28) ಉಪ್ಪಿನಂಗಡಿಯ ಲಕ್ಷ್ಮೀ ನಗರ ನಿವಾಸಿ 12 ರ ಹರೆಯದ ಬಾಲಕನ ಅಪಹರಣಕ್ಕೂ ವಿಫಲ ನಡೆದಿತ್ತು. ಆ ಬಾರಿಯೂ ದುಷ್ಕರ್ಮಿಗಳು ಕೃತ್ಯಕ್ಕೆ ಓಮ್ನಿ ಕಾರನ್ನೇ ಬಳಸಿದ್ದರು ಎಂದು ಹೇಳಲಾಗಿತ್ತು. ಇದೀಗ ಆ ಘಟನೆ ನಡೆದು ಸರಿಯಾಗಿ ಒಂದು ತಿಂಗಳು ಕಳೆಯುತ್ತಲೇ ಮತ್ತೊಂದು ಬಾಲಕನ ಅಪಹರಣ ಯತ್ನ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಭೀತಿಗೆ ಕಾರಣವಾಗಿದೆ.