dtvkannada

'; } else { echo "Sorry! You are Blocked from seeing the Ads"; } ?>

ಲೇಖನ: ಶಫೀಕ್ ಮಾಸ್ಟರ್ ತಿಂಗಳಾಡಿ

ಪುತ್ತೂರು: ಕುಂಬ್ರ ಸಮೀಪದ ಅರಿಕ್ಕಿಲ ನಿವಾಸಿ ಉಮರ್ ಕುಂಞಿ(28ವರ್ಷ) ನಿನ್ನೆ ಅಕಾಲಿಕವಾಗಿ ಅನಾರೋಗ್ಯ ಕಾರಣ ನಮ್ಮಿಂದ ಅಗಲಿದಾಗ ಮಿಡಿದ ಹ್ರದಯಗಳು ಸಾವಿರಾರು. ಚೆರಿಯೆ ಬಯಸ್ಸಲ್ಲೇ, ಎಂದಾಯೇ (ಸಣ್ಣ ವಯಸ್ಸಲ್ವಾ, ಏನಾದದ್ದು) ಎಂದು ಕೇಳದವರಿಲ್ಲ. ತಂದೆ, ತಾಯಿ, ಪತ್ನಿ ಹಾಗೂ ಎರಡು ಮುದ್ದು ಮಕ್ಕಳನ್ನು ಬಿಟ್ಟು ಅಲ್ಲಾಹನೆಡೆಗೆ ಯಾತ್ರೆಯಾದರು.

'; } else { echo "Sorry! You are Blocked from seeing the Ads"; } ?>

ಅರಿಕ್ಕಿಲ ಊರಿನವರಿಗೆ ಸಂಬಂದಿಸಿದಂತೆ SSF ಕಾರ್ಯಕರ್ತ ಅಚ್ಚುವಿನ(ಅಶ್ರಫ್) ಬಳಿಕ ನಷ್ಟವಾದ ಎರಡನೇ ಯುವಕ ಉಮರ್ ಕುಂಞಿ. ಬಹಳ ಸೌಮ್ಯ ಸ್ವಭಾವದ ಯಾರಲ್ಲೂ ಹೆಚ್ಚು ಮಾತನಾಡದ, ಎಲ್ಲರನ್ನೂ ಸ್ನೇಹದಿಂದ ಕಾಣುತ್ತಿದ್ದ ಯುವಕ. SSF ಅರಿಕ್ಕಿಲ ಶಾಖೆಯ ಸದಸ್ಯನಾಗಿದ್ದ.

ಮರಣದ ವಾರ್ತೆ ಕೇಳಿದ ಹಲವರು ಕಂಬನಿ ಮಿಡಿದರು. ಮಂಗಳೂರಿನ ಆಸ್ಪತ್ರೆಯಿಂದ ಜನಾಝ ಬರುವಾಗ ಸಾವಿರಾರು ಮಂದಿ ಅಲ್ಲಿ ಜಮಾಯಿಸಿದ್ದರು. ಅರಿಕ್ಕಿಲ ಮಸೀದಿಯಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸುವ ಸಂದರ್ಭದಲ್ಲಿ ಅಲ್ಲಿನ ಖತೀಬ್ ಉಸ್ತಾದರು ಅವನ ಬಗ್ಗೆ ಹೇಳಿದರು. ಮಯ್ಯಿತ್ ನಮಾಝ್‌‌ನಿಂದ ಹಿಡಿದು ತಲ್ಕೀನ್ ಓದುವವರೆಗೆ ಎಲ್ಲದಕ್ಕೂ ಉಸ್ತಾದರು ನೇತೃತ ನೀಡಿದರು. ಉಮರ್ ಕುಂಞಿ ಆ ಉಸ್ತಾದರ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ ಎಂಬುದಕ್ಕೆ ಅದುವೇ ಸಾಕ್ಷಿ.

'; } else { echo "Sorry! You are Blocked from seeing the Ads"; } ?>

ಕಬ್‌ರ್‌ನ ಬಳಿ ಗದ್ಗದಿತರಾಗಿ ಉಸ್ತಾದರು ಒಂದು ಮಾತನ್ನು ಹೇಳಿದರು. “ನಾನು ಮದ್ರಸ ಕಲಿಸಿದ, ನಾನು ನಿಕಾಹ್ ನೆರವೇರಿಸಿದ ನನ್ನ ಶಿಷ್ಯನಿಗೆ ನಾನೇ ಮಯ್ಯಿತ್ ನಮಾಝ್‌ಗೆ ನೇತೃತ್ವ ನೀಡುವೆನು ಎಂದು ಊಹಿಸಿರಲಿಲ್ಲ.” ಕಬ್‌‌ರ್‌ನ ವಿಧಿವಿಧಾನಗಳು ಮುಗಿದ ಬಳಿಕ SYS- SSF ಕುಂಬ್ರ ಸೆಕ್ಟರ್ ನ ಕಾರ್ಯಕರ್ತರು ಅಲ್ಲೇ ಒಂದು ಖತಂ ಖುರ್‌ಆನ್ ಓದಿ ಮುಗಿಸಿ,ತಹ್ಲೀಲ್ ಹೇಳಿ, ಯಾ ಅಕ್‌ರಮ ಬೈತ್ ಹಾಡಿ ಸಮರ್ಪಿಸಿದರು. ಒಟ್ಟಿನಲ್ಲಿ ಹೇಳುವುದಾದರೆ ಹಲವು ಉಸ್ತಾದರುಗಳ, ಕಾರ್ಯಕರ್ತರ, ಸ್ನೇಹಿತರ ಸಮ್ಮುಖದಲ್ಲಿ ಪುಣ್ಯ ಕರ್ಮಗಳ ಸಮರ್ಪನೆಯೊಂದಿಗೆ ಪರಲೋಕ ಜೀವನ ಪ್ರಾರಂಭಿಸಿದ ಭಾಗ್ಯವಂತನಾಗಿದ್ದಾನೆ ಅರಿಕ್ಕಿಲ ಉಮರ್ ಕುಂಞಿ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!