ಪುತ್ತೂರು : ಸರಕಾರಿ ಆಸ್ಪತ್ರೆಯಲ್ಲಿ ಇಂದು ವಿಶ್ವ ಹೃದಯ ದಿನದ ಪ್ರಯುಕ್ತ ನಡೆದ ಮದುಮೇಹ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಪುತ್ತೂರು ಸರಕಾರಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ ಯದುರಾಜ್ ಡಿ.ಕೆ ಯವರು ಮಾತನಾಡಿ ನಮ್ಮ ಆರೋಗ್ಯದ ಬಗ್ಗೆ ನಾವೇ ಹೆಚ್ಚು ನಿಗಾ ಇರಿಸಿಕೊಂಡು ನಮ್ಮ ಆಹಾರ ಪದ್ದತಿ ಮತ್ತು ಜಾಗ್ರತೆಯನ್ನು ಹೆಚ್ಚಿಸಿಕೊಂಡಾಗ ಹೆಚ್ಚಿನ ರೋಗಗಳು ಬರುವುದು ತಡೆಗಟ್ಟಬಹುದು.

ಮದ್ಯಪಾನ ,ದೂಮಪಾನ ದಿಂದ ದೂರ ಇದ್ದು,ವಿಪರೀತ ಆಹಾರ ಸೇವನೆಯನ್ನು ಬಿಟ್ಟು ಅಗತ್ಯ ದೇಹಕ್ಕೆ ಬೇಕಾದಷ್ಟು ಶುದ್ಧ ಆಹಾರ ಸೇವಿಸುವ ಮೂಲಕ ಸ್ವಚ್ಚತೆಯಿಂದ ಕೂಡಿದ ಜೀವನ ನಮ್ಮನ್ನು ಇನ್ನಷ್ಟು ಆರೋಗ್ಯದ ಕಡೆ ಕೊಂಡು ಹೋಗುತ್ತದೆ ಎಂದರು.

ಇನ್ನೊರ್ವ ಅತಿಥಿ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮೀತಿ ಸದಸ್ಯರಾದ ರಾಜೇಶ್ ಬನ್ನೂರ್ ಮಾತನಾಡಿ ರೋಟರಿ ಕ್ಲಬ್ ಗಳು ವಿಶ್ವದಾದ್ಯಂತ ಉತ್ತಮ ಸೇವೆ ಮಾಡುತ್ತಿದ್ದು ಈ ನಿಟ್ಥಿನಲ್ಲಿ ರೋಟರಿ ವಿಶ್ವ ಹ್ರದಯ ದಿನದ ಪ್ರಯುಕ್ತ ಜನರೆಡೆಗೆ ಆರೋಗ್ಯ ಅರಿಯುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ,ಅದೇ ರೀತಿ ರೋಟರಿ ನಮ್ಮ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಸಹಕಾರ ನೀಡಿದ್ದೂ ಅಲ್ಲದೆ ಕೊರೋನಾ ಸಂದಿಗ್ಧ ಪರಿಸ್ತಿತಿಯಲ್ಲೂ ಆಸ್ಪತ್ರೆಗೆ ಹೆಚ್ಚಿನ ಸಹಕಾರ ನೀಡಿದ್ದು ಅದಕ್ಕಾಗಿ ರೋಟರಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರುರೋಟರಿ ಸೆಂಟ್ರಲ್ ಅದ್ಯಕ್ಷದಾದ ರೋ ನವೀನ್ ಚಂದ್ರ ನಾಯ್ಕ್ ಸ್ವಾಗತಿಸಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಲಾಯಿತು, ಚೇತನಾ ಆಸ್ಪತ್ರೆ ಪುತ್ತೂರು ಇಲ್ಲಿನ ಡಯಾಗ್ನಾಸ್ಟಿಕ್ ಲ್ಯಾಬೋರೇಟರಿಯ ರೋ ನೋಯಲ್ ಡಿಸೋಜ ,ಆರೋಗ್ಯ ರಕ್ಷಾ ಸಮೀತಿ ಸದಸ್ಯರಾದ ರೋ ರಫೀಕ್ ದರ್ಬೆ ,ಆರೋಗ್ಯ ರಕ್ಷಾ ಸಮೀತಿ ಸದಸ್ಯರಾದ ಕ್ರಷ್ಣ ನಾಯ್ಕ್ ಪಿ ಎಮ್ ,ರಕ್ಷಾ ಸಮೀತಿ ಸದಸ್ಯರಾದ ಡಾ ಪ್ರಸನ್ನ ,ರೋಟರಿ ಸೆಂಟ್ರಲ್ ಸ್ಥಾಪಕ ಅದ್ಯಕ್ಷರಾದ ರೋ ಸಂತೋಷ್ ಶೆಟ್ಟಿ,ರೋ ಸನತ್ ರೈ ,ರೋ ಭಾರತಿ ರೈ,ವರ್ತಕ ಸಂಘದ ಮಾಜಿ ಅದ್ಯಕ್ಷರಾದ ಪದ್ಮನಾಭ ಶೆಟ್ಟಿ,ಸದಾನಂದ ಕೆ,ರೋ ಇಂದಿವರ್ ಭಟ್,ರೋ ಪುರುಷೋತ್ತಮ್ ಶೆಟ್ಥಿ,ರೋ ಪ್ರದೀಪ್ ಪೂಜಾರಿ,ರೋ ವೆಂಕಟರಾಜ್ ,ರೋ ಅಶೋಕ್ ನಾಯ್ಕ್ ,ರೋ ಅಮಿತಾ ಶೆಟ್ಥಿ,ರೋ ಲಾವಣ್ಯ,ರೋ ಯತೀಶ್,ರೋ ಅಶ್ರಫ್,ರೋ ಅಶೋಕ್ ನಾಯ್ಕ್,ರೋ ರಮೇಶ್ ರೈ ಡಿಂಬ್ರಿ,ರೋ ಅಭಿಜ್ನಾ,ಮುಂತಾದವರು ಉಪಸ್ತಿತರಿದ್ದರುಪುತ್ತೂರು ಡಯಾಗ್ನೆಸ್ಟಿಕ್ ಲ್ಯಾಬೋರೇಟರಯ ಸುದೇಶ್,ಲಿಕಿತ್ ಮತ್ತು ಅನೆಟ್ ಆಶಿಕ್ ಮುಕ್ವೆ ತಪಾಸಣಾ ಕಾರ್ಯದಲ್ಲಿ ಸಕ್ರೀಯವಾಗಿ ಸಹಕರಿಸಿದರು.