ಕಾವೂರು: ಮಾರಕ ಕಾಯಿಲೆಗೆ ತುತ್ತಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾಳೆ
ಕುಂಜತ್ ಬೈಲ್ ನಿವಾಸಿಗಳಾದ ಅಶ್ರಪ್ ಹಾಗೂ ರಝಿಯಾ ದಂಪತಿಗಳ ಮಗಳಾದ 10 ವರ್ಷದ ಆಸಿಯ ರಿಝ ಮಾರಕ ಬೋನ್ ಕ್ಯಾನ್ಸರಿಗೆ ತುತ್ತಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.ಕ್ಯಾನ್ಸರ್ಗೆ ಚಿಕಿತ್ಸೆ ಯಶಸ್ವಿಯಾಗುತ್ತಲೇ ನ್ಯೂಮೋನಿಯಾಗೆ ತುತ್ತಾಗಿ ತೀವ್ರ ಘಟಕದಲ್ಲಿದ್ದ ಅಸಿಯಾ ರಿಝಾ ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾಳೆ.
ಆಕೆಯ ಚಿಕಿತ್ಸೆಗೆ ನೆರವು ಕೋರಿ ಕಾರುಣ್ಯ ನಿಧಿ ಚಾರಿಟೇಬಲ್ ಟ್ರಸ್ಟ್(ರಿ) ದಾನಿಗಳ ಬಳಿ ಸಹಾಯ ಯಾಚಿಸಿತ್ತು. ದಾನಿಗಳ ನೆರವಿನಿಂದ ಕಾರುಣ್ಯ ನಿಧಿ ಕರ್ನಾಟಕ ರಿಝಾಳ ಚಿಕಿತ್ಸೆಗೆ 16 ಲಕ್ಷ ರೂಪಾಯಿ ಶೇಖರಿಸಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮೃತ ಬಾಲಕಿ ತಂದೆ, ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.