dtvkannada

ಚೆನ್ನೈ: ಯೋಗ ಕಲಿಯಲು ಬರುತ್ತಿದ್ದ ಯುವತಿಯ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದ 45 ವರ್ಷದ ಯೋಗ ಶಿಕ್ಷಕನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿ 22 ವರ್ಷದವಳಾಗಿದ್ದಾಳೆ.

ಬಂಧಿತ ಯೋಗ ಬೋಧಕನ ಹೆಸರನ್ನು ಯೋಗರಾಜ್ ಅಲಿಯಾಸ್ ಪೂವೇಂದ್ರನ್ ಚಿದಂಬರಂ ಎಂದು ಗುರುತಿಸಲಾಗಿದೆ. ಈತ ಪದೇಪದೆ ಆಕೆಯ ಮೇಲೆ ರೇಪ್​ ಮಾಡಿದ್ದಲ್ಲದೆ, ಆ ವಿಡಿಯೋವನ್ನು ಇಂಟರ್​ನೆಟ್​​ನಲ್ಲಿ ವೈರಲ್​ ಮಾಡುವ ಬೆದರಿಕೆಯೊಡ್ಡುತ್ತಿದ್ದ ಎನ್ನಲಾಗಿದೆ.  

ಸಂತ್ರಸ್ತ ಯುವತಿ ಮಾಂಬಲಂ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ. ಯೋಗ ಕಲಿಸುವ ಶಿಕ್ಷಕ ಮೊದಲ ಬಾರಿ ರೇಪ್​ ಮಾಡಿದ್ದು ಏಪ್ರಿಲ್​​ನಲ್ಲಿ. ಆಗ ಬರ್ತ್​ ಡೇ ಪಾರ್ಟಿಯೊಂದಕ್ಕೆ ಆಮಂತ್ರಿಸಿದ್ದ. ಅಲ್ಲಿ ಹೋಗಿದ್ದ ನನಗೆ ತಂಪುಪಾನೀಯದಲ್ಲಿ ಮತ್ತುಬರುವ ಔಷಧಿ ಕೊಟ್ಟು ಎಚ್ಚರತಪ್ಪಿಸಿದ್ದ. ಮೈಮೇಲೆ ಎಚ್ಚರವಿಲ್ಲದೆ ಬಿದ್ದಿದ್ದ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ಅದನ್ನು ವಿಡಿಯೋ ಮಾಡಿಟ್ಟುಕೊಂಡಿದ್ದ. ನಂತರ ಅದನ್ನು ಇಂಟರ್​ನೆಟ್​​ನಲ್ಲಿ ಹರಿಬಿಡುವ ಬೆದರಿಕೆಯೊಡ್ಡಿ, ಪದೇಪದೇ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಿದ್ದಾಳೆ. 

ಪೊಲೀಸರು ಪರಿಶೀಲನೆ ನಡೆಸಿದಾಗ ಈ ವ್ಯಕ್ತಿಯ ಮೊಬೈಲ್​ನಲ್ಲಿ ಹಲವು ಮಹಿಳೆಯರ, ಯುವತಿಯರ ಅಶ್ಲೀಲ ವಿಡಿಯೋಗಳು ಇರುವುದು ಪತ್ತೆಯಾಗಿದೆ. ಸದ್ಯ ಈತನ ಲ್ಯಾಪ್​ಟಾಪ್​, ಮೊಬೈಲ್​ಗಳನ್ನೆಲ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶೀಘ್ರದಲ್ಲೇ  ಕೋರ್ಟ್​​ಗೆ ಹಾಜರುಪಡಿಸಲಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!