ಬಾಗಲಕೋಟೆ: ಕ್ರಿಕೆಟ್ ಬೆಟ್ಟಿಂಗ್‌ಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಅದನ್ನು ತೀರಿಸಲಾಗದೆ ಸ್ಥಳೀಯ ಯುವ ವ್ಯಾಪಾರಿಯೊಬ್ಬ ನದಿಗೆ ಹಾರಿದ ಘಟನೆ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ನಡೆದಿದೆ.ಸೈಯದ್ ವಾಳದ (38) ನದಿಗೆ ಹಾರಿದ ಹಣ್ಣಿನ ವ್ಯಾಪಾರಿ.
ಸೈಯದ್ ವಾಳದ ಬಾಗಲಕೋಟೆ ಜಿಲ್ಲೆಯ ಕಾತರಕಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಹಾರಿದ್ದಾನೆ. ಘಟಪ್ರಭಾ ನದಿಗೆ ಹಾರಿದ ವ್ಯಕ್ತಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರಿಂದ ಹುಡುಕಾಟ ಆರಂಭಿಸಲಾಗಿದೆ.