';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕಾರವಾರ: ಸಾಂಬಾರ್ ಸರಿಯಿಲ್ಲ ಅಂತ ಮದ್ಯದ ನಶೆಯಲ್ಲಿ ಗುಂಡು ಹಾರಿಸಿ ಹೆತ್ತ ತಾಯಿ ಮತ್ತು ತಂಗಿಯನ್ನು ಯುವಕ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದ ಕುಡಗೋಡು ಬಳಿ ಸಂಭವಿಸಿದೆ.
ತಾಯಿ ಪಾರ್ವತಿ ನಾರಾಯಣ ಹಸ್ಲರ್ (42) ಮತ್ತು ತಂಗಿ ರಮ್ಯಾ ನಾರಾಯಣನನ್ನು(19) ಮಂಜುನಾಥ್ ಎಂಬುವವನು ಕೊಲೆ ಮಾಡಿದ್ದಾನೆ. ಸದ್ಯ ಸಿದ್ದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
24 ವರ್ಷದ ಮಂಜುನಾಥ ಹಸ್ಲರ್ಗೆ ವಿಪರೀತ ಕುಡಿತದ ಚಟ. ನಿನ್ನೆ ಕೂಡಾ ಕುಡಿದು ಬಂದು ಸಾಂಬಾರ್ ಸರಿಯಾಗಿಲ್ಲ ಎಂದು ಮನೆಯಲ್ಲಿ ಜಗಳವಾಡಿದ್ದಾನೆ. ಕುಡಿದ ಅಮಲಿನಲ್ಲೇ ಜಗಳವಾಡಿ ನಾಡ ಬಂದೂಕಿನಿಂದ ಗುಂಡು ಹಾರಿಸಿ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ್ದಾನೆ.
ಕುಡುಕ ಆರೋಪಿ ಮಗನ ವಿರುದ್ಧ ತಂದೆ ನಾರಾಯಣ ಹಸ್ಲರ್ ಪೊಲೀಸರಿಗೆ ದೂರು ನೀಡಿದ್ದು, ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧಿಸಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.