ಹಾಸನ : ಹಾಸನದಿಂದ ಮಂಗಳೂರಿಗೆ ಸಿಮೆಂಟ್ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಮಾರ್ಣಹಳ್ಳಿ ಸಮೀಪದ ಕೆಂಪುಹೊಳೆ ಹತ್ತಿರ ಪಲ್ಟಿಯಾಗಿದ್ದು, ಚಾಲಕ ಮಣ್ಣಿನ ಒಳಗಡೆ ಸಿಲುಕಿ ದಾರುಣ ಸಾವನ್ನಪ್ಪಿದ್ದಾನೆ.
ಹಾಸನದಿಂದ ಮಂಗಳೂರಿಗೆ ಸಿಮೆಂಟ್ ಸಾಗಾಟ ಮಾಡುತ್ತಿದ್ದ ಟ್ರಕ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಗುಡ್ಡಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗುಡ್ಡ ಕುಸಿತವಾಗಿದ್ದು, ಚಾಲಕ ಮಣ್ಣಿನೊಳಗಡೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ.
ಗಂಭೀರ ಗಾಯಗೊಂಡ ಲಾರಿ ಕ್ಲೀನರ್’ನನ್ನು ಹಾಸನ ಆಸ್ಪತ್ರೆಗೆ ಸಾಗಿಸಲಾಗಿದೆ.ಹೆಚ್ಚಿನ ವಿವರ ತಿಳಿದು ಬಂದಿಲ್ಲ.