ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2021 ರ ಅಂತಿಮ ಪಂದ್ಯ ಮುಗಿದ ಬಳಿಕ ಆರೆಂಜ್ ಕ್ಯಾಪ್ ವಿಜೇತರನ್ನು ನಿರ್ಧರಿಸಲಾಯಿತು. ರುತುರಾಜ್ ಗಾಯಕ್ವಾಡ್ ಅತ್ಯಧಿಕ ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದಾರೆ.
ಆಶ್ಚರ್ಯಕರ ಸಂಗತಿಯೆಂದರೆ ರುತುರಾಜ್ ಕೇವಲ 2 ರನ್ಗಳ ಅಂತರದಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. 633 ರನ್ ಗಳಿಸಿದ ತಮ್ಮದೇ ತಂಡದ ಸಹ ಆಟಗಾರ ಫಾಫ್ ಡು ಪ್ಲೆಸಿಸ್ ಅವರಿಗಿಂತ 2 ರನ್ ಹೆಚ್ಚು ಗಳಿಸುವ ಮೂಲಕ(635) ಆರೆಂಜ್ ಕ್ಯಾಪ್ ಅನ್ನು ತನ್ನದಾಗಿಸಿಕೊಂಡಿದ್ದಾರೆ.ಅಂತಿಮ ಪಂದ್ಯದಲ್ಲಿ, ಡು ಪ್ಲೆಸಿಸ್ 59 ಎಸೆತಗಳಲ್ಲಿ 86 ರನ್ ಗಳಿಸಿ ಕೇವಲ 2 ರನ್ಗಳಿಂದ ಆರೆಂಜ್ ಕ್ಯಾಪ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಡು ಪ್ಲೆಸಿಸ್ ಕೊನೆಯ ಎಸೆತದಲ್ಲಿ ಔಟಾಗದಿದ್ದರೆ ಅವರು ಭಾರಿಸಿದ ಬಾಲ್ 6 ರನ್ಗಳಿಗೆ ಹೋಗಿದ್ದರೆ, ಆರೆಂಜ್ ಕ್ಯಾಪ್ ಅವರದಾಗುತ್ತಿತ್ತು. ಆದರೆ ಇನ್ನಿಂಗ್ಸ್’ನ ಕೊನೆಯ ಬಾಲ್’ನಲ್ಲಿ ಡು ಪ್ಲೆಸಿಸ್ ಔಟ್ ಆಗಿ ನಿರ್ಗಮಿಸಿದ್ದಾರೆ.
ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ರುತುರಾಜ್:ಹರ್ಷ ಭೋಗ್ಲೆ ಅವರೊಂದಿಗಿನ ಸಂಭಾಷಣೆಯಲ್ಲಿ ರುತುರಾಜ್, ಡು ಪ್ಲೆಸಿಸ್ ಕೊನೆಯ ಬಾಲ್‌ನಲ್ಲಿ ಸಿಕ್ಸರ್ ಬಾರಿಸಬೇಕೆಂದು ನಾನು ಬಯಸಿದ್ದೆ ಏಕೆಂದರೆ ಅವರು ತಂಡಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು ಎಂದರು.ಆದರೆ ಆರೆಂಜ್ ಕ್ಯಾಪ್ ಗೆಲ್ಲುವ ಮೂಲಕ ರಿತುರಾಜ್ ಗಾಯಕ್ವಾಡ್ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಐಪಿಎಲ್ ಇತಿಹಾಸದಲ್ಲಿ ಆರೆಂಜ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ರುತುರಾಜ್ ಕೇವಲ 24 ವರ್ಷ, 257 ದಿನಗಳ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. 24 ವರ್ಷ, 328 ದಿನಗಳ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಶಾನ್ ಮಾರ್ಷ್ ಅವರ ದಾಖಲೆಯನ್ನು ಗಾಯಕ್ವಾಡ್ ಮುರಿದಿದ್ದಾರೆ. ವಿರಾಟ್ ಕೊಹ್ಲಿ 27 ವರ್ಷ, 206 ದಿನಗಳ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಅನ್ನು ವಶಪಡಿಸಿಕೊಂಡಿದ್ದರು.