';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಗಂಗೊಳ್ಳಿ: ತೆಂಗಿನಮರ ಹತ್ತಿ ತೆಂಗಿನಕಾಯಿ ಕೊಯುತ್ತಿದ್ದಾಗ ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಕುಂದಾಪುರದ ಆಲೂರು ಗ್ರಾಮದ ಮೂಡುಬೆಟ್ಟು ಕಳಿ ಎಂಬಲ್ಲಿ ನಿನ್ನೆ ನಡೆದಿದೆ.
ಮೃತ ವ್ಯಕ್ತಿಯನ್ನು ರಾಮ ಗೌಡ (45) ಎಂದು ಗುರುತಿಸಲಾಗಿದೆ. ಅ.11ರಂದು ರಾಮ ಗೌಡ ಎಂಬುವವರು ತನ್ನ ಮನೆಯ ಸಮೀಪ ತೆಂಗಿನ ಮರವನ್ನು ಹತ್ತಿ ತೆಂಗಿನ ಕಾಯಿಯನ್ನು ಕೊಯ್ಯುವಾಗ ಆಕಸ್ಮಿಕವಾಗಿ ಕಾಲು ಜಾರಿ 25 ಅಡಿ ಮೇಲಿನಿಂದ ಕೆಳಗೆ ನೆಲದ ಮೇಲೆ ಬಿದ್ದ ಪರಿಣಾಮ ಕುತ್ತಿಗೆಗೆ ತೀವ್ರ ಜಖಂ ಗೊಂಡಿತ್ತು. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ನಿನ್ನೆ ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.