';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ನವದೆಹಲಿ: ಇದೇ ಬರುವ 24ರಂದು ನಡೆಯುವ ಟಿ-20 ವಿಶ್ವಕಪ್ನಲ್ಲಿ ಭಾರತ-ಪಾಕಿಸ್ಥಾನ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದಲ್ಲಿ ಸೈನಿಕರ, ನಾಗರಿಕರ ನಿರಂತರ ಹತ್ಯೆಯಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಜೊತೆ ಆಟ ಆಡಿ ನಮ್ಮ ವಿರುದ್ಧವೇ ಅವರು ಮದ್ದು ಗುಂಡು ಹಾರಿಸ್ತಿರೋದು ಸರ್ಕಾರಕ್ಕೆ ಗೊತ್ತಿಲ್ಲವೇ?ಮೊದಲು ಆಟವಾಡಲು ಅನುಮತಿ ಕೊಟ್ಟಿದ್ದೆ ತಪ್ಪು. ಅವರ ಜೊತೆ ಕ್ರಿಕೆಟ್ ಆಡೋದು ಸ್ವಾಭಿಮಾನದ ಶೂನ್ಯತೆ ತೋರುತ್ತೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.
ತಾಲಿಬಾನ್ ಗೆ ಸಪೋರ್ಟ್ ಮಾಡುವ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡ್ತೀರಾ?
ರಾಕ್ಷಸರು ರಾಕ್ಷಸರೇ ಭಯೋತ್ಪಾದಕರು ಭಯೋತ್ಪಾದಕರೆ. ಅವರಿಗೆ ಅಮೃತ ಕುಡಿಸಿದ್ರೂ ವಿಷವನ್ನೇ ಕೊಡ್ತಾರೆ.ಕ್ರಿಕೆಟ್ ಆಟಗಾರರಿಗೆ ದೇಶದ ಸೈನಿಕರ ಬಗ್ಗೆ ಕರುಣೆ ಇದೆಯಾ? ಭಯೋತ್ಪಾದನೆ ನಿಲ್ಲುವವರೆಗೂ ಆಟ ಆಡೋದಿಲ್ಲ ಅಂತಾ ಹೇಳಬೇಕಿತ್ತು ಅಲ್ವಾ ಎಂದು ಮುತಾಲಿಕ್ ಕಿಡಿಕಾರಿದ್ದಾರೆ.