dtvkannada

'; } else { echo "Sorry! You are Blocked from seeing the Ads"; } ?>

ಅಸ್ಸಾಂ: ಅಶ್ಲೀಲ ವಿಡಿಯೋಗಳನ್ನು ನೋಡಲು ನಿರಾಕರಿಸಿದ ಆರು ವರ್ಷ ಪ್ರಾಯದ ಬಾಲಕಿಯನ್ನು ಮೂರು ಅಪ್ರಾಪ್ತ ವಯಸ್ಕ ಹುಡುಗರು ಕೊಲೆಗೈದ ಆಶ್ಚರ್ಯಕರ ಘಟನೆ ಅಸ್ಸಾಂ ರಾಜ್ಯದ ನಾಗೂನ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಬಾಲಕರನ್ನು ಬಂಧಿಸಿದ್ದಾರೆ. ಆರೋಪಿಗಳು 8 ರಿಂದ 11 ವರ್ಷದೊಳಗೆ ಬಾಲಕರು ಎಂದು ತಿಳಿದು ಬಂದಿದೆ. ಬಾಲಕಿಗೆ ನೀಲಿಚಿತ್ರ ವೀಕ್ಷಿಸುವಂತೆ ಒತ್ತಾಯಿಸಿ, ಬಲಿಕೆ ಆಕೆಯನ್ನು ಕೊಲೆ ಮಾಡಿ ಮೃತದೇಹವನ್ನು ಶೌಚಾಲಯದಲ್ಲಿ ಬಿಟ್ಟು ಹೋಗಿದ್ದಾರೆ.
ಈ ಘಟನೆಯು ನಾಗೂನ್ ಜಿಲ್ಲೆಯ ಬಲಿಬತ್ ಬಳಿಯ ಕಲ್ಲು ಕ್ರಶರ್ ಬಳಿ ನಡೆದಿದೆ.

'; } else { echo "Sorry! You are Blocked from seeing the Ads"; } ?>

6 ವರ್ಷದ ಬಾಲಕಿಯ ಹತ್ಯೆಯ ಪ್ರಕರಣವನ್ನು 24 ಗಂಟೆಗಳಲ್ಲಿ ಪರಿಹರಿಸಲಾಗಿದೆ ಎಂದು ನಾಗಾಂವ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಮಿಶ್ರಾ ಹೇಳಿದ್ದಾರೆ.

8 ರಿಂದ 11 ವರ್ಷದೊಳಗಿನ ಮೂವರು ಅಪ್ರಾಪ್ತ ಬಾಲಕರು 6 ವರ್ಷದ ಬಾಲಕಿಯನ್ನು ಬರ್ಬರವಾಗಿ ಕೊಂದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಒಬ್ಬ ಆರೋಪಿಯ ತಂದೆ ಇಡೀ ಘಟನೆಯನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ. ನಾವು ಆತನನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಆನಂದ್ ಮಿಶ್ರಾ ಹೇಳಿದರು.

'; } else { echo "Sorry! You are Blocked from seeing the Ads"; } ?>

“ಆರೋಪಿ ಅಪ್ರಾಪ್ತ ವಯಸ್ಕರು ಅಶ್ಲೀಲ ವ್ಯಸನಿಗಳಾಗಿದ್ದಾರೆ. 11 ವರ್ಷದವನು ತನ್ನ ತಂದೆಯ ಮೊಬೈಲ್ ಫೋನ್ ಅನ್ನು ಅಶ್ಲೀಲ ತುಣುಕುಗಳನ್ನು ವೀಕ್ಷಿಸಲು ಬಳಸುತ್ತಿದ್ದ ಎಂದು ತನಿಖೆಯ ಸಮಯದಲ್ಲಿ ತಿಳಿದುಬಂದಿದೆ. ಮೊಬೈಲ್ ಫೋನ್ ವಶಪಡಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!