ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ (ರಿ) ಸರಳಿಕಟ್ಟೆ ಸೆಂಟರ್ ಇದರ ಮಹಾ ಸಭೆ 21-10-2020ರಂದು ಸರಳಿಕಟ್ಟೆ ಮದ್ರಸ ಹಾಲ್ ನಲ್ಲಿ ಜಿ ಎಂ ಕುಂಞಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಗ್ರಿಬ್ ನಮಾಝಿನ ನಂತರ ಮಸೀದಿಯಲ್ಲಿ ಮೌಲಿದ್ ಪಾರಾಯಣ ಬೇನಪ್ಪು ಅಬೂಬಕ್ಕರ್ ಮದನಿಯವರ ನೇತೃತ್ವದಲ್ಲಿ ನಡೆದ ನಂತರ ಮದ್ರಸ ದಲ್ಲಿ ಸಭಾ ಕಾರ್ಯಕ್ರಮದ ದುಃಅ ಅಬೂಬಕ್ಕರ್ ಮದನಿ ಬೇನಪ್ಪು ನಿರ್ವಹಿಸಿದರು. ಬಳಿಕ ಬಂದ ಅತಿಥಿ ಗಳನ್ನು ಅಬ್ದುರ್ರಝಾಕ್ ಬೈಲಮೇಲು ಸ್ವಾಗತಿಸಿದರು. ಸಭೆಯ ಉದ್ಘಾಟನೆಯನ್ನು ಅಶ್ರಫ್ ಸಖಾಫಿ ಮೂಡಡ್ಕ ನೆರವೇರಿಸಿದರು. ವರದಿ ಮತ್ತು ಲೆಕ್ಕ ಪತ್ರ ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಸಖಾಫಿ ಕನ್ಯಾಡಿ ಸಭೆಯಲ್ಲಿ ವಾಚಿಸಿದರು. ಸೇರಿದ ಸಭಿಕರು ಒಂದು ತಕ್ಬೀರ್ ದ್ವನಿಯೊಂದಿಗೆ ಅಂಗೀಕರಿಸಿದರು.
ಸಭೆಯನ್ನುದ್ದೇಶಿಸಿ ವೀಕ್ಷರಾದ ಉಸ್ಮಾನ್ ಜೌಹರಿ ನೆಲ್ಯಾಡಿ ಹಾಗೂ ಕಾಸಿಂ ಪದ್ಮುಂಜ ಮಾತನಾಡಿ ಸೆಂಟರಿನ ಕಾರ್ಯ ವೈಖರಿಯನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಅಬ್ದುಲ್ ಹಮೀದ್ ಹಾಜಿ ಸಿ ಕೆ ಉಸ್ತಾದ್ ನೆಲ್ಯಾಡಿ ಬೇನಪ್ಪು, ಮದನಿ ಮಿಸ್ಬಾಹಿ ಉಸ್ತಾದ್, ಕರೀಮ್ ಹಾಜಿ, ಅಬ್ದುಲ್ ಹಮೀದ್ ಉಸ್ತಾದ್ ಅಜಿಲಮೊಗರು ಉಪಸ್ಥತಿದ್ದರು.ಹಳೆಯ ಕಮಿಟಿಯನ್ನು ಬರ್ಖಾಸ್ತು ಮಾಡಿ ಹೊಸ ಕಮಿಟಿ ರಚಿಸಲಾಯಿತು.
ಅಧ್ಯಕ್ಷರಾಗಿ ಜಿ ಎಮ್ ಕುಂಞಿ, ಉಪಾಧ್ಯಕ್ಷರಾಗಿ ಅಶ್ರಫ್ ಸಖಾಫಿ ಮೂಡಡ್ಕ, ಪ್ರದಾನ ಕಾರ್ಯದರ್ಶಿಯಾಗಿ ಸೂಫಿ, ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ಸಖಾಫಿ ಕನ್ಯಾಡಿ, ದಅವ ಕಾರ್ಯದರ್ಶಿಯಾಗಿ ನಾಸಿರ್ ಸರಳಿಕಟ್ಟೆ, ಇಸಾಬ ಕಾರ್ಯದರ್ಶಿಯಾಗಿ ಅಶ್ರಫ್ ಜೋಗಿಬೆಟ್ಟು, ಸೋಶಿಯಲ್ ಕಾರ್ಯದರ್ಶಿಯಾಗಿ ರಫೀಕ್ ಬಾಜಾರು ಹಾಗೂ 19 ಸದಸ್ಯರನ್ನು ಆಯ್ಕೆ ಮಾಡಲಾಯಿತು.ಮುಹಮ್ಮದ್ ಸಖಾಫಿ ಕನ್ಯಾಡಿ ಯವರಿಂದ ಮೂರು ಸ್ವಲಾತಿನೊಂದಿಗೆ ಸಭೆ ಮುಕ್ತಾಯಗೊಳಿಸಲಾಯಿತು. ಕೊನೆಯಲ್ಲಿ ತಬರ್ರುಕ್ ವಿತರಿಸಲಾಯಿತು .