ಬಸ್ಸ್ ಓಡಿಸಿಕೊಂಡಿದ್ದ ಜಮೀರ್ ಅಹ್ಮದ್ ನನ್ನು ಕರೆದುಕೊಂಡು ಬಂದು ಶಾಸಕ ನಾಗಿ ಮಾಡಿದ್ದು ನಾನು- ಕುಮಾರಸ್ವಾಮಿ ವಾಗ್ದಾಳಿ
ಹಾವೇರಿ: ಬಸ್ ಓಡಿಸಿಕೊಂಡಿದ್ದವನನ್ನು ಕರೆದುಕೊಂಡು ಬಂದು ಶಾಸಕ ಮಾಡಿದೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹಾನಗಲ್ ಹಾಗೂ ಸಿಂಧಗಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ನಾಯಕರುಗಳ ವಾಕ್ಸಮರ ಮುಂದುವರಿದಿದೆ. ಅಂತೆಯೇ ಇದೀಗ ಹೆಚ್‍ಡಿಕೆ ಅವರು ಜಮೀರ್ ವಿರುದ್ಧ ಕಿಡಿಕಾರಿದ್ದಾರೆ. ಎಲ್ಲೋ ಬಸ್ ಓಡಿಸುತ್ತಿದ್ದವನನ್ನು ಕರ್ಕೊಂಡು ಬಂದು ಶಾಸಕನನ್ನಾಗಿ ಮಾಡಿದೆ ಎಮದು ಹೇಳುವ ಮೂಲಕ ಜಮೀರ್ ಅಹ್ಮದ್ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.
ಚಾಮರಾಜಪೇಟೆಯಲ್ಲಿ ಮುಸ್ಲಿಂ ಹುಡುಗನಿಗೆ ಟಿಕೆಟ್ ಕೊಟ್ಟು ಶಾಸಕನಾಗಿ ಮಾಡಿದೆ. ಆವಾಗ ಸಿದ್ದರಾಮಯ್ಯ ಎಲ್ಲಿ ಹೋಗಿದ್ದರು..? ಎಂದು ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಕೂಡ ಹೆಚ್‍ಡಿಕೆ ಗರಂ ಆಗಿದ್ದಾರೆ.